ಸಚಿವರ ಮಾತಿಗೂ ಕಿಮ್ಮತ್ತು ಕೊಡದ ಅಧಿಕಾರಿಗಳು

Bharath Vaibhav
ಸಚಿವರ ಮಾತಿಗೂ ಕಿಮ್ಮತ್ತು ಕೊಡದ ಅಧಿಕಾರಿಗಳು
WhatsApp Group Join Now
Telegram Group Join Now

ಸೇಡಂ: ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ಡಾ.ಬಿ,ಆರ್,ಅಂಬೇಡ್ಕರ ಮೂರ್ತಿಯ ವಿಷಯವಾಗಿ ಹಲವು ವರ್ಷಗಳ ಬೇಡಿಕೆಯಾಗಿತ್ತು.

ಅದರಂತೆ ಸಚಿವರು ಕಾಮಗಾರಿಯ ಹಣವನ್ನು ಸಹ ನೀಡಿ ಲ್ಯಾಂಡ್ ಅರ್ಮಿ ಅಧಿಕಾರಿಯಾದ ನೀಲಕಂಠ ಅವರಿಗೆ ವಹಿಸಿಕೊಟ್ಟಿರುತ್ತಾರೆ. ಶಂಕುಸ್ಥಾಪನೆ ಮಾಡಿ ಒಂದು ವರ್ಷ ಕಳೆದರೂ ಕಾಮಗಾರಿ ಪ್ರಾರಂಭ ಮಾಡದೆ ಉದ್ದೇಶ ಪೂರ್ವಕವಾಗಿ ಅಧಿಕಾರಿಗಳು ರಾಷ್ಟ್ರೀಯ ನಾಯಕರಿಗೆ ಅಪಮಾನ ಮಾಡುತಿದ್ದಾರೆ.

ಈ ವಿಷಯವನ್ನು ಸಚಿವರ ಗಮನಕ್ಕೂ ಸಾಕಷ್ಟು ಬಾರಿ ತರಲಾಗಿದೆ, ಸಚಿವರು ಸಹ ಸ್ಪಂದಿಸಿ ಅಧಿಕಾರಿಗಳಿಗೆ ಸೂಚಿಸಿ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭ ಮಾಡಿ ಅಂತ ಹೇಳಿದರು ಸಹ ಅಧಿಕಾರಿಗಳು ತಾಕಿತು ಮಾಡಿರುತ್ತಾರೆ. ಅಧಿಕಾರಿಗಳು ಕಾಮಗಾರಿ ಪ್ರಾರಂಭ ಮಾಡದೆ ದುರಹಂಕಾರಿ ದೋರಣೆ ತೋರುತ್ತಿದ್ದಾರೆ.

ಹಾಗಾಗಿ ಉದ್ದೇಶ ಪೂರ್ವಕವಾಗಿ ಬಾಬ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನ ಮಾಡುತ್ತಿರುವ ಲ್ಯಾಂಡ್ ಆರ್ಮಿ ಅಧಿಕಾರಿ ನೀಲಕಂಠ ಮತ್ತು ಪ್ರವೀಣ ರಾಥೋಡ್ ಅವರನ್ನು ಶೀಘ್ರವಾಗಿ ಅಮಾನತ್ತು ಮಾಡಬೇಕಾಗಿ ಸಚಿವರಿಗೆ ಛಲವಾದಿ ಸಮಾಜ ವತಿಯಿಂದ ಮನವಿ ಮಾಡುತ್ತಿದ್ದೇವೆ ಎಂದು ಛಲವಾದಿ ಸಮಾಜ ಕೋಡ್ಲಾ ವಲಯ ಅಧ್ಯಕ್ಷರಾದ ಮೌನೇಶ್ ರೆಬ್ಬದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ವರದಿ : ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!