ಹುಕ್ಕೇರಿ: ರಾಜ್ಯದಲ್ಲಿ ಆರ್ಡರ್ ಲೀ ಪದ್ದತಿ ಇನ್ನೂ ಜೀವಂತವಾಗಿದ್ದು ಇದಕ್ಕೆ ಸಾಕ್ಷಿ ಎನ್ನುವಂತೆ ಕಚೇರಿಯ ಸಿಬ್ಬಂದಿಯಿಂದ ಹುಕ್ಕೇರಿ ತಹಶೀಲ್ದಾರ ಮನೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಂಜುಳಾ ನಾಯಕ ಅವರ ಸರ್ವಾಧಿಕಾರಿ ಧೋರಣೆ ಕಚೇರಿಯ ಸಿಬ್ಬಂದಿಗಳು ಮನೆಗೆಲಸ ಮಾಡುವಂತಾಗಿದೆ.
ಹುಕ್ಕೇರಿ ತಹಶೀಲ್ದಾರ ಕಚೇರಿಯ ಇಬ್ಬರು ಸರಕಾರಿ ಮಹಿಳಾ ಸಿಪಾಯಿಗಳನ್ನು ಮನೆಗೆಲಸಕ್ಕೆ ತಹಶೀಲ್ದಾರ ಬಳಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ.
ಸಿಬ್ಬಂದಿಗಳನ್ನು ತಹಶೀಲ್ದಾರ ಕ್ವಾಟರ್ಸಗೆ ಕರೆಸೆಕೊಂಡು ಬಟ್ಟೆ ತೊಳೆಯುವುದು, ಮನೆ ಕ್ಲೀನ್ ಮಾಡಿಸುವ ಕೆಲಸವನ್ನ ತಹಶೀಲ್ದಾರ ಮಂಜುಳಾ ನಾಯಕ ಅವರು ಮಾಡುತ್ತಿದ್ದಾರೆ. ಸಿಬ್ಬಂದಿಗಳು ಮನೆ ಕೆಲಸ ಮಾಡುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು ತಹಶೀಲ್ದಾರ ಅವರ ಸರ್ವಾಧಿಕಾರಿ ಧೋರಣೆ ಬಗ್ಗೆ ಸಾರ್ವಜನಿಕರು ಆಕ್ರೊಶ ವ್ಯಕ್ತವಾಗಿದೆ. ತಹಶೀಲ್ದಾರ ಮೇಲೆ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹಿಸಿದ್ದಾರೆ.
ವರದಿ: ರಾಜು ಮುಂಡೆ