ಚಿಕ್ಕೋಡಿ :
ಚಿಕ್ಕೋಡಿಯ ಹಾಲಟ್ಟಿಯಲ್ಲಿ ಓಂಕಾರ್ ಚನ್ನವರ 9 ನೇ ಕ್ಲಾಸದ ಓದುತ್ತಿರುವ ಓಂಕಾರ ಅದ್ಭುತ ಕಲಾ ಕುಶಲ.
ಹೌದು ಚಿಕ್ಕೋಡಿಯ ಹಾಲಟ್ಟಿಯಲ್ಲಿ ಓಂಕಾರ್ ಸತೀಶ್ ಚನ್ನವರ್ ಎಂಬುವ 9 ನೇ ಕ್ಲಾಸಿನಲ್ಲಿ ಓದುತ್ತಿರುವ ಒಬ್ಬ ವಿದ್ಯಾರ್ಥಿ ಆಯುಧೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾದ ನಂತರ ಅದರಂತೆ ಪ್ರತಿರೂಪವಾಗಿ ಒಂದು ರಾಮಮಂದಿರವನ್ನು ತಯಾರಿಸಿದ್ದಾನೆ.
ಈ ರಾಮಮಂದಿರವನ್ನು ರಟ್ಟು ಕಾಗದ ಹಾಗೂ ಸ್ಟಿಕ್ ಗಳಿಂದ ಗಮ್ಮಿನ ಮೂಲಕ ಅಂಟಿಸಿ ಅದ್ಭುತವಾದ ರಾಮಮಂದಿರನು ತಯಾರಿಸಿದ್ದಾನೆ.
ಓಂಕಾರ್ ಚನ್ನವರ್ ಈ ವಿದ್ಯಾರ್ಥಿ ನಮ್ಮ ವಾಹಿನಿ ಯೊಂದಿಗೆ ಮಾತನಾಡಿ ನಾನು ಐದನೇ ಕ್ಲಾಸಿನಲ್ಲಿ ಇದ್ದಾಗಿನಿಂದ ಇಂತಹ ಅಭ್ಯಾಸಗಳು ನನಗೆ ಮೂಡುತ್ತಿವೆ ಮತ್ತು ಯಾವುದಾದರೂ ಒಂದು ಚಿತ್ರಕಲೆಯನ್ನು ನೋಡಿದರೆ ಅದನ್ನು ಪ್ರತಿರೂಪವಾಗಿ ಬಿಡಿಸುತ್ತೇನೆ ಈಗಾಗಲೇ ಹಲವು ರಾಕೆಟ್ ಚಂದ್ರನ ಮೇಲೆ ಹೋಗಿರುವುದನ್ನು ಹಾಗೂ ಕೆಲವು ಚಿತ್ರಕಲೆಗಳನ್ನು ಬಿಡಿಸಿದ್ದೇನೆ ಎಂದಿದ್ದಾನೆ.
ನನಗೆ ನನ್ನ ಫ್ಯಾಮಿಲಿಯವರು ಅಜ್ಜಿ ತಂದೆ ತಾಯಿ ಅತ್ತೆ ಹಾಗೂ ಶಾಲಾ ಶಿಕ್ಷಕರ ಪ್ರೋತ್ಸಾಹ ದಿಂದ ಈ ರೀತಿಯಾಗಿ ನಾನು ಒಂದು ಅದ್ಭುತವಾದ ಕಲಾ ಕುಶಲದಲ್ಲಿ ತೊಡಗಬೇಕೆಂಬುದನ್ನು ನಿಶ್ಚಯಿಸಿದ್ದೇನೆ ಎಂದಿದ್ದಾನೆ.
ಈ ಕಲಾ ಕುಶಲ ಶ್ರೀರಾಮ ಮಂದಿರವನ್ನು ನೋಡಲು ಜನರು ಕೂಡ ಉತ್ಸಾಹದಿಂದ ಬರುಸುತ್ತಿದ್ದಾರೆ ಹಾಗೂ ಇನ್ನಷ್ಟು ಇದರಲ್ಲಿ ಬೆಳೆದು ನಾನು ಏನಾದರೂ ಒಂದು ದೊಡ್ಡ ಸಾಧನೆಯನ್ನು ಬಯಸಬೇಕು ಎಂದಿದ್ದಾನೆ.
ಇನ್ನು ಈಚೆನ್ನವರು ಫ್ಯಾಮಿಲಿ ಅಜ್ಜಿ ಸ್ನೇಹಲತಾ ಚೆನ್ನವರ್, ತಂದೆ ಸತೀಶ್ ಚನ್ನವರ್, ತಾಯಿ ಅನುಸಯಾ ಚೆನ್ನವರ್, ಅತ್ತೆ ವಕೀಲರಾದ ಲಲಿತಾ ಚೆನ್ನವರ್, ಹಾಗೂ ಸಿಟಿ ಸೊಸೈಟಿ ಜಿ ಎಸ್ ಇಂಗ್ಲಿಷ್ ಮೀಡಿಯಮ್ ಸ್ಕೂಲ್ ಚಿಕ್ಕೋಡಿ ಪ್ರಿನ್ಸಿಪಾಲರು ಹಾಗೂ ಶಿಕ್ಷಕರಾದ ಎಂ ಎಸ್ ಮಲಬಾದೆ, ವಿಶ್ವನಾಥ್ ಕೋರೆ, ಇವರು ಓಂಕಾರನಿಗೆ ಈ ಕಲಾ ಕುಶಲದ ಬಗ್ಗೆ ಶುಭ ಹಾರೈಸಿದ್ದಾರೆ.
ವರದಿ : ರಾಜು ಮುಂಡೆ