Ad imageAd image

ನವೆಂಬರ್ 11 ರಂದು ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತ ಪ್ರೊ.ಶಿವರಾಜು ಅವರಿಗೆ ಅಭಿನಂದನಾ ಸಮಾರಂಭ

Bharath Vaibhav
ನವೆಂಬರ್ 11 ರಂದು ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತ ಪ್ರೊ.ಶಿವರಾಜು ಅವರಿಗೆ ಅಭಿನಂದನಾ ಸಮಾರಂಭ
WhatsApp Group Join Now
Telegram Group Join Now

ತುರುವೇಕೆರೆ: –ಗಾಂಧಿ ಚಿಂತಕರ ವೇದಿಕೆ ವತಿಯಿಂದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕರ್ನಾಟಕ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪುರಸ್ಕೃತ ಪ್ರೊ.ಜಿ.ಬಿ.ಶಿವರಾಜು ಅವರಿಗೆ ಅಭಿನಂದನಾ ಸಮಾರಂಭವನ್ನು ನವೆಂಬರ್ 11 ರಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆಯ ವಿ.ಟಿ.ವೆಂಕಟರಾಮಯ್ಯ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರೊ. ಶಿವರಾಜ್ ಅವರು ತುರುವೇಕೆರೆ ತಾಲ್ಲೂಕಿನ ಗೊಟ್ಟಿಕೆರೆ ಗ್ರಾಮದವರಾಗಿದ್ದು, ತಾಲ್ಲೂಕಿನವರಿಗೆ ದೊಡ್ಡ ಮಟ್ಟದ ಪ್ರಶಸ್ತಿ ಬಂದಿರುವುದು ತಾಲ್ಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ. ಇಂತಹ ಸಾಧಕರನ್ನು ಅಭಿನಂದಿಸುವುದು, ತನ್ಮೂಲಕ ಗಾಂಧಿ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಅಭಿನಂದನಾ ಸಮಾರಂಭದ ದಿವ್ಯ ಸಾನಿದ್ಯವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ವಹಿಸಲಿದ್ದು, ಶಾಸಕ ಎಂ.ಟಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಯುವಕರಿಗೆ ಗಾಂಧಿ ವಿಚಾರಗಳ ಪ್ರಸ್ತುತತೆ ಬಗ್ಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವುಡೆ.ಪಿ.ಕೃಷ್ಣ ಉಪನ್ಯಾಸ ನೀಡಲಿದ್ದು, ನಿವೃತ್ತ ಪ್ರಧಾನ ಕಾರ್ಯದರ್ಶಿ ಶಂಕರಲಿಂಗೇಗೌಡರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಪೌರಕಾರ್ಮಿಕರಿಗೆ ವಸ್ತ್ರವನ್ನು ಮಾಜಿ ಶಾಸಕರಾದ ಮಸಾಲಾ ಜಯರಾಮ್, ಬೆಮೆಲ್ ಕಾಂತರಾಜು ವಿತರಿಸಲಿದ್ದು, ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ್, ಎಸ್.ರುದ್ರಪ್ಪ, ಹೆಚ್.ಬಿ.ನಂಜೇಗೌಡ, ಸ್ಮಾರಕ ನಿಧಿ ಕಾರ್ಯಾಧ್ಯಕ್ಷ ವಿಶುಕುಮಾರ್, ಕಾರ್ಯದರ್ಶಿ ನರೇಂದ್ರ, ನಿವೃತ್ತ ನೋಂದಣಿ ಮಹಾಪರಿವೀಕ್ಷಕಿ ಡಾ.ಬಿ.ಆರ್.ಮಮತ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ. ತಾಲ್ಲೂಕಿನ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.

ಗೋಷ್ಟಿಯಲ್ಲಿ ಪ್ರೊ.ಪುಟ್ಟರಂಗಪ್ಪ, ಗಾಂಧಿ ಸ್ಮಾರಕ ನಿಧಿ ಸದಸ್ಯ ನಂದೀಶ್, ಮುಖಂಡರಾದ ಹಾವಾಳ ಶಿವಕುಮಾರ್, ಶ್ರೀನಿವಾಸಗೌಡ, ಚಲನಚಿತ್ರ ನಿರ್ಮಾಪಕ ಸೋಮೇನಹಳ್ಳಿ ರಘುಕುಮಾರ್, ಬೋರಪ್ಪ, ಚಿದಾನಂದ್, ನಾಗರಾಜು ಮುಂತಾದವರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!