ಹುಮನಾಬಾದ:ಡಿಸೇಂಬರ್ 14ರಂದು ಸ್ಥಳೀಯ ಶಾಸಕರ ಹಾಗೂ ವಿಧಾನ ಪರಿಷತ್ ಸದಸ್ಯರ ಮನೆಗಳ ಮುಂದೆ ತಮಟೆ ಚಳವಳಿ ಹಮ್ಮಿಕೊಳ್ಳುವುದಾಗಿ ಮಾದಿಗ ಸಮಾಜದ ಹಿರಿಯ ಮುಖಂಡ ಪ್ರಭು ತಾಳಮಡಗಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.ಮಾದಿಗ ಸಮುದಾಯದ ಮೂರು ದಶಕದ ಬೇಡಿಕೆಯನ್ನು ಸುಪ್ರಿಂಕೋರ್ಟ್ ಬಗೆಹರಿಸಿದೆ.ಆದರೆ ರಾಜ್ಯ ಸರಕಾರ ನಮ್ಮ ಬೇಡಿಕೆಯನ್ನು ಕಡೆಗಣಿಸುತ್ತಿದೆ.
ಇತ್ತಿಚೀಗೆ ಮೂರು ತಿಂಗಳಲ್ಲಿ ಒಳ ಮೀಸಲಾತಿ ಸಮಸ್ಯೆ ಇತ್ಯರ್ಥ ಪಡಿಸುತ್ತೇವೆಂದು ಹೇಳಿದೆ.ಈಗಾಗಲೇ ಎರಡು ತಿಂಗಳು ಗತಿಸಿದೆ.ಮಾಧುಸ್ವಾಮಿ ವರದಿ ನೀಡಿದ್ದರೂ ನಾಗಮೋಹನದಾಸ ಸಮಿತಿ ರಚಿಸಿ ಮತ್ತೆ ವಿಳಂಬ ನೀತಿ ಅನುಸರಿಸುವ ಹುನ್ನಾರ ಸರಕಾರ ನಡೆಸುತ್ತಿದೆ.ಹೀಗಾಗಿ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಡಿ.16ರಂದು ಇಡೀ ರಾಜ್ಯಾದಿಂದ ಒಂದು ಲಕ್ಷಕ್ಕೂ ಅಧಿಕ ಸಮುದಾಯದವರು ಬೆಳಗಾವಿಗೆ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.ಜೈರಾಜ್ ವೈದ್ಯ,ರವಿ ನಿಜಾಂಪುರ್, ಪರಮೇಶ್ವರ ಕಾಳಮಂದರಗಿ ಕೂಡ ಮಾತನಾಡಿದರು.ಈ ಸಂದರ್ಭದಲ್ಲಿ ಗೋರಖ್ ನಿಂಬುರ್,ಪಪ್ಪುರಾಜ್ ಚತುರೆ,ರಾಜು ಕಾಣೆ, ಸೇರಿ ಅನೇಕ ಮುಖಂಡರು, ಯುವಕರು ಉಪಸ್ಥಿತರಿದ್ದರು.
ವರದಿ:ಸಜೀಶ ಲಂಬುನೋರ್