Ad imageAd image

ಅಗಷ್ಟ್ ೨೬ ರಂದು ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆ

Bharath Vaibhav
ಅಗಷ್ಟ್ ೨೬ ರಂದು ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆ
WhatsApp Group Join Now
Telegram Group Join Now

ಹುಬ್ಬಳ್ಳಿ:-ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷತ್ತ್ ಸಂಯುಕ್ತಾಶ್ರಯದಲ್ಲಿ ಅಗಷ್ಟ್ ೨೬ ರಂದು ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ ಹೇಳಿದರು.ನಗರದಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೧ ಗಂಟ ನಗರದ ಗೋಕುಲ್ ರಸ್ತೆಯ ಅಕ್ಷಯ ಪಾರ್ಕ್ ಎದುರುಗಡೆಯಿರುವ ಸಂತೆ ಮೈದಾನದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆಂದರು.

ಅಗಸ್ಟ್ ೨೫ ರಂದು ರಾತ್ರಿ ಸುಮಾರು ೧೨ ಗಂಟೆ ಸುಮಾರಿಗೆ ಆರ್.ಎನ್.ಶೆಟ್ಟಿ ರಸ್ತೆ ಚೈತನ್ಯನಗರದಲ್ಲಿರುವ ಶ್ರೀ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಶ್ರೀ ಬಾಲ ಕೃಷ್ಣನನ್ನು ತೊಟ್ಟಿಲಿನಲ್ಲಿ ಹಾಕುವ ಕಾರ್ಯಕ್ರಮ ಮಾಡಲಾಗುವುದು.ಅ. ೨೬ ರಂದು ಮುಂಜಾನೆ ೧೦ ಗಂಟೆಗೆ ಚೈತನ್ಯನಗರದಿಂದ ಸಂತೆ ಮೈದಾನದವರೆಗೂ ಚಿಕ್ಕ ಮಕ್ಕಳು ರಾಧಾಕೃಷ್ಣ ವೇಷಧಾರಿ ಧರಿಸಲಿದ್ದು, ಡೊಳ್ಳು ಕುಣಿತಗಳೊಂದಿಗೆ ಚಕ್ಕಡಿಯಲ್ಲಿ ಬೃಹತ್ ಮೆರವಣಿಗೆಯಿರಲಿದೆ. ನಂತರ ಬಹುಮಾನ ವಿತರಿಸಲಾಗುವುದೆಂದರು.

ಇನ್ನೂ ಮೊಸರು ಗಡಿಗೆ ಒಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶಾಸಕರಾದ ಅರವಿಂದ್ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಮೇಯರ್, ಉಪಮೇಯರ್ ಸೇರಿದಂತೆ ಮೊದಲಾದವರು ಆಗಮಿಸಲಿದ್ದಾರೆಂದರು.ಗೋಷ್ಠಿಯಲ್ಲಿ ಪ್ರದೀಪ್ ಶೆಟ್ಟಿ, ಕೃಷ್ಣ ಗಂಡಗಾಳೇಕರ ಪಾಲ್ಗೊಂಡಿದ್ದರು.

  ವರದಿ:- ಸುಧೀರ್ ಕುಲಕರ್ಣಿ                                                           

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!