ಸೇಡಂ:- ಪಟ್ಟಣದ ಉಡಗಿ ಕ್ರಾಸ್ ಹತ್ತಿರ ಬರುವ ಆಶ್ರಯ ಕಾಲೊನಿ 705 ರಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ನಿನ್ನೆ ನಮ್ಮ ಭಾರತ್ ವೈಭವ್ ನ್ಯೂಸ್ ವರದಿ ಮಾಡಿತ್ತು ಅದರ ಕುರಿತು ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸುತ್ತೇವೆ.
ಎಂದು ನಿನ್ನೆ ನಮ್ಮ ವರದಿಗಾರರ ಜೊತೆ ಅಧಿಕಾರಿಗಳು ಹೇಳಿದ ಹಾಗೆ ಇವತ್ತು ಆಶ್ರಯ ಕಾಲೋನಿಯಲ್ಲಿ ನೀರಿನ ಮೋಟಾರ್ ಕೂಡಿಸಿ ಜನರಿಗೆ ನೀರಿನ ಸಮಸ್ಯೆ ಇಲ್ಲದಂತೆ ಮಾಡಿದರು.
ಇನ್ನು ಕೆಲವು ಕಡೆ ನೀರಿನ ಟ್ಯಾಂಕರ್ ಮೂಲಕ ಜನರಿಗೆ ನೀರು ಕೊಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವರದಿ ಮಾಡಿದ ನಮ್ಮ ಭಾರತ್ ವೈಭವ್ ಪತ್ರಕರ್ತರಿಗೆ ಆಶ್ರಯ ಕಾಲೊನಿ ಜನರು ಹರ್ಷ ವ್ಯಕ್ತಪಡಿಸಿದರು.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.