Ad imageAd image

ಫೆಬ್ರವರಿ 13, 14 ರಂದು ರಂಗನಾಥಪುರ ಶ್ರೀ ಶನೇಶ್ವರ ಸ್ವಾಮಿ ಶಿಲಾಮೂರ್ತಿ ಪ್ರಾಣಪ್ರತಿಷ್ಠಾಪನೆ

Bharath Vaibhav
ಫೆಬ್ರವರಿ 13, 14 ರಂದು ರಂಗನಾಥಪುರ ಶ್ರೀ ಶನೇಶ್ವರ ಸ್ವಾಮಿ ಶಿಲಾಮೂರ್ತಿ ಪ್ರಾಣಪ್ರತಿಷ್ಠಾಪನೆ
WhatsApp Group Join Now
Telegram Group Join Now

ತುರುವೇಕೆರೆ : ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ರಂಗನಾಥಪುರ ಕ್ಯಾಮಸಂದ್ರ ಮಜರೆ ಗ್ರಾಮದ ಶ್ರೀ ಶನೇಶ್ವರ ಸ್ವಾಮಿ ನೂತನ ದೇವಾಲಯದ ಶಿಲಾಮೂರ್ತಿ ಪ್ರಾಣಪ್ರತಿಷ್ಠಾಪನೆ ಮತ್ತು ಗೋಪುರ ಕಳಸಾರೋಹಣ ನವಗ್ರಹ ದೇವತೆಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವವನ್ನು ಫೆಬ್ರವರಿ 13 ಮತ್ತು 14 ರಂದು ಏರ್ಪಡಿಸಲಾಗಿದೆ ಎಂದು ಗುಡಿಗೌಡರುಗಳಾದ ಶಿವಣ್ಣ, ಚಲುವೇಗೌಡ, ಉಮೇಶ್ ತಿಳಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಫೆಬ್ರವರಿ 13 ರಂದು ಶುಕ್ರವಾರ ಪುಣ್ಯಾಹ, ಗಣಪತಿ ಸ್ಥಾಪನೆ, ಗಂಗಾಪೂಜೆ, ನವಗ್ರಹ ಸ್ಥಾಪನೆ, ಕುಂಭ ಸ್ಥಾಪನೆ, ಗೋಧೂಳಿ ಲಗ್ನದಲ್ಲಿ ದೇವಾಲಯದ ದ್ವಾರ ಬಾಗಿಲ ಪೂಜೆ, ದೇವಾಲಯ ಪ್ರವೇಶ, ಗಣಪತಿ ಹೋಮ, ವಾಸ್ತು, ನವಗ್ರಹ ಹೋಮ ನಡೆಯಲಿದೆ. ಇದೇ ದಿನ ರಾತ್ರಿ 9 ಗಂಟೆಗೆ ಭಕ್ತಿ ಗೀತೆ ಗಾಯನ ಏರ್ಪಡಿಲಾಗಿದೆ ಎಂದರು.

ಫೆಬ್ರವರಿ 14 ರಂದು ಶನಿವಾರ ಶ್ರೀಶನೇಶ್ಚರ ಸ್ವಾಮಿಯ ವಿಗ್ರಹ ಪ್ರಾಣಪ್ರತಿಷ್ಟಾಪನೆ, ನವಗ್ರಹ ಪ್ರತಿಷ್ಠಾಪನೆ, ನೇತ್ರೋನ್ಮಿಲನ, ದರ್ಪಣ ದರ್ಶನ, ಅಷ್ಟಬಲಿ ಪೂಜೆ, ಬೆಳಿಗ್ಗೆ 8 ಗಂಟೆಗೆ ಅಣಪನಹಳ್ಳಿ ಶ್ರೀ ಶನೇಶ್ವರ ಮಠದ ಶ್ರೀ ಸೋಮಶೇಖರ ಮಹಾಸ್ವಾಮೀಜಿಯವರಿಂದ ಕಳಸಾರೋಹಣ, ಕುಂಭಾಭಿಷೇಕ ನಡೆಯಲಿದೆ. ನಂತರ ವಿಗ್ರಹಕ್ಕೆ ಅಭಿಷೇಕ, ಅಲಂಕಾರ, ನವಗ್ರಹ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಲಿದೆ ಬೆಳಿಗ್ಗೆ 10 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಕೆರಗೋಡಿ ರಂಗಾಪುರ ಮಠದ ಶ್ರೀ ಗುರುಪರದೇಶೀಕೇಂದ್ರ ಮಹಾಸ್ವಾಮಿಗಳು, ಅಣಪನಹಳ್ಳಿ ಶ್ರೀ ಶನೇಶ್ವರ ಮಠದ ಶ್ರೀ ಸೋಮಶೇಖರ ಮಹಾಸ್ವಾಮೀಜಿಗಳು ದಿವ್ಯ ಸಾನಿದ್ಯ ವಹಿಸಲಿದ್ದಾರೆ. ಶಾಸಕ ಎಂ.ಟಿ. ಕೃಷ್ಣಪ್ಪ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ಮಸಾಲಾ ಜಯರಾಮ್ ಉದ್ಘಾಟಿಸಲಿದ್ದಾರೆ. ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ತುಮುಲ್ ನಿರ್ದೇಶಕ ಮಹಲಿಂಗಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ರಮೇಶ್ ಗೌಡ ಸೇರಿದಂತೆ ರಾಜಕೀಯ ಮುಖಂಡರುಗಳು, ಅಧಿಕಾರಿಗಳು, ನಾಗರೀಕರು ಆಗಮಿಸಲಿದ್ದಾರೆಂದರು.

ಫೆಬ್ರವರಿ 14 ರಂದು ಬೆಳಿಗ್ಗೆ 11 ಗಂಟೆಯಿAದ ಭಜನೆ, ಜನಪದ ಗೀತೆ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಫೆಬ್ರವರಿ 15 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ರಾತ್ರಿ ಜಾಗರಣೆ ಕಾರ್ಯಕ್ರಮವಿದ್ದು, ಫೆಬ್ರವರಿ 16 ರಂದು ಸೋಮವಾರ ಬೆಳಿಗ್ಗೆ 7.30 ಕ್ಕೆ ಅನ್ನಸಂತರ್ಪಣೆ ನಡೆಸಲಾಗುವುದು ಎಂದ ಅವರು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವುದರ ಜೊತೆಗೆ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!