Ad imageAd image

ಜುಲೈ.15 ರಂದು ಲಯನ್ಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Bharath Vaibhav
ಜುಲೈ.15 ರಂದು ಲಯನ್ಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
WhatsApp Group Join Now
Telegram Group Join Now

ತುರುವೇಕೆರೆ : 2025-26 ನೇ ಸಾಲಿನ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜುಲೈ 15 ರಂದು ಸಂಜೆ 6 ಗಂಟೆಗೆ ಪಟ್ಟಣದ ಚೌದ್ರಿ ಕನ್ವೆಂಷನ್ ಹಾಲ್ ನಲ್ಲಿ ಏರ್ಪಡಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಹೆಚ್.ಆರ್.ರಂಗನಾಥ್ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ಕಳೆದ 36 ನೇ ಅಧ್ಯಕ್ಷರಾಗಿ ಹೆಚ್.ಎನ್. ಪರಮೇಶ್ವರಯ್ಯ ಅವರು ತಮ್ಮ ತಂಡದೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲಯನ್ಸ್ ಮಾಜಿ ಜಿಲ್ಲಾ ರಾಜ್ಯಪಾಲ ಚೇತನ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದು, ತಹಸೀಲ್ದಾರ್ ಕುಂಞ ಅಹಮದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಾಂತ್ಯಾಧ್ಯಕ್ಷ ಎಸ್.ರಾಜೇಶ್, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪಿ.ಹೆಚ್.ಧನಪಾಲ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇದೇ ದಿನ ಬೆಳಿಗ್ಗೆ 9 ಗಂಟೆಗೆ ಲಯನ್ಸ್ ಭವನದಲ್ಲಿ ದಿ.ಜಯಲಕ್ಷ್ಮಮ್ಮ, ದಿ.ನಂಜುಂಡಯ್ಯ ಅವರ ಸ್ಮರಣಾರ್ಥ ಅಮಾನಿಕೆರೆ ಟಿ.ಎನ್.ಹಿರಿಯಣ್ಣ ಅವರ ಪ್ರಾಯೋಜಕತ್ವದಲ್ಲಿ ನಾಗರೀಕರಿಗೆ ರಕ್ತದೊತ್ತಡ, ಶುಗರ್, ಹೆಚ್.ಬಿ.ಎ.1ಸಿ, ಬೋನ್ ಮಿನರಲ್ ಡೆನ್ಸಿಟಿ, ಥೈರಾಯಿಡ್ ಪ್ರೊಪೈಲ್ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದರು.

ಕಳೆದ 2024-25 ನೇ ಸಾಲಿನ ನನ್ನ ಅವಧಿಯಲ್ಲಿ ಲಯನ್ಸ್ ಪದಾಧಿಕಾರಿಗಳು, ನಾಗರೀಕರ ಸಹಕಾರದೊಂದಿಗೆ ಲಯನ್ಸ್ ನ ಬಹುದಿನಗಳ ಕನಸಾದ ಲಯನ್ಸ್ ಭವನ ನಿರ್ಮಾಣ, ಬಾಣಸಂದ್ರ ವೃತ್ತದಲ್ಲಿ ನಾಮಫಲಕ ಅನಾವರಣ, ಸುಮಾರು ಒಂದು ಸಾವಿರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ಒಂದೂವರೆ ಲಕ್ಷ ಜನರಿಗೆ ಯೂರಾಲಜಿ ಶಿಬಿರ, ಒಂದೂವರೆ ಸಾವಿರ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷಾ ಸಿದ್ಧತೆ ಹಾಗೂ ಮಾನಸಿಕ ಸ್ಥೈರ್ಯ ತುಂಬುವುದಕ್ಕಾಗಿ ಪರೀಕ್ಷಾ ಹಬ್ಬ ಸೇರಿದಂತೆ ನೂರಾರು ಸೇವಾ ಕಾರ್ಯಕ್ರಮ ಮಾಡಿ ಯಶಸ್ವಿಯಾಗಿರುವ ತೃಪ್ತಿ ನನಗಿದೆ. ಇದಕ್ಕೆಲ್ಲಾ ಪ್ರತ್ಯಕ್ಷ, ಪರೋಕ್ಷವಾಗಿ ಸಹಕಾರ ನೀಡಿರುವ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದರು.

ನೂತನ ಅಧ್ಯಕ್ಷರಾಗಿ (2025-26 ನೇ ) ನಿಯುಕ್ತಿಗೊಂಡಿರುವ ಲಯನ್ ಹೆಚ್.ಎನ್. ಪರಮೇಶ್ವರಯ್ಯ ಮಾತನಾಡಿ, 2025-26 ನೇ ಸಾಲಿನ ತಂಡವನ್ನು ಪ್ರೇರಣಾ ತಂಡ ಎಂಬ ಹೆಸರಿನೊಂದಿಗೆ ಸೇವೆ ಒಂದು ಯಜ್ಞ ಎಂಬ ಅಡಿಬರಹದೊಂದಿಗೆ ತಾಲೂಕಿನ ಅಸಹಾಯಕರು, ಅಶಕ್ತರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸರ್ವರಿಗೂ ನಿಸ್ವಾರ್ಥ, ಪ್ರಾಮಾಣಿಕವಾಗಿ ಸೇವೆ ಮಾಡುವ ಆಶಯವನ್ನು ಹೊಂದಿದ್ದೇವೆ. ಸೇವೆ ಮಾಡುವ ಮನಸ್ಸಿದ್ದರೂ ಅವರಿಗೆ ಸೂಕ್ತ ವೇದಿಕೆ, ಬಗೆಯ ಬಗ್ಗೆ ಮಾಹಿತಿ ಇರುವುದಿಲ್ಲ. ಅಂತಹ ಸೇವಾ ಮನೋಭಾವವುಳ್ಳವರನ್ನು ಗುರುತಿಸಿ ಅವರನ್ನೂ ನಮ್ಮ ಸೇವಾಯಜ್ಞದಲ್ಲಿ ತೊಡಗಿಸಿಕೊಳ್ಳುವ ತೀರ್ಮಾನ ಕೈಗೊಳ್ಳಲಾಗಿದೆ. ನಾಗರೀಕರು ಮತ್ತು ಸೇವೆ ಮಾಡುವ ಮನಸ್ಸುಗಳ ನಡುವಿನ ಕೊಂಡಿಯಾಗಿ ಲಯನ್ಸ್ ಕ್ಲಬ್ ಕಾರ್ಯನಿರ್ವಹಿಸಲಿದೆ ಎಂದರು.

ಸೈನ್ಯದಲ್ಲಿ ದೇಶಕ್ಕಾಗಿ ಹೋರಾಡಿ ಬಲಿಯಾದ ಯೋಧರ ಕುಟುಂಬಗಳಿಗೆ ನೆರವು, ವಿದ್ಯಾರ್ಥಿಗಳಿಗೆ, ಯುವಕರಿಗೆ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಕೌಶಲಾಭಿವೃದ್ದಿ ತರಬೇತಿ ಶಿಬಿರ, ನಿರುದ್ಯೋಗಿಗಳಿಗಾಗಿ ಉದ್ಯೋಗ ಮೇಳ, ಮಾನವೀಯ ಗೋಡೆ (ಉಪಯೋಗಿಸಲ್ಪಡದ ವಸ್ತುಗಳ ಶೇಖರಣಾ ಗೋಡೆ) ನಿರ್ಮಾಣ, ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ನಡೆಸುವ ಉದ್ದೇಶ ಹೊಂದಲಾಗಿದೆ. ಇದಲ್ಲದೆ ಲಯನ್ಸ್ ನ ಪ್ರಮುಖ ಕಾರ್ಯಕ್ರಮವಾದ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಈಗಾಗಲೇ ಮಾಯಸಂದ್ರದಲ್ಲಿ ನಡೆಯುತ್ತಿದೆ. ಅದನ್ನು ಎಲ್ಲಾ ಹೋಬಳಿಗಳಲ್ಲೂ ನಡೆಸುವ ಅಲ್ಲಿನ ನಾಗರೀಕರಿಗೆ ಅನುಕೂಲ ಕಲ್ಪಿಸುವ ಉದ್ದೇಶವನ್ನೂ ಹೊಂದಲಾಗಿದೆ. ನಾಗರೀಕರ ಸಹಕಾರದಿಂದ ಇನ್ನೂ ಹೆಚ್ಚಿನ ಸೇವಾ ಕಾರ್ಯಕ್ರಮಗಳನ್ನು ನಡೆಸುವ ಗುರಿಯನ್ನು ಲಯನ್ಸ್ ನ ನಮ್ಮ ಪ್ರೇರಣಾ ತಂದ ಹೊಂದಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಲಯನ್ಸ್ ನೂತನ ಕಾರ್ಯದರ್ಶಿ ಡಾ.ಎ.ನಾಗರಾಜ್, ಸ್ವಾಗತ ಸಮಿತಿ ಅಧ್ಯಕ್ಷ ಕೈಲಾಸಂ, ಖಜಾಂಚಿ ಸುನಿಲ್ ಕುಮಾರ್, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪಿ.ಹೆಚ್.ಧನಪಾಲ್ ಸೇರಿದಂತೆ ಲಯನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!