Ad imageAd image

ಜೂ. ೨೪ ರಂದು ಪ್ರೇರಣಾ ಕಲಾ ಬಳಗದ ವತಿಯಿಂದ ಕುಚಿಪುಡಿ ರಂಗಪ್ರವೇಶ ಕಾರ್ಯಕ್ರಮ

Bharath Vaibhav
ಜೂ. ೨೪ ರಂದು ಪ್ರೇರಣಾ ಕಲಾ ಬಳಗದ ವತಿಯಿಂದ ಕುಚಿಪುಡಿ ರಂಗಪ್ರವೇಶ ಕಾರ್ಯಕ್ರಮ
WhatsApp Group Join Now
Telegram Group Join Now

ಹುಬ್ಬಳ್ಳಿ: ಪ್ರೇರಣಾ ಕಲಾ ಬಳಗದ ವತಿಯಿಂದ ಕುಚಿಪುಡಿ ರಂಗಪ್ರವೇಶ ಕಾರ್ಯಕ್ರಮವನ್ನು ಜೂ. ೨೪ ರಂದು ಸಂಜೆ ೫ ಗಂಟೆಗೆ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿದುಷಿ ಜ್ಯೋತಿ ಗಲಗಲಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಕು.ಅಕ್ಷತಾ ನಾಗರೆಡ್ಡಿ, ಕು.ಭೂಮಿಕಾ ಚೌಗಲಾ, ಕು.ಸ್ವಾತಿ ಶೆಟ್ಟೆಪ್ಪನವರ ಹಾಗೂ ಕು. ತ್ರಿಶಾ ಶೆಟ್ಟಿ ಈ ನಾಲ್ಕು ವಿದ್ಯಾರ್ಥಿಗಳು ರಂಗಪ್ರವೇಶ ಮಾಡಲಿದ್ದಾರೆಂದರು.
ಅಂದಿನ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಶಶಿಕಲಾ ಜೊಲ್ಲೆ ನೆರವೇರಿಸಲಿದ್ದು, ಉದ್ಘಾಟನೆಯನ್ನು ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರು ಆಗಮಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂತರಾಷ್ಟ್ರೀಯ ಕಲಾವಿದ ನಾಟ್ಯಾಚಾರ್ಯ ವಿದ್ವಾನ್ ನಟರಾಜ್ ಕೃಷ್ಣಮೂರ್ತಿಯವರು ವಹಿಸಲಿದ್ದಾರೆ ಎಂದರು.


ಮುಖ್ಯ ಅತಿಥಿಗಳಾಗಿ ಧಾರವಾಡ ವಿದ್ಯಾಗಿರಿ ಜೆ‌‌‌‌.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಶಾನಬಾಗ, ಪ್ರೇರಣಾ ಕಾಲೇಜಿನ ಪ್ರಾಶುಂಪಾಲರಾದ ಡಾ.ಸುಪ್ರೀತ್ ಮಲ್ಲಿಕಾರ್ಜುನ ಲಗಳಿ, ನವನಗರ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಡಾ. ವಿಜಯಶ್ರೀ ಕಲಬುರಗಿ, ಧಾರವಾಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಬೆಕ್ಕೇರಿ ಸೇರಿದಂತೆ ಮೊದಲಾದವರು ಆಗಮಿಸಲಿದ್ದಾರೆಂದರು.

ಈ ಸಂದರ್ಭದಲ್ಲಿ ಎಚ್ ಎಸ್ ಕಿರಣ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ವರದಿ : ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!