Ad imageAd image

ಮಾರ್ಚ್ 10 ರಂದು ಸದಲಗಾ ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ.ಜಿಲ್ಲೆಯ ಚಿತ್ತ ಸದಲಗಾ ಪುರಸಭೆಯತ್ತ

Bharath Vaibhav
ಮಾರ್ಚ್ 10 ರಂದು ಸದಲಗಾ ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ.ಜಿಲ್ಲೆಯ ಚಿತ್ತ ಸದಲಗಾ ಪುರಸಭೆಯತ್ತ
WhatsApp Group Join Now
Telegram Group Join Now

ಚಿಕ್ಕೋಡಿ : ತಾಲೂಕಿನ ಸದಲಗಾ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ನಾಳೆ ಅಂದರೆ ಸೋಮವಾರ ಮಾರ್ಚ್ 10 ರಂದು ಆಯ್ಕೆ ನಡೆಯಲಿದ್ದು ಬಹುಮತಕ್ಕಾಗಿ ಕಾಂಗ್ರೆಸ್- ಬಿಜೆಪಿ – ಜೆಡಿಎಸ್ ಹಾಗೂ ಆಪಕ್ಷ ಅಭ್ಯರ್ಥಿಗಳಿರುವ ಪುರಸಭೆಗೆ ಹಗ್ಗ ಜಗ್ಗಾಟ ಪ್ರಾರಂಭವಾಗಿದ್ದು ಚಿಕ್ಕೋಡಿ ತಾಲ್ಲೂಕು ಸೇರಿ ಜಿಲ್ಲೆಯ ಜನತೆಗೆ ಉತ್ಸುಕತೆ ಮೂಡಿಸಿದೆ. ಸದಲಗಾ ಪುರಸಭೆಯಲ್ಲಿ ಕಾಂಗ್ರೆಸ್ 10 ಬಿಜೆಪಿ 11 ಹಾಗೂ ಜೆಡಿಎಸ್ 2 ಹೀಗೆ ಒಟ್ಟು 23 ಸದಸ್ಯರಿದ್ದು ಸ್ಥಾ ನಿಕ ಶಾಸಕರು ಹಾಗೂ ಸಂಸದರು ಸೇರಿ ಒಟ್ಟು 25 ಸದಸ್ಯರಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ನಡೆಯಲಿದೆ. ಸದ್ಯ ಸದಲಗಾ ಪುರಸಭೆಯಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಪರಿಪೂರ್ಣ ಬಹುಮತಗಳಿಲ್ಲದೆ ಇದ್ದುದರಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಅತ್ಯಂತ ಮಹತ್ವ ಪಡೆದುಕೊಂಡಿದೆ.ಸದ್ಯ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಪೂರ್ಣ ಬಹುಮತ ಸಿದ್ಧಪಡಿಸಲು ಅಪಕ್ಷ ಅಭ್ಯರ್ಥಿಗಳ ಬೆಂಬಲ ಮಹತ್ವದ್ದಾಗಿದೆ. ಜನತಾ ದಳದ ಸುಹಾಸ್ ವಾಳಕೆಯವರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಇನ್ನುಳಿದ ಇಬ್ಬರು ಅ ಪಕ್ಷ ಸದಸ್ಯರ ಬೆಂಬಲ ದೊರೆತರೆ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ದೊರೆಯಲಿದೆ.

ಇಲ್ಲದಿದ್ದರೆ…………… ಕಾಂಗ್ರೆಸ್ಸಿನ 10 ಸದಸ್ಯರು ಅಪಕ್ಷ ಸದಸ್ಯರಾದ ಅಭಿಜಿತ್ ಪಾಟೀಲ್ ಬಸವರಾಜ್ ಹಣಬರ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಸಂಸದರು ಸೇರಿ 14 ಸದಸ್ಯರು ಬೆಂಬಲ ವ್ಯಕ್ತಪಡಿಸಿದರೆ….. ಕಾಂಗ್ರೆಸ್ ಪಕ್ಷದವರಿಗೆ ಬಹುಮತ ದೊರೆತು ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಹಿಡಿತದಲ್ಲಿರಲಿದೆ. ಆದರೆ…….. ಅದು ಆಯ್ಕೆಯ ಪೂರ್ವದಲ್ಲಿಯ ಲೆಕ್ಕಚಾರ. ಆಯ್ಕೆಯ ವೇಳೆಗೆ ಅಪಕ್ಷ ಸದಸ್ಯರು ಯಾರಿಗೆ ಬೆಂಬಲ ಸೂಚಿಸಲಿದ್ದಾರೆ ಎಂಬುದನ್ನು ಮಾತ್ರ ಕಾಯ್ದು ನೋಡಬೇಕಾಗಿದೆ. ಸದಲಗಾ ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಸೇರಿದ್ದು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆ ಎಸ್ ಸಿ ವರ್ಗಕ್ಕೆ ಮೀಸಲಾಗಿದೆ ಎಂದು ಚುನಾವಣಾ ಅಧಿಕಾರಿ ಕುಲಕರ್ಣಿ ತಿಳಿಸಿದ್ದಾರೆ. ಸೋಮವಾರ ದಿನಾಂಕ 10ರಂದು ಬೆಳಿಗ್ಗೆ 10ರಿಂದ 12ಗಂಟೆಯ ವರೆಗೆ ಉಮೇದುವಾರರ ನಾಮಪತ್ರ ಪರಿಷ್ಕರಣೆ ನಡೆಯಲಿದ್ದು 12:30ರ ವರೆಗೆ ಅರ್ಜಿ ಹಿಂಪಡೆಯಲು ಅವಕಾಶ ನೀಡಲಾಗಿದೆ.ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆದು ನಂತರ ಫಲಿತಾಂಶ ಘೋಷಿಸಲಾಗುವುದೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ವರದಿ: ಮಹಾವೀರ ಚಿಂಚಣೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!