Ad imageAd image

ನಮ್ಮ ನಡೆ ಜಾಗೃತಿ ಕಡೆ ಕಾರ್ಯಕ್ರಮವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಜೆಎಂಎಫ್ ನ್ಯಾ ಪ್ರಿಯಾಂಕಾ ಟಿ.ಕೆ

Bharath Vaibhav
ನಮ್ಮ ನಡೆ ಜಾಗೃತಿ ಕಡೆ ಕಾರ್ಯಕ್ರಮವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಜೆಎಂಎಫ್ ನ್ಯಾ ಪ್ರಿಯಾಂಕಾ ಟಿ.ಕೆ
WhatsApp Group Join Now
Telegram Group Join Now

ಮೊಳಕಾಲ್ಮೂರು:ನಮ್ಮ ನಡೆ ಜಾಗೃತಿ ಕಡೆ ಎನ್ನುವ ಕಾರ್ಯಕ್ರಮವನ್ನು ತಾಲೂಕಿನ ಜಿಲ್ಲೆಯಾದ್ಯಂತ ಎಲ್ಲರೂ ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜೆಎಂ ಎಫ್ ನ್ಯಾಯಾಧೀಶರಾದ ಪ್ರಿಯಾಂಕಾ ಟಿಕೆ ಇವರು ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಗುರುಭವನದಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಚಿತ್ರದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮತ್ತು ಮೊಳಕಾಲ್ಮುರು ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ನಮ್ಮ ನಡೆ ಜಾಗೃತಿ ಕಡೆ ಎನ್ನುವ ಕಾರ್ಯಕ್ರಮದ ಅಧ್ಯಕ್ಷತೆ ಅವರು ಮಾತನಾಡಿದರು.

ಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮ ಕುಟುಂಬ ಸಮೇತರಾಗಿ ಮಕ್ಕಳು ಇದರ ಉಪಯೋಗ ಪಡೆದುಕೊಳ್ಳಬೇಕು ಇಂತಹ ಕಾರ್ಯಕ್ರಮವು ಕರ್ನಾಟಕದಲ್ಲಿ ಪ್ರಥಮವಾಗಿ ತಾಲೂಕಿನಲ್ಲಿ ನಡೆಯುತ್ತಿದೆ.. ಸೈಬರ್ ಕ್ರೈಂ ಮಾದಕ ವಸ್ತು ಸುರಕ್ಷತೆ, ಬಾಲ್ಯ ವಿವಾಹ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಬಗ್ಗೆ ಈ ಎಲ್ಲಾ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಇಂತಹ ಕಾರ್ಯಕ್ರಮಗಳನ್ನು ಎಲ್ಲರೂ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ಸೌಜನ್ಯವಾಗಿ ಬದುಕು ರೂಪಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಸಿ.ಪಿ.ಐ ವಸಂತ್ ವಿ ಅಸೋದೆ ಮಾತನಾಡಿ ಈ ಕಾರ್ಯಕ್ರಮವು ಚಿತ್ರದುರ್ಗ ಎಸ್ಪಿ ಆದಂತಹ ರಂಜಿತ್ ಕುಮಾರ್ ಭಂಡಾರು ಅವರ ಕನಸಿನ ಕೂಸು ಎಂದರೆ ತಪ್ಪಾಗಲಾರದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದುರಲ್ಲಿ ಕ್ರೈಂ ಗಳು ಹೆಚ್ಚುತ್ತವೆ ಇಂತಹ ಸಂದರ್ಭದಲ್ಲಿ ಜಾಗೃತಿ ಬಹಳ ಮುಖ್ಯ ನಮ್ಮ ನಡೆ ಜಾಗೃತಿ ಕಡೆ ಒಳ್ಳೆಯ ಕಾರ್ಯಕ್ರಮ ಮೊಳಕಾಲ್ಮುರಿನಲ್ಲಿ ಮೊಟ್ಟಮೊದಲ ಬಾರಿಗೆ ಮೂರು ದಿನಗಳ ಪ್ರದರ್ಶನ ನಡೆಯುತ್ತಿದ್ದು ಎಲ್ಲಾ ಎಲ್ಲಾ ಕ್ರೈಮ್ಗಳ ಬಗ್ಗೆ ಸಂಕ್ಷಿಪ್ತವಾಗಿ ಪಿಚ್ಚರ್ ಗಳ ಮೂಲಕ ನಮ್ಮ ತಂಡ ನಿಮಗೆ ಸಲಹೆ ನೀಡಲಿದೆ. ಆದ್ದರಿಂದ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ನಾವು ಸಮಾಜದಲ್ಲಿ ಯಾವ ರೀತಿ ಜಾಗೃತರಾಗಬೇಕು ಇದರಿಂದ ಪಾರಾಗುವುದು ಹೇಗೆ ಎನ್ನುವ ಪ್ರತಿಯೊಂದು ಮಾಹಿತಿ ಕೂಡ ನಮ್ಮ ತಂಡ ನೀಡುತ್ತದೆ ತಾಲೂಕಿನಾದ್ಯಂತ ಎಲ್ಲರೂ ಬಂದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರತಿದಿನವೂ ಶಾಲಾ ಮಕ್ಕಳು ತಂದೆ ತಾಯಿಗಳು ತಾಲೂಕಿನ ಎಲ್ಲಾ ವರ್ಗದ ಜನರು ಮೂರು ದಿನಗಳ ಕಾಲ ಇದರ ಉಪಯೋಗ ಪಡೆದುಕೊಂಡು ವಂಚಕರಿಂದ ದೂರ ಇರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಟಿಬಿ ರಾಜಣ್ಣ ಪೊಲೀಸ್ ಉಪಾಧ್ಯಕ್ಷಕರು ಚಳಕೆರೆ ಉಪ ವಿಭಾಗ ವೆಂಕಟೇಶ್ ರೆಡ್ಡ ಎನ್ ನಿರೀಕ್ಷಕರು ಸಿಇಎನ್ ಠಾಣೆ ಚಿತ್ರದುರ್ಗ, ಸಿಪಿಐ ವಸಂತ್ ವಿ ಅಸೋದೆ, ಸಬ್ ಇನ್ಸ್ಪೆಕ್ಟರ್ ಮಹೇಶ್ ಹೊಸಪೇಟೆ, ಬಾಹುಬಲಿ. ವಕೀಲರ ಸಂಘದ ಅಧ್ಯಕ್ಷರಾದ ವಸಂತ್ ಕುಮಾರ್ ಉಪಾಧ್ಯಕ್ಷರಾದ ಶಿವಣ್ಣ ವಕೀಲರಾದ ತಿಮ್ಮಪ್ಪ ನವೀನ್ ಕುಮಾರ್ ಮಹೇಶ್ ರಾಘವೇಂದ್ರ ವಿಜಯ್ ಇನ್ನು ಹಲವರು ಶಾಲಾ ಮಕ್ಕಳು ಉಪಸ್ಥಿತರಿದ್ದರು.

ವರದಿ: ಪಿಎಂ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!