ಖಾನಾಪುರ : ಬೆಳಗಾವಿ ಜಿಲ್ಲೆ ಖಾನಾಪುರ ನಗರದ ಮಲಪ್ರಭಾ ನದಿಯ ದಡದಲ್ಲಿ ಸದ್ಗುರು ಮಾತಾ ಸುದೀಕ್ಷಾ ಮಹಾರಾಜ ದಿಲ್ಲಿ ಯವರ ಮಾರ್ಗದರ್ಶನದಲ್ಲಿ “ಸ್ವಚ್ಛ ಜಲ, ಸ್ವಚ್ಛ ಮನ ” ಅಭಿಯಾನ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಪರವಾಗಿ ಮಾತನಾಡಿದ ಶಾಸಕರಾದ ವಿಠ್ಠಲ ಹಲಗೇಕರ್ ಅವರು, ಸಂತ ನಿರಂಕಾರಿ ಮಂಡಳ ದಿಲ್ಲಿ, ಶಾಖೆ ಬೆಳಗಾವಿಯವರ ಸೇವಾ ದಳ ಮುಂದಾಳತ್ವದಲ್ಲಿ ನಡೆಯುವ ಸ್ವಚ್ಛತಾ ಕಾರ್ಯಕ್ರಮ ಶ್ಲಾಘನಿಯ ಎಂದು ಸೇವಾ ದಳ ಸದಸ್ಯರಿಗೆ ಅಭಿನಂದಿಸಿದರು.

ಶಾಸಕನಾದ ನಾನು ಕೂಡ ಪ್ರಯಾಗರಾಜ ಕುಂಭಮೇಳಕ್ಕೆ ಹೋಗಿದ್ದೆ, 55ಕೋಟಿಗಿಂತ ಹೆಚ್ಚು ಜನರು ಸ್ಥಾನ ಮಾಡಿದರು ನೀರು ಹೊಲಸು ಆಗಿಲ್ಲ, ಆದರೇ ನಾವು ಮಲಪ್ರಭಾ ನದಿಯಲ್ಲಿ ಸ್ವಲ್ಪ ಜನರೇ ಕೂಡಿ ನದಿಯ ನೀರನ್ನು ಹೊಲಸು ಮಾಡಿದ್ದೇವೆ. ಇವತ್ತು ಸಂತ ನಿರಂಕಾರಿ ಸೇವಾ ದಳದ ವತಿಯಿಂದ ಸ್ವಚ್ಛತೆ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ.

ಪ್ರತಿ ವರ್ಷ್ ಫೆಬ್ರವರಿ 23 ರಂದು ಸದ್ಗುರು ಬಾಬಾ ಹರದೇವ ಸಿಂಹ ಜಿ ಮಹಾರಾಜ ಅವರ ಜನ್ಮದಿನದಂದು ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯುತ್ತದೆ. ಸ್ವಚ್ಛತಾ ಅಭಿಯಾನದಲ್ಲಿ ಬೆಳಗಾವಿಯ ಸಂಯೋಜಕರಾದ ಶಶಿ ಆನಂದಜಿ, ಜ್ಞಾನ ಪ್ರಚಾರಕರಾದ ವಿ ಎನ್ ಲಾಸೆಜಿ, ಪ್ರಚಾರಕರಾದ ರಾಜು ನಾಗವಡೆಕರ ಜಿ, ಸೇವಾ ದಳ ಸಂಚಾಲಕರಾದ ತುಷಾರ್ ಲಂಕಾಜಿ, ಸೇವಾದಳ ಶಿಕ್ಷಕರಾದ ಗಜಾನನ ಗವಾಣಿ, ಮಹಿಳಾ ಸೇವಾದಳ ಶಿಕ್ಷಕಿಯರಾದ ಲಕ್ಹ್ಮೀ ಭಾಂಡಿಜಿ, ಭಾರತ ವೈಭವ ಪತ್ರಿಕೆ ಸಂಪಾದಕರಾದ ಎನ್ ಪ್ರಶಾಂತರಾವ್ ಮತ್ತು ಖಾನಾಪುರ ಪಟ್ಟಣ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಹಾಗೂ ಬೆಳಗಾವಿಯ ಎಲ್ಲ ಸರ್ವ ಸಂತ ನಿರಂಕಾರಿ ಸೇವಾ ದಳ ಸದಸ್ಯರು, ಸಂತ ನಿರಂಕಾರಿ ಭಕ್ತರು ಅಮೃತ ಅಭಿಯಾನದಲ್ಲಿ ಭಾಗವಹಿಸಿದ್ದರು.





