ಮೊಳಕಾಲ್ಮೂರು :– ಧಣಿವರಿಯದ ನಾಯಕ ನಮ್ಮ ದೇಶದ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಈ ದೇಶಕ್ಕೋಸ್ಕರ ಒಂದು ದಿನ ಕೂಡ ರಜಾ ತೆಗೆದುಕೊಳ್ಳದೆ ಸುಮಾರು 18 ಗಂಟೆಗಳ ನಿರಂತರವಾಗಿ ಶ್ರಮಿಸುತ್ತಿರುವ ಏಕೈಕ ನಾಯಕ ಎಂದು ಡಾ ಪಿ ಎಂ ಮಂಜುನಾಥ್ ರವರು ತಿಳಿಸಿದರು .
ಪಟ್ಟಣದಲ್ಲಿ ಮಂಗಳವಾರ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಶ್ರೀ ಮಾರ್ಕಂಡಯ್ಯ ದೇವಸ್ಥಾನದಲ್ಲಿ ಪೂಜೆ ಮಾಡಿ ಅದೇ ರೀತಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಲು ಹಣ್ಣು ಬ್ರೆಡ್ ವಿತರಣೆ ಮಾಡಿ ನರೇಂದ್ರ ಮೋದಿಜಿಯವರ ಸಾಧನೆ ಬಗ್ಗೆ ಮಾತನಾಡಿದರು.
ಈ ದೇಶಕ್ಕೋಸ್ಕರ ನಿರಂತರವಾಗಿ ದುಡಿಯುತ್ತಿರುವ ನರೇಂದ್ರ ಮೋದಿಜಿ ಸಿಕ್ಕಿರುವುದು ನಮ್ಮ ನಿಮ್ಮೆಲ್ಲರ ಪುಣ್ಯ ಆದ್ದರಿಂದ ಮಂಡಲದ ವತಿಯಿಂದ ತಾಲೂಕಿನ ಎಲ್ಲಾ ಜನತೆಯ ನರೇಂದ್ರ ಮೋದಿಜಿ ಅವರಿಗೆ ಉತ್ತಮ ಆರೋಗ್ಯ ಐಶ್ವರ್ಯ ದೀರ್ಘಾಯು ನೀಡಲಿ ಎಂದು ಕೇಳಿಕೊಳ್ಳುತ್ತೇವೆ ಎಂದರು.
ಸುಮಾರು 15 ದಿನಗಳ ಕಾಲ ಸೇವಾ ಪ್ರಕ್ಷಿಕವನ್ನು ದಿನಕ್ಕೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಅದೇ ರೀತಿ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ಮೆಂಬರ್ಶಿಪ್ ಮಾಡುವ ಕೆಲಸ ಈ ದಿನದಿಂದಲೇ ಚಾಲನೆ ದೊರೆಯುತ್ತದೆ ಇಡೀ ಕ್ಷೇತ್ರಾದ್ಯಂತ ಸುಮಾರು 80000 ಮೆಂಬರ್ಶಿಪ್ ಮಾಡುವ ಕೆಲಸ ಮುಂದುವರಿಯುತ್ತದೆ ಎಂದರು
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಲೀಲಾವತಿ ಸಿದ್ದಣ್ಣ ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಣ್ ರವಿಕುಮಾರ್ ಸದಸ್ಯರುಗಳಾದ ಎಂ ಎನ್ ಮಂಜಣ್ಣ, ಭಾಗ್ಯಮ್ಮ ಭೀಮಣ್ಣ, ನಗರ ಘಟಕದ ಅಧ್ಯಕ್ಷರಾದ ಕಿರಣ್ ಗಾಯಕ್ವಾಡ್ ದಾಸರಟ್ಟಿ ರಾಮಾಂಜನಿ, ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಮುಖಂಡರಾದ ವಿನಯ್ ಕುಮಾರ್, ರಾಜು, ಗೋಪಾಲ್, ದಿಲೀಪ್ ಪ್ರಧಾನ ಕಾರ್ಯದರ್ಶಿ ಪ್ರಭು ಮುಖಂಡರಾದ ಡಿಎಂ ಈಶ್ವರಪ್ಪ ವೈದ್ಯಾಧಿಕಾರಿಗಳಾದ ಪವನ್ ಇನ್ನು ಹಲವರು ಉಪಸ್ಥಿತರಿದ್ದರು.
ವರದಿ :-ಪಿಎಂ ಗಂಗಾಧರ