ಸಿಂಧನೂರು : –ತಾಲೂಕಿನ ಬಾದರ್ಲಿ ಗ್ರಾಮ ಪಂಚಾಯತಿಯಲ್ಲಿ ವೀರ ವನಿತೆ ಒನಕೆ ಓಬವ್ವನ ಜಯಂತಿ ಕಾಟಾಚಾರಕ್ಕೆ ಆಚರಣೆ ಮಾಡಿದ ಕೆಲವೇ ನಿಮಿಷಗಳಲ್ಲಿ ಭಾವಚಿತ್ರವನ್ನು ತೆಗೆದುಹಾಕಿದ ಗ್ರಾಮ ಪಂಚಾಯತಿ ಪಿಡಿಒ ಹಾಗೂ ಸಿಬ್ಬಂದಿಗಳು ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ ನವೆಂಬರ್ 11ರಂದು ಕರ್ನಾಟಕದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಒನಕೆ ಓಬವ್ವನ ಜಯಂತಿಯನ್ನು ಗೌರವಪೂರ್ವಕವಾಗಿ ನೆರವೇರಿಸುಬೇಕೆಂದು ಸರ್ಕಾರದ ಆದೇಶವಿದೆ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ತವರೂರು ಗ್ರಾಮ ಪಂಚಾಯತಿಯಲ್ಲಿ ಕಾಟಾಚಾರಕ್ಕೆ ಜಯಂತಿ ಆಚರಣೆ ಮಾಡಿ ಒನಕೆ ಓಬವ್ವನಿಗೆ ಅಪಮಾನ ಮಾಡಿದ್ದಾರೆ ಎಂದು ಸುದ್ದಿ ತಿಳಿದ ನಮ್ಮ ಕರ್ನಾಟಕ ಸೇನೆಯ ಹೋಬಳಿ ಘಟಕದ ಅಧ್ಯಕ್ಷ. ಶರಣಪ್ಪ ಬೆಳಗುರ್ಕಿ, ಹಸಿರು ಸೇನೆಯ ಸಂಘಟನೆಯ ಉಪಾಧ್ಯಕ್ಷ ಹುಸೇನಪ್ಪ ಬಾದರ್ಲಿ ಯವರು ಸ್ಥಳಕ್ಕೆ ಬಂದು ಪಂಚಾಯತಿ ಪಿಡಿಒ ಹಾಗೂ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡು ಪುನಃ ಓಬವ್ವನ ಭಾವಚಿತ್ರವನ್ನು ತರಿಸಿ ಪುನಃ ಜಯಂತಿ ಆಚರಣೆ ಮಾಡಿದ ಘಟನೆ ನಡೆದಿದೆ.
ವೀರ ವನಿತೆ ಒನಕೆ ಓಬವ್ವನ ಜಯಂತಿ ಆಚರಣೆ ಮಾಡುವುದರಲ್ಲಿ ನಿರ್ಲಕ್ಷ್ಯ ತೋರಿಸದ ಪಂಚಾಯತಿ ಪಿಡಿಒ ಹಾಗೂ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮಕ್ಕಾಗಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಂಧನೂರು ಇವರಿಗೆ ಮನವಿ ಸಲ್ಲಿಸಲಾಯಿತು,ಈ ಸಂದರ್ಭದಲ್ಲಿ, ನಮ್ಮ ಕರ್ನಾಟಕ ಸೇನೆ ಹೋಬಳಿ ಘಟಕದ ಅಧ್ಯಕ್ಷ ಶರಣಪ್ಪ ಬೆಳಗುರ್ಕಿ, ಹಸಿರು ಸೇನೆ ಸಂಘಟನೆ ಉಪಾಧ್ಯಕ್ಷ ಹುಸೇನಪ್ಪಾ ಬಾದರ್ಲಿ, ವೀರೇಶ್ ಬೆಳಗುರ್ಕಿ, ಹಾಗೂ ಗ್ರಾಮಸ್ಥರು ಇದ್ದರು
ವರದಿ:- ಬಸವರಾಜ ಬುಕ್ಕನಹಟ್ಟಿ