ಬೆಂಗಳೂರು : ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುವ ಬ್ರಹ್ಮಾಂಡ ಗುರೂಜಿ ಅವರು ಏಕಾಏಕಿ ಪ್ರಧಾನಿ ಹುದ್ದೆ ಬಗ್ಗೆಯೇ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ದೇಶದ ಪ್ರಧಾನಿಯವರ ಅವಧಿಯ ಬಗ್ಗೆ ಮಾತನಾಡಿರುವ ಗುರೂಜಿ ಮೋದಿ ಅವರು ಪ್ರಧಾನಿ ಹುದ್ದೆಯಲ್ಲಿರುವುದು ಇನ್ನೂ ಒಂದೂವರೆ ವರ್ಷ ಮಾತ್ರ ಎಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಮಾತನಾಡಿದ ಬ್ರಹ್ಮಾಂಡ ಗೂರುಜಿಯವರು ವೈರಾಗ್ಯ ಬಂದ ಮೇಲೆ ರಾಜೀನಾಮೆ ಕೊಡುವುದು ಸಾಮಾನ್ಯ ಎಂದಿದ್ದು, ಪ್ರಧಾನಿ ಹುದ್ದೆಯಿಮದ ಮೋದಿ ಇಳಿಯಲಿದ್ದಾರೆ ಎಂದಿದ್ದಾರೆ.
ಅಷ್ಟೇ ಅಲ್ಲದೆ ಸನ್ಯಾಸಿವೊಬ್ಬರು ಈ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಹೆಸರೇಳದೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರು ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ