ಸೇಡಂ: ನಮೋ ಬುದ್ದ ಸೇವಾ ಕೇಂದ್ರ ಮಳಖೇಡ ವತಿಯಿಂದ ದಿನಾಂಕ ೦೯-೦೧-೨೦೨೫ ರಂದು ಸರ್ಕಾರಿ ಪ್ರೌಢಶಾಲೆ ಕೊಲಕುಂದಾ ದಲ್ಲಿ, ೧೦ ನೇ ತರಗತಿಯ ಮಕ್ಕಳಿಗೆ ಗಣಿತ ವಿಷಯದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು , ಸಸಿಗೆ ನೀರು ಹಾಕುವ ಮುಖಾಂತರ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳಾದ ಶಂರಲಿಂಗಪ್ಪ ನವರು ಮಾತನಾಡುತ್ತಾ ೧೦ ನೇ ತರಗತಿಯ ಮಕ್ಕಳಲ್ಲಿ ಇದು ಮಹತ್ವದ ಘಟ್ಟ ಈ ಗಣಿತ ಕಾರ್ಯಾಗಾರದಿಂದ ಮಕ್ಕಳಗೂ ಹಾಗೂ ಶಿಕ್ಷಣ ಇಲಾಖೆಗೂ ಅನುಕೂಲವಾಗುತ್ತದೆ ,ಎರವಲು ಶಿಕ್ಷಕರಿಂದ ಮಕ್ಕಳ ಓದಿನಲ್ಲಿ ಆಸಕ್ತಿ ಹುಮ್ಮಸ್ಸು ಅಭಿರುಚಿ ಜೋತೆಗೆ ಕಠಿಣತೆಯ ವಿಷಯವನ್ನು ಅರಿತುಕೊಳ್ಳಲು ಅನುಕೂಲಕರವಾಗ ಬಹುದು,ಸತತ ಅಭ್ಯಾಸದಿಂದ ಹಾಗೂ ಓದಿನಲ್ಲಿ ಆಸಕ್ತಿ ಹೊಂದಿದರೆ ಉತ್ತಮ ಫಲಿತಾಂಶ ತಮ್ಮದಾಗುತ್ತದೆಂದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ದಸರಥ ಚೌವ್ಹಾಣ್ ಮಕ್ಕಳಿಗೆ ಸಂಖ್ಯೆ ಶಾಸ್ತ್ರ , ವಾಸ್ತವ ಸಂಖ್ಯೆ, ಬಹುಪದಕ್ತೊತಿಗಳು ,ಪ್ರಮೇಯಗಳು ಹಾಗೂ ಸರಪೇಸ್ ವ್ಯಾಲಿಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ಅಶೋಕ ರೆಡ್ಡಿ ಚಿಲುಮೆ ಮುಖ್ಯ ಗುರುಗಳು ವಹಿಸಿದರು .
ವೇದಿಕೆ ಮೇಲೆ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಜಗನ್ನಾಥ ಕುಂಬಾರ ಮಹ್ಮದ್ ರಫೀಕ್ ಹಾಗೂ ಶಾಲಾ ಶಿಕ್ಷಕರಾದ ರಾಘವೇಂದ್ರ,ಶ್ರೀಶೈಲ ರೆಡ್ಡಿ, ಪ್ರಭುಲಿಂಗ ಪಗಡಿ ,ಕಾಶಪ್ಪ , ನಂದಿನಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಹಾಗೂ ಸ್ವಾಗತ ರಾಜು ಕಟ್ಟಿ, ನಿರೂಪಣೆ ರಾಜೇಂದ್ರ , ವಂದನಾರ್ಪಣೆ ಮೊಗಲಪ್ಪ ರವರು ಮಾಡಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




