Ad imageAd image

ರಾ.ಚ.ವಿ.ಯಲ್ಲಿ  ಶೈಕ್ಷಣಿಕ ಮತ್ತುಆಡಳಿತ ಸುಧಾರಣೆಗಳ ಕುರಿತು ಒಂದು ದಿನದ ಕಾರ್ಯಗಾರ  ಸಂಪನ್ನ

Bharath Vaibhav
ರಾ.ಚ.ವಿ.ಯಲ್ಲಿ  ಶೈಕ್ಷಣಿಕ ಮತ್ತುಆಡಳಿತ ಸುಧಾರಣೆಗಳ ಕುರಿತು ಒಂದು ದಿನದ ಕಾರ್ಯಗಾರ  ಸಂಪನ್ನ
WhatsApp Group Join Now
Telegram Group Join Now

ಬೆಳಗಾವಿ: ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಫೆ. 22ರಂದು “ಶೈಕ್ಷಣಿಕ ಮತ್ತುಆಡಳಿತ ಸುಧಾರಣೆಗಳು” ಎಂಬ ವಿಷಯದ ಕುರಿತು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರವನ್ನುಉದ್ಘಾಟಿಸಿ ಪ್ರೊ.ಎಂರಾಮಚಂದ್ರಗೌಡರವರು ವಿಶ್ವವಿದ್ಯಾಲಯವು ಬಹು ಮುಖ್ಯವಾಗಿ ಬೋಧಕೇತರ ಸಿಬ್ಬಂದಿಯ ಮೇಲೆ ಅವಲಂಬಿತವಾಗಿದೆ ಮತ್ತು ವಿಶ್ವವಿದ್ಯಾಲಯದ ಶ್ರೇಯೋಭಿವೃದ್ಧಿಯು ಬೋಧಕೇತರ ಸಿಬ್ಬಂದಿಯ ಕಾರ್ಯದಕ್ಷತೆಯಿಂದ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ ಅವರು, ಬೋಧಕೇತರ ಸಿಬ್ಬಂದಿಯು ತಮ್ಮ ಕೆಲಸದ ಬಗ್ಗೆ ಮಾತ್ರ ಕಾಳಜಿ ವಹಿಸುವುದಲ್ಲದೇ, ತಮ್ಮಆರೋಗ್ಯದ ಬಗ್ಗೆ ಸಹ ಕಾಳಜಿ ವಹಿಸುವುದು ಅತ್ಯಂತ ಮುಖ್ಯ ಎಂದು ಹೇಳಿದರು. ಪ್ರತಿಯೊಬ್ಬ ಸಿಬ್ಬಂದಿಯೂ ತಾನು ಮಾಡುವ ಕೆಲಸದಲ್ಲಿ ತೃಪ್ತವಾಗಿರಬೇಕು ಮತ್ತುಇಂದೇ ಕೆಲಸವನ್ನು ಮುಗಿಸಬೇಕೆಂಬ ಸಂಕಲ್ಪ ಹೊಂದಿರಬೇಕು ಎಂದು ಹೇಳಿದರು.

ಕುಲಸಚಿವರಾದ ಸಂತೋಷ ಕಾಮಗೌಡ, ಕೆ.ಎ.ಎಸ್, ಅವರು, ಬೋಧಕೇತರ ಸಿಬ್ಬಂದಿಯು ಹೊಸ ಬದಲಾವಣೆಗಳನ್ನು ಸ್ವೀಕರಿಸಬೇಕು ಮತ್ತು ಹೊಸ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.

ಉಪ ಕುಲಸಚಿವರಾದ ಡಾ.ಡಿ.ಕೆ.ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಣಕಾಸು ಅಧಿಕಾರಿ ಶ್ರೀಮತಿ.ಎಂ. ಎ. ಸಪ್ನಾ,  ಸಿಂಡಿಕೇಟ್ಸದಸ್ಯರಾದ ಶ್ರೀ. ವಿನೀತ ಜೋಶಿ, ಶ್ರೀ.ಮಹಾಂತೇಶ ಕಂಬಾರ, ಸಂಗೊಳ್ಳಿ ರಾಯಣ್ಣ ಕಾಲೇಜಿನ ಪ್ರಾಚಾರ್ಯರು ಪ್ರೊ. ಎಂ.ಜಿ.ಹೆಗಡೆ, ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು ಮತ್ತು ಸದರಿ ಕಾರ್ಯಾಗಾರದ ಪ್ರಥಮ ಅವಧಿಯನ್ನು ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಶಿಕ್ಷಕೇತರ ಒಕ್ಕೂಟದ ಅಧ್ಯಕ್ಷರಾದ,  ಶ್ರೀಬಿ. ಶ್ರೀಕಾಂತ್, ಅವರು“CCA & EMPLOYEE WELFARE”ವಿಷಯದ ಕುರಿತು, ಎರಡನೆಯ ಅವಧಿಯನ್ನು, ರಾ.ಚ.ವಿ ಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಜೆ.ಮಂಜಣ್ಣಅವರು“ಯು.ಜಿ.ಸಿ.ನಿಯಮಾವಳಿ”ಕುರಿತು, ಮೂರನೆಯ ಅವಧಿಯನ್ನು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಒಕ್ಕೂಟದ ಗೌರವ ಅಧ್ಯಕ್ಷರಾದ ಶ್ರೀಎಂ.ಬಿ.ಸಜ್ಜನ್ಅವರು“ಕೆಲಸದ ನೈತಿಕತೆ ಮತ್ತು ಆಡಳಿತಾತ್ಮಕ ಕಾರ್ಯ ವಿಧಾನಗಳು”ಎಂಬ ವಿಷಯದ ಕುರಿತು ಹಾಗೂ ಶ್ರೀಎಸ್.ಜಿ. ನಾಗನೂರೆ ಅವರು“ಕೆಸಿಎಸ್ಆರ್  ನಿಯಮಾವಳಿ” ಗಳ ಕುರಿತು ಉಪನ್ಯಾಸ ನೀಡಿದರು.

ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ತುಮಕೂರು ವಿಶ್ವವಿದ್ಯಾಲಯ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಜಾನಪದ ವಿಶ್ವವಿದ್ಯಾಲಯ, ಬಾಗಲಕೋಟೆ ವಿಶ್ವವಿದ್ಯಾಲಯ ಹಾಗೂ ಇತರ ವಿಶ್ವವಿದ್ಯಾಲಯಗಳ ಆಡಳಿತಾಧಿಕಾರಿಗಳು ಮತ್ತು ಬೋಧಕೇತರ ಸಿಬ್ಬಂದಿವರ್ಗ ಹಾಗೂ ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಕಾಲೇಜುಗಳ ಬೋಧಕೇತರ ಸಿಬ್ಬಂದಿಯು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಹಾಯಕ ಕುಲಸಚಿವ ಡಾ.ರಶ್ಮಿಪೈ ಹಾಗೂ ಕಚೇರಿ ಅಧೀಕ್ಷಕರು ಶ್ರೀಶ್ರೀಮಂತ ಮಾದರ ಅವರು ಪ್ರಾರ್ಥಿಸಿದರು. ಉಪ ಕುಲಸಚಿವರಾದ ಗೌರಮ್ಮ ಪಾಟೀಲ ವಂದಿಸಿದರು ಸಿಬ್ಬಂದಿಯಾದ ಶ್ರೀ.ರವಿ ಒಂಟಗೋಡಿ ಸ್ವಾಗತಿಸಿದರು. ಶೀತಲಅಕ್ಕೋಳೆಅವರುನಿರೂಪಿಸಿದರುರಾಣಿಚನ್ನಮ್ಮವಿಶ್ವವಿದ್ಯಾಲಯದಎಲ್ಲಶಿಕ್ಷಕೇತರಸಿಬ್ಬಂದಿಗಳುಉಪಸಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!