ಚಿಕ್ಕೋಡಿ: ಹಣಬರ ಯಾದವ, ಗೊಲ್ಲ , ಗೌಳಿ,ಸಮಾಜದ 100 ವರ್ಷಗಳ ಐತಿಹಾಸಿಕ ಅತಿ ದೊಡ್ಡ ಸಮಾವೇಶ ಆರ್ ಡಿ ಹೈಸ್ಕೂಲ್, ಮೈದಾನ ಚಿಕ್ಕೋಡಿಯಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ 10,000 ಯಾದವ್ ಸಮಾಜದ ಜನರ ಮಧ್ಯ ಉಪಸ್ಥಿತಿಯಲ್ಲಿ ಸಮಾವೇಶ ನೆರವೇರಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ ಈ ಸಮಾಜ ಒಂದು ನೂರು ವರ್ಷಗಳ ಹಿಂದೆ ಈ ಸಮಾಜದ ಸಂಘಟನೆ ಪ್ರಾರಂಭ ಮಾಡಲಾಗಿತ್ತು ಹಲೋ ಕಾರಣಗಳಿಂದ ಹಿಂದುಳಿದ ಈ ಸಮಾಜ ಈಗ ಸಂಘಟನೆಯಲ್ಲಿ ಹೋರಾಟಗಾರರ ಬೆಂಬಲ ಒತ್ತಡ ಶ್ರದ್ದೆ ಒಕ್ಕಟ್ಟು ಇದು ಇಂದು ನೂರು ವರ್ಷಗಳ ಐತಿಹಾಸಿಕ ಸಮಾವೇಶ ಮಾಡಿಕೊಳ್ಳುತ್ತಿದೆ ಹೇಳಿದರು.
ಸನ್ಮಾನ್ಯ ಮುಖ್ಯಮಂತ್ರಿಗಳು ಹಿಂದೆ ಕುಳಿತಿರುವ ಸ್ವಾಮೀಜಿಗಳಿಗೆ ಮೂರು ಮಂತ್ರಗಳ ಮಂತ್ರ ನುಡಿದರು ಶಿಕ್ಷಣ, ಸಂಘಟನೆ, ಹೋರಾಟ, ಇದು ಪ್ರಜಾ ಪ್ರಭುತ್ವದ ಹಕ್ಕು ಎಂದರು. ಇನ್ನು ಮುಂದೆ ಈ ಹನಬರ್ ಯಾದವ್, ಗೊಲ್ಲ, ಗೌಳಿ, ಸಮಾಜಕ್ಕೆ ನಮ್ಮ ಸರ್ಕಾರ ಬೆಂಬಲಿಸಲು ಸದಾ ಸಿದ್ಧ ಇದು ಒಂದೇ ಸಮಾಜವಲ್ಲ ಇನ್ನುಳಿದ ಎಲ್ಲ ಹಿಂದುಳಿದ ವರ್ಗದ ಸಮಾಜಗಳಿಗೂ ನಾವು ಬೆಂಬಲಿಸಲು ನಾವು ಸಿದ್ಧ ಇದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿಯೂರು ಮಾತನಾಡಿ ಇದು ಹನಬರ ಯಾದವ ಸಮಾಜ ಇಷ್ಟೊಂದು ಸಂಖ್ಯೆಯಲ್ಲಿ ಇದ್ದರೂ ಕೂಡ ಗೊತ್ತಿಲ್ಲದ ಮಾತಾಗಿತ್ತು ಆದರೆ ಇವತ್ತು ಚಿಕ್ಕೋಡಿಯಲ್ಲಿ ನಡೆದ ಈ ನೂರು ವರ್ಷಗಳ ಐತಿಹಾಸಿಕ ಸಮಾವೇಶ ಮುಖಾಂತರ ಈ ಸಮಾಜದಲ್ಲಿ ಇಷ್ಟೊಂದು ಸಂಖ್ಯೆ ಇದೆ ಅನ್ನೋದು ತಿಳಿದಿದೆ ಎಂದರು.
ಮತ್ತು ಇದಕ್ಕೆ ನಮ್ಮ ಸರ್ಕಾರ ಯಾವತ್ತುಕೂಡಾ ಬೆಂಬಲಿಸಲು ಸದಾ ಸಿದ್ಧವಾಗಿದೆ ಎಂದು ತಿಳಿಸಿದರು.
ಶ್ರೀ ಶ್ರೀ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಶ್ರೀ ಕೃಷ್ಣ ಮಠ ಚಿತ್ರದುರ್ಗ ಇವರು ಮಾತನಾಡಿ ಹಣಬರ ಯಾದವ್ ಸಮಾಜ ಇದು ರಾಜ್ಯದಲ್ಲಿ ಅಷ್ಟೇ ಅಲ್ಲ ಇಡೀ ದೇಶದಲ್ಲಿ ದೊಡ್ಡ ಸಮಾಜ ಅದಕ್ಕಾಗಿ ತಮ್ಮ ಹಕ್ಕಕಾಗಿ ಹೋರಾಟ ಮಾಡಬೇಕು. ಶಿಕ್ಷಣಕ್ಕೆ ಒತ್ತು ಕೊಡಬೇಕು. ಇದು ಈ ಚಿಕ್ಕೋಡಿಯಲ್ಲಿ ಮಾಡಿರುವ ನೂರು ವರ್ಷಗಳ ನಂತರದ ಐತಿಹಾಸಿಕ ಸಮಾವೇಶ ಇದು ನಮ್ಮ ಮನಸ್ಸಿಗೆ ಆನಂದ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಎಂ ಎಲ್ ಸಿ ಶ್ರೀ ಡಿಟಿ ಶ್ರೀನಿವಾಸ್ ಹಾಗೂ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಇವರು ಕೂಡ ಮಾತನಾಡಿ ಇದು ನೂರು ವರ್ಷಗಳ ನಂತರದ ಐತಿಹಾಸಿಕ ಸಮಾವೇಶ ನಮ್ಮ ಸಮಾಜದಲ್ಲಿ ಅತಿ ಖುಷಿಯಾಗುವ ಸಂದರ್ಭ ಹಾಗೂ ಸಮಾಜದ ನೆನಪಿನ ಕಾಣಿಕೆಯಾಗಿದೆ ಎಂದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಚಿಕ್ಕೋಡಿ ಸಂವಸದರಾದ ಕುಮಾರಿ ಪ್ರಿಯಾಂಕ ಜಾರಕಿಹೊಳಿ,ಮಾಜಿ ಎಂಎಲ್ಸಿ ಆದ ಶ್ರೀ ಮಹಾಂತೇಶ್ ಕವಟಗಿಮಠ, ರಾಯಬಾಗ ಕ್ಷೇತ್ರದ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ, ಚಿಕ್ಕೋಡಿ ಸದಲಗಾ ಕ್ಷೇತ್ರದ ಶಾಸಕರಾದ ಶ್ರೀ ಗಣೇಶ ಹುಕ್ಕೇರಿ, ಈ ಸಮಾಜಕ್ಕೆ ಸಂಬಂಧಪಟ್ಟಂತೆ ಗಣ್ಯಾಧಿ ಗಣಿ ವ್ಯಕ್ತಿಗಳು ಮುಖಂಡರು ಉಪಸ್ಥಿತರಿದ್ದರು.
ಇನ್ನು ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶೀತಲ್ ಮುಂಡೆ, ಮಂಜುನಾಥ್ ಪಾಟೀಲ್, ಮಾಹಾದೇವ ಕರೋಲಿ, ಇನ್ನು ರಾಜ್ಯ್ಯಾದಂತ ಸಂಘಟನೆ ಕಾರ್ಯಕರ್ತರು ಹಾಗೂ ಸದಸ್ಯರು ಇವರೆಲ್ಲರೂ ಉಪಸ್ಥಿತಿಯಲ್ಲಿ ಈ ಐತಿಹಾಸಿಕ ಸಮಾವೇಶ ಕಾರ್ಯಕ್ರಮ ಜರುಗಿತು.
ರಾಜು ಮುಂಡೆ ಚಿಕ್ಕೋಡಿ