ಬೆಂಗಳೂರು : ಕನಕಪುರ ವಿಧಾನ ಸಭಾ ಕ್ಷೇತ್ರದಲ್ಲಿ ಶಿವನಹಳ್ಳಿಯ ಮಾದರಿ ಡಿಜಿಟಲ್ ಲೈಬ್ರರಿ ಮನೆಯೇ ಮೊದಲ ಪಾಠ ಶಾಲೆ’ ಎಂಬಂತೆ ಗ್ರಂಥಾಲಯವು ವಿದ್ಯೆ ಬುದ್ಧಿ ಜ್ಞಾನವನ್ನು ವಿಕಾಸ ಮಾಡಿಕೊಳ್ಳುವ ಕೇಂದ್ರ ಮತ್ತು ವಿದ್ಯಾ ಭಂಡಾರವಾಗಿದೆ. ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ವಿದ್ಯಾವಂತ ಯುವಕರು ಗ್ರಂಥಾಲಯದಲ್ಲಿ ಹೆಸರಾಂತ ಬರಹಗಾರರು, ಸಾಹಿತ್ಯಗಳು, ಕವಿಗಳು ಮತ್ತು ಪಠ್ಯೇ ಪುಸ್ತಕ ಸಂಭಂದಿಸಿದಂತೆ ಹಲವಾರು ಬಗೆ ಬಗೆಯ ಪುಸ್ತಕಗಳ ವಿಚಾರಧಾರೆಯನ್ನು ಓದುವ ಮೂಲಕ ಅರ್ಥೈಸಿಕೊಳ್ಳಬೇಕು ಎಂದು ಶಿವನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ ಎಮ್ ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟರು.

ಸುಮಾರು ಎರಡು ಲಕ್ಷ ರೂ.ಗಳ ವೆಚ್ಚದಲ್ಲಿ ಸಾವಿರಾರು ಪುಸ್ತಕಗಳು ಖರೀದಿ ಮಾಡಲಾಗಿದೆ ಜೊತೆಗೆ ಲ್ಯಾಪ್ಟಾಪ್, ಕಂಪ್ಯೂಟರ್, ಅಳವಡಿಸಲಾಗಿದೆ.
ಕನ್ನಡ ಮತ್ತು ಇಂಗ್ಲೀಷ್ ದಿನ ಪತ್ರಿಕೆಗಳ ವ್ಯವಸ್ಥೆ ಮಾಡಲಾಗಿದೆ ಈ ಉನ್ನತ ಮಟ್ಟದ ಗ್ರಂಥಾಲಯದಲ್ಲಿ 554ವಿದ್ಯಾರ್ಥಿಗಳು ಠೇವಣಿ ಪಾವತಿಸಿ ನೋಂದಣಿ ಆಗಿದ್ದಾರೆ. 6000 ವಿದ್ಯಾರ್ಥಿಗಳು ಉಚಿತ ನೋಂದಣಿಯಾಗಿದ್ದಾರೆ.

ಶಿವನಹಳ್ಳಿ ಗ್ರಂಥಾಲಯ ತುಂಬಾ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದ ಚೈತ್ರಾ ಅವರಿಗೆ ಸಲ್ಲುತ್ತದೆ ಎಂದು ಶಿವನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ ಎಮ್ ಕೃಷ್ಣಮೂರ್ತಿ ಭಾರತ ವೈಭವ ಹಾಗೂ ಬಿ ವಿ ನ್ಯೂಸ್-5 ಚಾನಲ್ ಬೆಂಗಳೂರು ಪ್ರತಿನಿಧಿ ಅಯ್ಯಣ ಮಾಸ್ಟರ್ ಜೊತೆಗೆ ಮಾತನಾಡಿ ಪ್ರಕಟಣೆ ತಿಳಿಸಿದ್ದಾರೆ.
ವರದಿ:ಅಯ್ಯಣ್ಣ ಮಾಸ್ಟರ್




