ಹೈದರಾಬಾದ್: ಇತ್ತೀಚೆಗೆ ಎಲ್ಲೆಡೆ ಆನ್‌ಲೈನ್ ಗೇಮ್, ಬೆಟ್ಟಿಂಗ್ ಆ್ಯಪ್ಗಳ ಹಾವಳಿ ಹೆಚ್ಚಾಗಿದ್ದು, ತೆಲಂಗಾಣದಲ್ಲಿ ಇದರ ನಿಷೇಧದ ಹೊರತಾಗಿಯೂ ಕಳೆದ ಒಂದೂವರೆ ವರ್ಷಗಳಲ್ಲಿ ರಾಜ್ಯಾದ್ಯಂತ 24 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಿ ಅನೇಕ ಯುವಕರು ಆನ್‌ಲೈನ್ ಬೆಟ್ಟಿಂಗ್ ಬಲೆಗೆ ಬೀಳುತ್ತಿದ್ದಾರೆ. ”ಆನ್‌ಲೈನ್ ಗೇಮ್ ಹಾಗೂ ಬೆಟ್ಟಿಂಗ್ ಆ್ಯಪ್ಗಳಲ್ಲಿ ಆಡಿ, ಒಂದೇ ದಿನದಲ್ಲಿ ಶ್ರೀಮಂತರಾಗಿ” ಎಂಬ ಬರುವ ಚೇತೋಹಾರಕ ಜಾಹೀರಾತುಗಳಿಂದ ಹಾಗೂ ನಕಲಿ ಯಶಸ್ಸಿನ ಕಥೆಗಳಿಂದ ಆಮಿಷಕ್ಕೊಳಗಾಗಿ ಅನೇಕ ಯುವಕರು ಈ ಬೆಟ್ಟಿಂಗ್ ಸುಳಿಗೆ ಸಿಲುಕುತ್ತಿದ್ದಾರೆ ಎಂಬ ಮಾಹಿತಿ ಇದೆ.
ಅಷ್ಟೇ ಅಲ್ಲದೇ ಅಕ್ರಮ ಬೆಟ್ಟಿಂಗ್ ವೇದಿಕೆಗಳನ್ನು ಉತ್ತೇಜಿಸುವ ಸೆಲೆಬ್ರಿಟಿಗಳು ಮತ್ತು ಇನ್‌ಫ್ಲೂಯೆನ್ಸರ್‌ಗಳ ಮಾತಿಗೆ ಮರುಳಾಗುತ್ತಿದ್ದು, ಗೇಮಿಂಗ್ ಕಾಯ್ದೆ, 2017ರ ಕಾಯ್ದೆಯಡಿ ನಿಷೇಧದ ಹೊರತಾಗಿಯೂ, ಯುವ ಪಡೆ ದಿನದಿಂದ ದಿನಕ್ಕೆ ಆನ್‌ಲೈನ್ ಗೇಮ್ ಹಾಗೂ ಬೆಟ್ಟಿಂಗ್ ಆ್ಯಪ್ಗಳಲ್ಲಿ ಮುಳುಗಿ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ. ಇದಕ್ಕೆ ಇತ್ತೀಚೆಗೆ ಮೃತಪಟ್ಟ ಪ್ರಶಾಂತ್ ಎಂಬ ಯುವಕನ ಸಾವೇ ಸಾಕ್ಷಿ!