ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಿಸಿದ ಶಂಕೆಯ ಆರೋಪದ ಮೇರೆಗೆ ಓನ್ಲಿ ಫ್ಯಾನ್ಸ್ ಸ್ಟಾರ್ ಬೋನಿ ಬ್ಲೂಳನ್ನು ಬಂಧಿಸಲಾಗಿದೆ. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರದ ನೈತಿಕತೆಯ ಕಾನೂನನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಆಕೆಯ ಹೊರತಾಗಿ, ಬಿಡುಗಡೆಯಾದ 15 ಆಸ್ಟ್ರೇಲಿಯನ್ನರು ಸೇರಿದಂತೆ 17 ಪುರುಷ ಪ್ರವಾಸಿಗರನ್ನು ಸಹ ಬಂಧಿಸಲಾಗಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ.
ಇನ್ನೂ ತಪ್ಪಿತಸ್ಥರೆಂದು ಸಾಬೀತಾದಲ್ಲಿ ಇಂಡೋನೇಷ್ಯಾದ ಕಟ್ಟುನಿಟ್ಟಾದ ಅಶ್ಲೀಲತೆಯ ವಿರೋಧಿ ಕಾನೂನುಗಳ ಅಡಿಯಲ್ಲಿ ಬೋನಿ ಬ್ಲೂ ಅವರಿಗೆ 15 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಮತ್ತು 6 ಶತಕೋಟಿ ರೂಪಾಯಿಗಳವರೆಗೆ (ಸುಮಾರು $541,000) ದಂಡವನ್ನು ಎದುರಿಸಬೇಕಾಗುತ್ತದೆ.
ಆದಾಗ್ಯೂ, ಆಕೆಯನ್ನು ಗಡೀಪಾರು ಮಾಡುವ ಸಾಧ್ಯತೆಯಿದೆ ಎಂದು ಹಲವಾರು ವರದಿಗಳು ಹೇಳುತ್ತವೆ. ಆಕೆಯ ಸದ್ಯದ ಸ್ಥಿತಿಯ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಿಲ್ಲ.




