—————————————————–ಪಾಕ್ ಕ್ರಿಕೆಟಿಗರಿಗೆ ಕೋಚ್ ಹೆಸಾನ್ ಸಲಹೆ
ದುಬೈ: ಕ್ರಿಕೆಟ್ ಅಂಗಳದ ಹೊರಗಿನ ವಿಚಾರಗಳಿಗೆ ಮಹತ್ವ ನೀಡದೇ ಕೇವಲ ಕ್ರಿಕೆಟ್ ಆಟದ ಮೇಲೆ ಗಮನ ಕೇಂದ್ರಿಕರಿಸಬೇಕೆಂದು ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಕೋಚ್ ಮೈಕ್ ಹೆಸಾನ್ ಪಾಕ್ ಆಟಗಾರರಿಗೆ ಸಲಹೆ ಮಾಡಿದ್ದಾರೆ.
ಪಂದ್ಯಾವಳಿಯುದ್ದಕ್ಕೂ ಆಟಗಾರರು ಆಟಕ್ಕಿಂತ ಹೆಚ್ಚಾಗಿ ಆಟದ ಹೊರಗಿನ ವಿಚಾರಗಳಿಗೆ ಗಮನ ಹರಿಸುತ್ತಿದ್ದಾರೆ. ತಂಡದ ಆಟಗಾರರು ಮೊದಲು ಇದನ್ನು ಕೈ ಬಿಡಬೇಕೆಂದು ಹೇಳಿದ್ದಾರೆ. ಹೇಗೋ ಏರಿಳಿತಗಳ ನಡುವೆ ಪಂದ್ಯಾವಳಿಯಲ್ಲಿ ಫೈನಲ್ ತಲುಪಿದ್ದು ಉತ್ತಮ ವಿಚಾರ. ಈಗ ಫೈನಲ್ ತಲುಪಿರುವ ಅವಕಾಶವನ್ನು ಬಳಸಿಕೊಳ್ಳಬೇಕು. ಕ್ರಿಕೆಟ್ ಮೇಲೇಯೇ ಗಮನ ಹರಿಸಿ ಉತ್ತಮ ಕ್ರಿಕೆಟ್ ಆಡುವತ್ತ ಚಿತ್ತ ಹರಿಸಬೇಕೆಂದು ಆ ತಂಡದ ಆಟಗಾರರಿಗೆ ಕೋಚ್ ಹೆಸಾನ್ ಕಿವಿ ಮಾತು ಹೇಳಿದ್ದಾರೆ.




