ಸಾವಳಗಿ : TAPCMS ಜಮಖಂಡಿ ನೌಕರರ ಮೇಲೆ ದೌರ್ಜನ್ಯ ಮಾಡುತ್ತಿರುವ ಆಡಳಿತ ಮಂಡಳಿ ಅಧ್ಯಕ್ಷರಾದ ಮಹಾನಿಂಗ ತಳವಾರ ಮೇಲೆ ಸಿಬ್ಬಂದಿಗಳು ಆರೋಪ ಮಾಡುತ್ತಿದರೆ ನೌಕರರಿಗೆ ಕಿರುಕುಳ ಕೊಡುತ್ತಿದ್ದು ಎಲ್ಲ ಸಿಬ್ಬಂದಿಗಳಿಗೆ ಹಣದ ಬೇಡಿಕೆ ಇಟ್ಟಿದಾರೆ ಎಂದು ಕೇಳಿ ಬರುತ್ತಿದೆ ಮತ್ತು ಸಿಬ್ಬಂದಿಗಳು ಇರದ ವೇಳೆ ಹೋಗಿ ಅಧ್ಯಕ್ಷರಾದ ಮಹಾನಿಂಗ ತಳವಾರ ಹೋಗಿ ಅಕ್ಕಿ ದಾಸ್ತಾನು ಗೊಡಮಿನ ಕೀಲಿ ಹೊಡೆದು ಒಳಗೆ ಇರುವ ಅಕ್ಕಿ ಮೂಟೆಗಳನ್ನು ಕದಿಯಲು ಪ್ರಯತ್ನ ಮಾಡಿದ್ದಾರೆ ಎಂದು ಸಿಬ್ಬಂದಿಗಳು ಆರೋಪ ಮಾಡಿದ್ದಾರೆ ಈ ಅಧ್ಯಕ್ಷನ ಹುಚ್ಚಾಟಕ್ಕೆ ನೌಕರರು ಬೇಸತ್ತು ಹೋಗಿದ್ದಾರೆ.
ಇವರ ಆಡಳಿತಕ್ಕೆ ಬೆಸತ್ತು ನೌಕರರು ಇಂದು ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದರು ಪ್ರತಿಭಟನಾ ನೌಕರರ ಮೇಲೆ ಅಧ್ಯಕ್ಷರು ಮತ್ತು ಅವರ ಹಿಂಬಾಲಕರು ಧಮ್ಕಿ ಹಾಕೋ ಕೆಲಸ ಮಾಡಿದ್ದಾರೆ ದಯವಿಟ್ಟು ನಮ್ಮನ್ನು ನೌಕರಿ ಮಾಡಲು ಬಿಡಿ ಎಂದು ನೌಕರು ಅಳಲು ತೋಡಿಕೊಂಡರು ಅದರಲ್ಲಿ ಕೆಲವು ನೌಕರರು ಅಂಗವಿಕಲರಾಗಿದ್ದು ಅವರ ಮೇಲೆಯೂ ಕೂಡ ದೌರ್ಜನ್ಯ ಮಾಡಲು ಮುಂದಾಗಿದ್ದ ಅಧ್ಯಕ್ಷ ಎಂದು ಆರೋಪ ಮಾಡುತ್ತಿದ್ದಾರೆ. ಈ ನೌಕರರನ್ನು ಬೇಕಾಬಿಟ್ಟಿ ಮಾತನಾಡುತ್ತ ಅಸಭ್ಯ ವರ್ತನೆ ತೋರುತ್ತಿದ್ದಾರೆ.
ವರದಿ: ಅಜಯ್ ಕಾಂಬಳೆ




