Ad imageAd image

ಪೊಲೀಸ್ ಅಧಿಕಾರಿಗಳಿಂದ ತೆರೆದಮನೆ ಕಾರ್ಯಕ್ರಮ

Bharath Vaibhav
ಪೊಲೀಸ್ ಅಧಿಕಾರಿಗಳಿಂದ ತೆರೆದಮನೆ ಕಾರ್ಯಕ್ರಮ
WhatsApp Group Join Now
Telegram Group Join Now

ವಿಜಯಪುರ : ಜಿಲ್ಲೆಯ ನಿಡುಗುಂದಿ ತಾಲೂಕಿನಲ್ಲಿ ಪೊಲೀಸ್ ಅಧಿಕಾರಿಗಳಿಂದ ತೆರೆದಮನೆ ಕಾರ್ಯಕ್ರಮ.
ತೆರದಮನೆ ಕಾರ್ಯಕ್ರಮ ನಿಡಗುಂದಿ ಪೊಲೀಸ್ ಠಾಣೆಯ ಅಧಿಕಾರಿಗಳು ವಿವಿಧ ಶಾಲಾ ಕಾಲೇಜಿನ ಮಕ್ಕಳಿಗೆ ತೆರೆದ ಮನೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಪಿಎಸ್ಐ ಶಿವಾನಂದ ಪಾಟೀಲ್ ತೆರೆದಮನೆ ಕಾರ್ಯಕ್ರಮದ ಬಗ್ಗೆ ಹೀಗೆ ಹೇಳಿದರು. ಮೇಲಾಧಿಕಾರಿಗಳ ಆದೇಶದ ಮೇರೆಗೆ ತೆರೆದಮನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರ ಮಧ್ಯೆ ಹಾಗೂ ಪೊಲೀಸರ ಮಧ್ಯೆ ಅನೋನ್ಯವಾದ ಸಂಬಂಧವನ್ನು ಕಲ್ಪಿಸುವ ದೃಷ್ಟಿಯಿಂದ ಯಾವುದೇ ಸಮಸ್ಯೆಗಳು ಇದ್ದರೂ ಕೂಡ ಠಾಣೆಗೆ ಬಂದು ದೂರನ್ನು ಸಲ್ಲಿಸಿವದು. ಯಾವುದೇ ಭಯ ಆತಂಕ ಅಪನಂಬಿಕೆ ಇಟ್ಟುಕೊಳ್ಳದೆ ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಲ್ಪಿಸುವ ಜವಾಬ್ದಾರಿ ನಮ್ಮದು. ಈ ತೆರೆದಮನೆ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲು ತುಂಬಾನೇ ಖುಷಿಯಾಗುತ್ತದೆ, ಠಾಣೆಯಲ್ಲಿ ಇರುವ, ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿ ಪಡಿಸಿದರು. ವಿದ್ಯಾರ್ಥಿಗಳು ಮಾಹಿತಿಯನ್ನು ಪಡೆದು ತಮ್ಮ ಪಾಲಕರಿಗೆ, ಪೋಷಕರಿಗೆ, ಸಾರ್ವಜನಿಕರಿಗೆ ತಾವು ತಿಳಿದುಕೊಂಡಿರುವ ಮಾಹಿತಿಯನ್ನು ಪ್ರತಿಯೊಬ್ಬರಲ್ಲಿ ಕಾನೂನಿನ ಅರಿವನ್ನು ತಿಳಿಸಿ ಎಂದು ಹೇಳಿದರು. ನಿಡಗುಂದಿಯ ಬನಶಂಕರಿ ಪಬ್ಲಿಕ್ ಸ್ಕೂಲ್ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ತೆರೆದಮನೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಈ ಕಾರ್ಯಕ್ರಮದಲ್ಲಿ ನಿಡಗುಂದಿ ಠಾಣೆಯ ಸಿಪಿಐ ಅಶೋಕ್ ಚೌಹಾಣ್, ಪಿಎಸ್ಐ ಶಿವಾನಂದ ಪಾಟೀಲ್, ಬಿ ಎಸ್ ಹಿರೇಮಠ, ಎಸ್ ಎಂ ಮಠಪತಿ, ಎಲ್ ಜಿ ಹಾದಿಮನಿ ಇನ್ನು ಅನೇಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ :ಅಲಿ ಮಕಾನದಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!