ಗೋಕಾಕ : ಆಪರೇಷನ್ ಮಾಡುವಾಗ ವೈದ್ಯರ ನಿರ್ಲಕ್ಷದಿಂದ ಗೋಕಾಕ ನಗರದಲ್ಲಿರುವ ನಿಸರ್ಗ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ.
ದಿ: 13 ರಂದು ಗೋಕಾಕ ನಿಸರ್ಗ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಉಪಚಾರಕ್ಕೆ ದಾಖಲಿಸಿದಾಗ ದಿ: 17 ರಂದು ನಿಸರ್ಗ ಆಸ್ಪತ್ರೆಯ ವೈದ್ಯರಾದ ಡಾ: ಬೀಮಶಿ ಕೋಳಿ, ಡಾ: ರಾಮಪ್ಪ ಅರಬಾವಿ ಡಾ: ಪೂಜಾ ಸಾಗರೆ ಇವರು ಮೃತ ಬಾಲಕಿ ಶ್ರುತಿ ಕರೆಪ್ಪಾ ಚಾಗಲಾ ಇವರ ಆಪರೇಷನ್ ಮಾಡುವಾಗ ಅವರ ನಿರ್ಲಕ್ಷ ಮಾಡಿದ್ದ ಕಾರಣ ಬಾಲಕಿ ಮೃತವಾಗಿದ್ದಳೆಂದು ಬಾಲಕಿಯ ತಾಯಿ ವೈದ್ಯರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ನಾಲ್ಕು ದಿನ ಆಸ್ಪತ್ರೆಯಲ್ಲಿ ಇಟ್ಟುಕೊಂಡು ಆಪರೇಷನ್ ಮಾಡುತ್ತೇವೆಂದು ಹೇಳಿ ನನ್ನ ಮಗಳ ಜೀವ ತೆಗೆದುಕೊಂಡಿದ್ದಾರೆ,ಅಷ್ಟೆ ಮೃತ ಆಗಿದ್ದರು ಸಹ ನಿಮ್ಮ ಮಗಳ ಪರಿಸ್ಥಿತಿ ಬಹಳ ಗಂಬೀರವಾಗಿದೆ,
ಬೆಳಗಾವಿ ಕೆಎಲ್ ಇ ಗೆ ಆಸ್ಪತ್ರೆಗೆ ಚಿಕಿತ್ಸೆ ನೀಡಿದ ದಾಖಲಾತಿ ಇಲ್ಲದೆ ಆಸ್ಪತ್ರೆಯ ಗೇಟ್ ಹೊರಗಡೆ ನಿಲ್ಲಿಸಿ ಹೊಗುತಿದ್ದರು,
ಆಗ ಕೆಎಲ್ ಇ ಆಸ್ಪತ್ರೆಯ ವೈದ್ಯರು ಈ ಬಾಲಕಿ ಮೃತವಾಗಿ ಎರಡು ಗಂಟೆಯಾಗಿದೆ ಎಂದು ಹೇಳಿದಾಗ ತಾಯಿ ಅಕ್ರಂದನ ಮುಗಿಲು ಮುಟ್ಟಿತು.
ಇನ್ನು ಈ ಆಸ್ಪತ್ರೆಯಲ್ಲಿ ಯಾವ ಸ್ಪೇಷಾಲಿಟಿ ಇಲ್ಲ ಅಯುಷ್ಮಾನ ಹೆಸರಲ್ಲಿ ಮಾಫಿಯಾ ನಡೆಸಿದ್ದಾರೆ.ಇಲ್ಲಿ ಮಕ್ಕಳ ಜೀವ ತೆಗೆಯುತಿದ್ದಾರೆ ಇಂತವರಿಗೆ ಕಾನೂನು ತಕ್ಷ ಶಿಕ್ಷೆ ನೀಡಬೇಕೆಂದು ಆಕ್ರೋಶ ಹೊರಹಾಕಿದರು.
ಮೃತ ಬಾಲಕಿ ಶ್ರುತಿ ಕರೆಪ್ಪಾ ಚೌಗಲಾ ಇವರ ತಾಯಿ ನನ್ನ ಮಗಳಿಗೆ ಆದ ಪರಿಸ್ಥಿತಿ ಇನ್ಯಾವ ಮಕ್ಜಳಿಗೂ ಆಗಬಾರದು, ಇಂತಹ ಆಸ್ಪತ್ರೆಯನ್ನು ಮೇಲಾಧಿಕಾರಿಗಳು ತಕ್ಷಣ ಬಂದ ಮಾಡಿಸಬೇಕೆಂದು ಬೇಡಿಕೊಂಡಳು,
ಇತ್ತ ನಿಸರ್ಗ ಆಸ್ಪತ್ರೆಯ ವೈದ್ಯರು ನಮ್ಮ ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾವು ನ್ಯಾಯಾಲಯ ಎನು ಹೇಳುತ್ತದೆಯೊ ಅದಕ್ಕೆ ತಲೆಬಾಗಿಸುತ್ತೇವೆಂದು ಹೇಳಿದ್ದಾರೆ.
ಮನೋಹರ ಮೇಗೇರಿ