ಮುಂಬೈ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ 9 ಅಡಗುತಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ್ದು, ಈ ಬೆನ್ನಲ್ಲೇ ಬುಧವಾರ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಏರಿಳಿತ ಕಂಡಿವೆ.
ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ಸಾಕಷ್ಟು ಏರಿಳಿತ ಕಂಡುಬಂದಿದ್ದು, ಸೆನ್ಸೆಕ್ಸ್ 80,844.63 ದಾಖಲೆಯ ತಲುಪಿದರೆ, ದಿನದ ಕನಿಷ್ಠ ಮಟ್ಟ 79,937.48ಕ್ಕೆ ಇಳಿಯಿತು. ನಿಫ್ಟಿ ಗರಿಷ್ಠ 24,449.60 ಅಂಕಗಳ ದಾಖಲಾಗಿ, ಕನಿಷ್ಠ 24,220 ಅಂಕಗಳಿಗೆ ತಲುಪಿದೆ.
ಪಹಲ್ಗಾಮ್ ಉಗ್ರರ ದಾಳಿಗೆ ಭಾರತ ಸೇಡು ತೀರಿಸಿಕೊಂಡಿದ್ದು, ಬುಧವಾರ ನಸುಕಿನಲ್ಲೇ ಜೈಶ್ ಎ ಮೊಹಮ್ಮದ್ ಭದ್ರಕೋಟೆಯಾದ ಬಹವಾಲ್ಪುರ್, ಹಾಗೂ ಲಷ್ಕರ್ ಎ ತೋಯ್ಬಾದ ನೆಲೆ ಮುರಿಡ್ಕೆ ಸೇರಿದಂತೆ 9 ಉಗ್ರರ ಅಡುಗುತಾಣಗಳ ಮೇಲೆ ದಾಳಿ ನಡೆಸಿದೆ. ಆಪರೇಷನ್ ಸಿಂಧೂರ ಎಂಬ ಹೆಸರಿನಲ್ಲಿ ಈ ಸೇನಾ ದಾಳಿ ನಡೆಸಲಾಗಿದೆ.
ದಾಳಿಗೆ ಹೆಮ್ಮೆ ವ್ಯಕ್ತಪಡಿಸಿರುವ ಜಿಯೋಜಿಟ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್‌ನ ಚೀಫ್ ಇನ್ವೆಸ್ಟ್ಮೆಂಟ್ ಸ್ಟ್ರಾಟಜಿಸ್ಟ್, ವಿ.ಕೆ. ವಿಜಯ್ಕುಮಾರ್, ಮಾರುಕಟ್ಟೆ ದೃಷ್ಟಿಕೋನದಿಂದ ಆಪರೇಷನ್ ಸಿಂಧೂರ ಕೇಂದ್ರಿಕೃತವಾಗಿದ್ದು, ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಭಾರತದ ನಿಖರ ದಾಳಿಗಳಿಗೆ ಶತ್ರುಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ. ಭಾರತದ ಪ್ರತೀಕಾರದ ದಾಳಿಯು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದರು.
ಮಾರುಕಟ್ಟೆಯ ಪ್ರಮುಖ ಸ್ಥಿತಿಸ್ಥಾಪಕತ್ವ ಎಂದರೆ, ಕಳೆದ 14 ವಹಿವಾಟು ದಿನಗಳಲ್ಲಿ ಭಾರತವು ನಿರಂತರ ಎಫ್‌ಐಐ (ವಿದೇಶಿ ಸಂಸ್ಥೆಗಳ ಹೂಡಿಕೆ) ಖರೀದಿಯಾಗಿದ್ದು, ನಗದು ಮಾರುಕಟ್ಟೆಯಲ್ಲಿ ಒಟ್ಟು 43,940 ಕೋಟಿ ರೂ.ಗಳನ್ನು ಮುಟ್ಟಿದೆ. ಈ ಎಫ್‌ಐಐ ಡಾಲರ್ ಎದುರಿಗಿನ ದುರ್ಬಲತೆ ಮತ್ತು ಅಮೆರಿಕ ಹಾಗೂ ಚೀನಾದ ನಿಧಾನ ಬೆಳವಣಿಗೆಯಂತಹ ಜಾಗತಿಕ ಸಣ್ಣ ಅಂಶದ ಮೇಲೆ ಕೇಂದ್ರಿಕೃತವಾಗಿದೆ. ಇದು ಮಾರುಕಟ್ಟೆಯಲ್ಲಿ ಚೇತರಿಕೆಗೆ ಸಹಕಾರಿಯಾಗಲಿದೆ. ಆದರೂ, ಗಡಿಯಲ್ಲಿನ ಬೆಳವಣಿಗೆಗಳ ಮೇಲೆ ಹೂಡಿಕೆದಾರರು ಗಮನ ಹರಿಸಬೇಕಿದೆ ಎಂದಿದ್ಧಾರೆ.
ಸೆನ್ಸೆಕ್ಸ್ ಕಂಪನಿಗಳಲ್ಲಿ, ಹೆಚ್‌ಸಿಎಲ್ ಟೆಕ್, ಏಷ್ಯನ್ ಪೇಂಟ್ಸ್, ಹಿಂದೂಸ್ತಾನ್ ಯೂನಿಲಿವರ್, ಸನ್ ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ನೆಸ್ಲೆ ನಷ್ಟ ಹೊಂದಿವೆ. ಟಾಟಾ ಮೋಟಾರ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಪವರ್ ಗ್ರಿಡ್ ಹೆಚ್ಚಿನ ಲಾಭ ಗಳಿಸಿವೆ.
ಮಂಗಳವಾರದ ದತ್ತಾಂಶದ ಪ್ರಕಾರ, ಎಫ್‌ಐಐ 3,794.53 ಈಕ್ವಿಟಿ ದಾಖಲಿಸಿದೆ. ಏಷ್ಯಾದ ಮಾರುಕಟ್ಟೆಯಲ್ಲಿ, ದಕ್ಷಿಣ ಕೊರಿಯಾದ ಕೋಸ್ಪಿ, ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸಕಾರಾತ್ಮಕವಾಗಿದ್ದು, ಜಪಾನ್‌ನ ನಿಕ್ಕಿ 225 ಕುಸಿತದೊಂದಿಗೆ ವಹಿವಾಟು ನಡೆಸುತ್ತಿದೆ. ಮಂಗಳವಾರ ಅಮೆರಿಕ ಮಾರುಕಟ್ಟೆಯೂ ಕುಸಿತದೊಂದಿಗೆ ಮುಕ್ತಾಯ ಕಂಡಿತ್ತು.
ಮಾರುಕಟ್ಟೆಗಳು ಮುಂದಿನ ಮಿಲಿಟರಿ ಕ್ರಮ, ಜಾಗತಿಕ ಸುಂಕ ಪ್ರಗತಿ ಮತ್ತು ಮೇ 7ರಂದು ಯುಎಸ್ ಫೆಡ್‌ನ ನೀತಿ ನಿರ್ಧಾರ ಈಗ ಮೂರರ ಮೇಲೆ ಅವಲಂಬಿತವಾಗಿವೆ ಎಂದು ಮೆಹ್ತಾ ಈಕ್ವಿಟೀಸ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಪ್ರಶಾಂತ್ ತಾಪ್ಸೆ ತಿಳಿಸಿದ್ದಾರೆ.