Ad imageAd image

‘ಆಪರೇಷನ್ ಕಮಲ’ ಭ್ರಷ್ಟಾಚಾರವಲ್ಲ, ‘ಗ್ಯಾರಂಟಿ ಯೋಜನೆಗಳು’ ಮಾತ್ರ ಮಹಾಪರಾಧ

Bharath Vaibhav
WhatsApp Group Join Now
Telegram Group Join Now

ಬೆಂಗಳೂರು : ‘ಆಪರೇಷನ್ ಕಮಲ’ ಭ್ರಷ್ಟಾಚಾರವಲ್ಲ, ‘ಗ್ಯಾರಂಟಿ ಯೋಜನೆಗಳು’ ಮಾತ್ರ ಮಹಾಪರಾಧ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.

ಬಡವರ ಬದುಕಿನ ಕಲ್ಯಾಣವೆಂದರೆ ಬಿಜೆಪಿಗೆ ಎಲ್ಲಿಲ್ಲದ ಅಸಹನೆ, ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ನಡೆಸಿದ ಪಿತೂರಿ, ಅಪಪ್ರಚಾರ ಒಂದೆರಡಲ್ಲ.ನಮ್ಮ ಪ್ರಣಾಳಿಕೆಯ ಭರವಸೆಗಳನ್ನು “ಆಮಿಷ” ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಿಜೆಪಿ ಬೆಂಬಲಿತರಿಗೆ ಸೋಲಾಗಿದೆ.

ಜನತೆಗೆ ಸುಭದ್ರ ಬದುಕಿನ ಭರವಸೆ ನೀಡುವುದು, ಜನಕಲ್ಯಾಣ ಯೋಜನೆಗಳನ್ನು ರೂಪಿಸುವುದು ಅದ್ಯಾವ ದೃಷ್ಟಿಯಲ್ಲಿ ಚುನಾವಣಾ ಭ್ರಷ್ಟಾಚಾರವಾಗುತ್ತದೆಯೋಬಿಜೆಪಿ ಹೇಳಬೇಕು! ಅರ್ಜಿದಾರರ ಪ್ರಕಾರ, 40% ಕಮಿಷನ್ ಭ್ರಷ್ಟಾಚಾರವಲ್ಲ,

ಜನತೆಗೆ ಸುಳ್ಳು ಭರವಸೆಗಳನ್ನು ನೀಡಿ ವಂಚಿಸುವುದು ಭ್ರಷ್ಟಾಚಾರವಲ್ಲ, ಆಪರೇಷನ್ ಕಮಲ ಮಾಡುವುದು ಭ್ರಷ್ಟಾಚಾರವಲ್ಲ, ಆದರೆ ಗ್ಯಾರಂಟಿ ಯೋಜನೆಗಳು ಮಾತ್ರ ಮಹಾಪರಾಧ! ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!