ರಾಯಚೂರು :ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಬೆಂಬಲಿಸಿ ದೇಶದ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿಸಲು ರಾಯಚೂರಿನ ಯುವಕರು, ನಾಗರಿಕರಿಂದ ಬೃಹತ್ ತಿರಂಗ ಯಾತ್ರೆ ನಡೆಯಿತು.
ನಗರದ ರೈಲ್ವೆ ಸ್ಟೇಷನ್ ನಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ತಿರಂಗ ಯಾತ್ರೆ ನಡೆಸಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ದೇಶದ ಸೈನಿಕರ, ಬಾಬಾ ಸಾಹೇಬ್ ಪರ ಘೋಷಣೆ ಮೊಳಗಿಸಿದರು.ಬಳಿಕ ಅಭಿಮಾನಿಗಳಿಂದ ಜಿಲ್ಲೆಯ 10ಕ್ಕೂ ಹೆಚ್ಚು ಮಾಜಿ ಸೈನಿಕರಿಗೆ ಸನ್ಮಾನಿಸಲಾಯಿತು.
ವರದಿ :ಗಾರಲದಿನ್ನಿ ವೀರನಗೌಡ




