Ad imageAd image

ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ: ಒಪ್ಪತ್ತೇಶ್ವರ ಶ್ರೀ

Bharath Vaibhav
ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ: ಒಪ್ಪತ್ತೇಶ್ವರ ಶ್ರೀ
WhatsApp Group Join Now
Telegram Group Join Now

ಗುಳೇದಗುಡ್ಡ: ಸಮಾಜದಲ್ಲಿ ಸಾಮೂಹಿಕ ವಿವಾಹಕ್ಕೆ ಆದ್ಯತೆ ನೀಡುವ ಮೂಲಕ ದುಂದು ವೆಚ್ಚಕ್ಕೆ ಹಾಗೂ ಆಡಂಬರದ ಮದುವೆಗಳಿಗೆ ಕಡಿವಾಣ ಹಾಕಬೇಕು. ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿವೆ. ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ. ಇಂತಹ ಸಮಾಜಮುಖಿಕಾರ್ಯಗಳು ನಿರಂತವಾಗಿ ನಡೆಯಲಿ ಎಂದು ಒಪ್ಪತ್ತೇಶ್ವರ ಮಠದ ಶ್ರೀ ಒಪ್ಪತ್ತೇಶ್ವರ ಸ್ವಾಮಿಗಳು ಹೇಳಿದರು.
ಅವರು ನಗರದ ಸರಾಫ್ ಬಜಾರದಲ್ಲಿನ ಶ್ರೀ ಮಾರುತೇಶ್ವರ ದೇವಸ್ಥಾನದ ಕಾರ್ತಿಕೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ಸಾಮೂಹಿಕ ವಿವಾಹಗಳು ಬಡವರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತವೆ. ಸರಳ ಹಾಗೂ ಸಾಮೂಹಿಕ ವಿವಾಹಗಳು ಹೆಚ್ಚುಹೆಚ್ಚು ಜನಪ್ರಿಯಗೊಳ್ಳಬೇಕು. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನವವದುವರರ ಬದುಕು ಸುಖಕರವಾಗಿರಲಿ ಎಂದು ಹರಿಸಿದರು.


ಮುಂಜಾನೆ ಸರಾಫ ಬಜಾರ ಮಾರುತೇಶ್ವರಗೆ ಮಾರುತಿ ಗುಡಿ ಆಚಾರ್ಯರಾದ ಪ್ರಭಾಕರ ಜೋಶಿ ಯವರು ಕಾರ್ತಿಕೋತ್ಸವ ಅಂಗವಾಗಿ ಮಾರುತಿಗೆ ವಿಶೇಷ ಅಭಿಷೇಕ ಹಾಗೂ ಹೂವಿನ ಅಲಂಕಾರ,ಪೂಜೆ ನೆರವೇರಿಸಿದರು.
ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಾರುತಿ ದೇವರ ಪಲ್ಲಕ್ಕಿ ಉತ್ಸವ, ಮನರಂಜನೆ ಕಾರ್ಯಕ್ರಮಗಳು ನಡೆದವು.
ಗುರಸಿದ್ದೇಶ್ವರ ಮಠದ ಶ್ರೀಗರುಬಸವ ದೇವರು, ಪುರ್ತಗೇರಿಯ ಶ್ರೀ ಕೈಲಾಸಲಿಂಗ ಸ್ವಾಮಿಗಳು ಸಾನಿಧ್ಯವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಭಾಕರ ಜೋಶಿ, ಶ್ರೀಕಾಂತ ಧಾರವಾಡ, ಸಂಪತ್ತಕುಮಾರ ರಾಠಿ, ಗಣೇಶ ಶೀಲವಂತ, ಶೇಖರಪ್ಪ ಕಡಿವಾಲ, ರವಿ ಅಂಗಡಿ, ಶಂಕರ ವರ್ಮಾ, ಸಿದ್ದು ನಾಯನೇಗಲಿ, ಮಂಜುನಾಥ ಧಾರವಾಡ, ಮಹಾದೇವ ಗೌಳಿ, ಗೀತಾ ಧಾರವಾಡ, ಕನ್ನಿಕಾ ಅಗಡಿ ಮತ್ತಿತರರು ಇದ್ದರು.

ವರದಿ: ಮಹಾಲಿಂಗೇಶ ಯಂಡಿಗೇರಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!