Ad imageAd image

ಆನ್ ಲೈನ್ ಮೂಲಕವು ಒಳ ಮೀಸಲಾತಿ ವಿವರ ನಮೂದಿಸಲು ಅವಕಾಶ 

Bharath Vaibhav
ಆನ್ ಲೈನ್ ಮೂಲಕವು ಒಳ ಮೀಸಲಾತಿ ವಿವರ ನಮೂದಿಸಲು ಅವಕಾಶ 
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದ ಜನರಿಗೆ ಗುಡ್ ನ್ಯೂಸ್ ಎನ್ನುವಂತೆ ಒಳ ಮೀಸಲಾತಿ ಸಮೀಕ್ಷೆಯಲ್ಲಿ ಸಾರ್ವಜನಿಕರು ಆನ್ ಲೈನ್ ಮೂಲಕವು ವಿವರ ನಮೂದಿಸಲು ಸರ್ಕಾರ ಅವಕಾಶ ನೀಡಿದೆ.

ವಿವಿಧ ಸಾಮಾಜಿಕ ಕಾರಣಕ್ಕೆ ಒಳಮೀಸಲಾತಿ ಸಮೀಕ್ಷೆ ವೇಳೆ ಪರಿಶಿಷ್ಟ ಜಾತಿ ಸಮುದಾಯಗಳ ಜನರು ತಮ್ಮ ಜಾತಿಯ ಹೆಸರು ಹೇಳಲು ಆಗದ ಸಂದರ್ಭ ಎದುರಾಗಬಹುದು ಎಂಬ ನಿರೀಕ್ಷೆ ಇತ್ತು.

ಹೀಗಾಗಿಯೇ ಮೂರು ಹಂತದಲ್ಲಿ ಮಾಹಿತಿ ಕಲೆ ಹಾಕಲು ಯೋಜನೆ ರೂಪಿಸಿದ್ದೇವೆ. ಮನೆ ಮಾಲೀಕರಿಗೆ ಗೊತ್ತಾಗಬಾರದು ಎಂದು ಜಾತಿ ಹೆಸರು ಮುಚ್ಚಿಟ್ಟಿರುವ ಮಂದಿ ಸಮೀಕ್ಷಾ ಶಿಬಿರಗಳಿಗೆ ಬಂದು ವಿವರ ನೀಡಬಹುದು.

ಇಲ್ಲವೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ವಿವರ ನಮೂದಿಸಬಹುದು ಎಂದು ಒಳಮೀಸಲಾತಿ ಏಕಸದಸ್ಯ ಆಯೋಗದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ತಿಳಿಸಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!