ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕಿಡಿಗೆಡಿಗಳ ಕಾರ್ಯಕ್ಕೆ ತಡೆ ಹಿಡಿಯಲು ವಿ.ಎಚ್. ಪಿ. ಮನವಿ
ಭಾಲ್ಕಿ : ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಖಬರಸ್ಥಾನ್ (ಮುಸ್ಲಿಂ ಸಮುದಾಯದ ಸ್ಮಶಾನ ಭೂಮಿ)ಯ ಮುಖ್ಯ ರಸ್ತೆಯ ಹತ್ತಿರ ಮಳಿಗೆ ನಿರ್ಮಾಣ ಮಾಡುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ವಿಶ್ವಹಿಂದೂ ಪರಿಷತ್ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಈ ಕುರಿತು ತಹಸೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದ ವಿಶ್ವಹಿಂದೂ ಪರಿಷತ್ ಪ್ರಮುಖರು, ಮಾತನಾಡಿ, ಕೆಲವು ವರ್ಷಗಳ ಹಿಂದೆ ಎರಡು ಸಮುದಾಯಗಳ ಮದ್ಯೆ ಜಗಳವಾಗಿ
ಅಶಾಂತಿ ಉಂಟಾಗಿತ್ತು. ಈಗ ಕೆಲ ಕಿಡಿಗೇಡಿಗಳು ಮತ್ತೆ ಅದೇ ಸ್ಥಳದಲ್ಲಿ ಮಳಿಗೆಗಳು ನಿರ್ಮಾಣ ಮಾಡಿ ಪಟ್ಟಣದಲ್ಲಿ ಅಶಾಂತಿ ವಾತಾವರಣಕೆ ಕಾರಣವಾಗುತ್ತಿದ್ದಾರೆ. ಅದಕ್ಕೆ ಸಾಮಾಜಿಕ ಶಾಂತಿಗಾಗಿ ತಕ್ಷಣವೇ ಸದರಿ ಸ್ಥಳದಲ್ಲಿ ನಡೆಯುತ್ತಿರುವ ಕೆಲಸಕ್ಕೆ ತಡೆ ಹಿಡಿದು ಪಟ್ಟಣದಲ್ಲಿ ಶಾಂತಿ ಕಾಪಾಡುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ವಿಶ್ವಹಿಂದೂ ಪರಿಷತ್ ಪ್ರಮುಖರಾದ ಶಿವಕುಮಾರ ಲೋಖಂಡೆ, ನಾಮದೇವರಾವ ಪವಾರ, ದಯಾನಂದ ಸೂರ್ಯವಂಶಿ, ಸಾಗರ ಮಲಾನಿ, ಬಾಬುರಾವ ಧೂಪ, ಜಯರಾಜ ಕೊಳ್ಳಾ, ರಾಜು ಭೂಸ್ಥೆ, ಯಶವಂತ ಭೋಸ್ಥೆ, ಪಾಂಡುರಂಗ ಕನಸೆ, ಸುಭಾಷ ಮಾಶೆಟ್ಟೆ ಗಣಪತರಾವ ಮೂಟೆ, ದೀಪಕ ಸಿಂಧೆ, ಸಚಿನ ಜಾಧವ, ಅಮರ ಜೋಳದಾಪಕೆ, ರಾಜು ಮಾನಕಾರಿ, ಮಹಾಂತೇಶ ದಶಮುಖೆ, ಶಿವಕುಮಾರ ಪಟನೆ, ಸುನೀಲ ವಲಾಂಡೆ, ಪವನ ಸ್ವಾಮಿ ಮತಿತರರು ಇದರು.
ವರದಿ
ಸಂತೋಷ ಬಿಜಿ