ಕಂದಗಲ್ಲ :ಗ್ರಾಮದ ಅಬ್ದುಲ್ ರೆಹಮಾನ್ ಆಸೀಫ್ ಬಾಗವಾನ. ಎಂಬ ವಿದ್ಯಾರ್ಥಿ
1 ರಿಂದ 10ನೇ ತರಗತಿವರೆಗೆ ಸ್ಥಳೀಯ ಸಜ್ಜಲಶ್ರೀ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಂದಗಲ್ಲದಲ್ಲಿ ಕಲಿತು ಪಾಲಿಟೆಕ್ನಿಕ್ ಇಲಕಲ್ ಕಾಲೆಜೀನಲ್ಲಿ ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಉತ್ತೀರ್ಣಗೊಂಡು ನಂತರ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ ಬಾಗಲಕೋಟದಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವಿಯನ್ನು ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಮುಗಿಸಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸೂರತ್ಕಲ್ ಯುನಿವರ್ಸಿಟಿಯಿಂದ, ಮಾಸ್ಟರ್ ಆಫ್ ಟೆಕ್ನಾಲಜಿ ರಿಸರ್ಚ್ ಎಂಬ ಸ್ನಾತಕೋತ್ತರ ಪದವಿಯನ್ನು ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪೂರ್ಣಗೊಳಿ ಈಗೆ ಅದೇ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪಿಎಚ್‌ಡಿ ಮಾಡಲು ಪ್ರತಿಷ್ಠಿತ ಐಐಟಿ ಖರಗ್‌ಪುರ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾಕ್ಕೆ 2025 ರಲ್ಲಿ ಪ್ರವೇಶ ಪಡೆದಿದ್ದಾನೆ ಇದು ಭಾರತದ ಮೊದಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿದ್ದು ಮತ್ತು ಇದು ಉತ್ತಮ ಎನ್ ಐ ಆರ್ ಎಫ್ ಶ್ರೇಯಾಂಕವನ್ನು ನಿರ್ವಹಿಸುತ್ತಾ ಬಂದಿದೆ. ಪ್ರಸ್ತುತ ಈ ಐ ಐ ಟಿ ಯ ಎನ್ ಐ ಆರ್ ಎಫ್ ಶ್ರೇಯಾಂಕವು ಎಂಜಿನಿಯರಿಂಗ್ ವಿಭಾಗದಲ್ಲಿಅಗ್ರ 5 ನೆ ಸ್ಥಾನದಲ್ಲಿದೆ
ವಿದ್ಯಾರ್ಥಿ ಅನಿಸಿಕೆ : ಐಐಟಿ ಸೇರುವ ನನ್ನ ಕನಸು ನನಸಾಗಿದೆ ಮತ್ತು ತುಂಬಾ ಖುಷಿ ಕೊಟ್ಟಿದೆ. ಈ ಕನಸು ನನಸಾಗಲು ನನ್ನ ಕಠಿಣ ಪರಿಶ್ರಮದ ಜೊತೆಗೆ ನನ್ನ ತಂದೆ-ತಾಯಿ ಮತ್ತು ಕುಟುಂಬದ ಶ್ರಮ, ತ್ಯಾಗ, ಬೆಂಬಲ, ತುಂಬಾ ಇದೆ.
ನಾನು ಎಲ್ಲಾ ಪೋಷಕರಲ್ಲಿ ವಿನಂತಿಸಿಕೊಳ್ಳುವುದೆನೆಂದರೆ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿ. ಹಾಗೆ ಕೂಡ ಎಲ್ಲಾ ಮಕ್ಕಳು ಮತ್ತು ಯುವ ಸಮೂಹ ನೀವು ನಿಮ್ಮ ಪೋಷಕರು ಕೊಡಿಸುವ ಶಿಕ್ಷಣವನ್ನು ಕರ್ತವ್ಯ ನಿಷ್ಠೆಯಿಂದ, ಕಠಿಣ ಪರಿಶ್ರಮದ ಮೂಲಕ ಯಶಸ್ವಿಯಾಗಿ ನಿರ್ವಹಿಸಿ ಎಂದು ಕೇಳಿಕೊಳ್ಳುತ್ತೇನೆ.
ವರದಿ ದಾವಲ್ ಶೇಡಂ