ಖಾನಾಪುರ:-ನಮ್ಮ ಪತ್ರಿಕಾ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ರವರು ಖಾನಾಪುರ ತಾಲ್ಲೂಕಿನ ನಾಗರಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಮ್ರಾಪಾಣಿ ಗ್ರಾಮದಲ್ಲಿ 7 ವರ್ಷಗಳಿಂದ ಮುಚ್ಚಿಹೋಗಿದ್ದ ಸರ್ಕಾರಿ ಶಾಲೆಯಿಂದ ನೆರೆಯ ದಾಂಡೇಲಿ ತಾಲ್ಲೂಕಿನ ನಾನಕೆಸರಮೊಡಗ ಗ್ರಾಮದ ಸರ್ಕಾರಿ ಶಾಲೆಗೆ ಹೋಗುತ್ತಿರುವ ಖಾನಾಪುರ ತಾಲ್ಲೂಕಿನ ಮಕ್ಕಳು ಎಂಬ ವರದಿ ಮಾಡಿ ಇಲ್ಲಿರುವ ಜನರ ಜೊತೆ ಹೋರಾಟಗಳನ್ನು ಆರಂಭಿಸಿದ್ದರು.
ಇನ್ನೂ ಇಲ್ಲಿ ಇದ್ದ ಸರ್ಕಾರಿ ಶಾಲೆಯೂ ಮರಾಠಿ ಮಾಧ್ಯಮ ವಾಗಿದ್ದ ರಿಂದ ಇಲ್ಲಿ ಎಲ್ಲರೂ ಸಹ ಕನ್ನಡ ಭಾಷೆ ಮಾತನಾಡುತ್ತಿದ್ದು, ಇಲ್ಲಿ ಕನ್ನಡ ಶಾಲೆ ಆರಂಭಿಸುವಂತೆ ಮನವಿ ಮಾಡಿದ್ದರಿಂದ ಅಂದಿನಿಂದ ನಿರಂತರ ಪ್ರಯತ್ನ ಹಾಗೂ ಹೋರಾಟಗಳನ್ನು ಮಾಡುವುದರ ಜೊತೆಗೆ ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ಸರ್ಕಾರದ ಚಳಿಗಾಲದ ಅಧಿವೇಶನದಲ್ಲೂ ನಮ್ಮ ಭಾರತ ವೈಭವ ದಿನ ಪತ್ರಿಕೆಯ ವರದಿಯನ್ನು ಎಂ.ಎಲ್.ಸಿ ಶಾಂತಾ ರಾಮ ಸಿದ್ಧಿ ಪ್ರಸ್ತಾಪ ಮಾಡಿದ್ದರು.
ಇದರೆಲ್ಲದರ ಪರಿಣಾಮವಾಗಿ ಅಂತೂ ಇಂತೂ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇಲ್ಲಿ ಸರ್ಕಾರಿ ಕನ್ನಡ ಶಾಲೆ ಆರಂಭಿಸಿ ಇಲ್ಲಿ ಶಿಕ್ಷಕರನ್ನು ನಿಯೋಜನೆ ಮಾಡಿದೆ. ಆದ್ದರಿಂದ ಇಂದು ದಾಂಡೇಲಿಗೆ ತೆರಳುವಾಗ ಆಕಸ್ಮಿಕವಾಗಿ ಈ ಆರಂಭವಾದ ಶಾಲೆಗೆ ಭೇಟಿಕೊಟ್ಟ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರಿಗೆ ಹೃದಯ ಪೂರ್ವಕವಾಗಿ ಸ್ವಾಗತ ಮಾಡಿ ಕೃತಜ್ಞತೆಗಳನ್ನು ಈ ಉಮ್ರಾಪಾಣಿಯ ಮಕ್ಕಳು, ಶಿಕ್ಷಕರು ಸಂತೋಷಗೊಂಡು ನಮ್ಮ ನ್ಯೂಸ್ ಸಮೂಹಕ್ಕೆ ಹಾಗೂ ಬಸವರಾಜು ಅವರಿಗೆ ಕೃತಜ್ಞತೆಗಳ ಧನ್ಯವಾದಗಳನ್ನು ತಿಳಿಸಿದ್ದಾರೆ. ಇನ್ನೂ ಇದರಿಂದ ನಮ್ಮ ನ್ಯೂಸ್ ಸಮೂಹವು ಕರ್ನಾಟಕದ ಗಡಿ ಪ್ರದೇಶದ ಸರ್ಕಾರಿ ಕನ್ನಡ ಶಾಲೆ ಆರಂಭಿಸಲು ಪ್ರಯತ್ನ ಮಾಡಿದ್ದಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ವರದಿ:-ಬಸವರಾಜು.