ಬಸವನ ಬಾಗೇವಾಡಿ :ಪಟ್ಟಣದಲ್ಲಿ ನೂತನವಾಗಿ ನಮ್ಮ ಕ್ಲಿನಿಕ್ ಉದ್ಘಾಟನೆ ನಡೆಯಿತು
ಬಸವನ ಬಾಗೇವಾಡಿ ಪಟ್ಟಣದ ಗಣೇಶ್ ನಗರದಲ್ಲಿ ನಮ್ಮ ಕ್ಲಿನಿಕ ಚಿಕಿತ್ಸಾಲಯ ಉದ್ಘಾಟೆಯನ್ನು ಮಾನ್ಯ ಕೃಷಿ ಮಾರುಕಟ್ಟೆ, ಸಕ್ಕರೆ ಜವಳಿ ಖಾತೆ ಸಚಿವರಾದ ಶ್ರೀ ಶಿವಾನಂದ ಎಸ್ ಪಾಟೀಲರು ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯಕತೆ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ತಕ್ಷಣವೇ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಲು ನಮ್ಮ ಕ್ಲಿನಿಕ್ ಪ್ರಸ್ತುತ ಕರ್ನಾಟಕ ಸರ್ಕಾರ ಯೋಜನೆಯನ್ನು ಜಾರಿ ಮಾಡಿದೆ ಇದರ ಲಾಭವನ್ನು ಸಾರ್ವಜನಿಕರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ಶಾಸಕರು ಹೇಳಿದರು.
ಇದೇ ಸಂದರ್ಭದಲ್ಲಿ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಪುರಸಭೆ ಅಧ್ಯಕ್ಷರು ಶ್ರೀಮತಿ ಜಗದೇವಿ ಗುಂಡಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಶ್ರೀ ಸುರೇಶ ಹಾರಿವಾಳ,ಬಸವ ಸೈನ್ಯ ಅಧ್ಯಕ್ಷ ಶ್ರೀ ಶಂಕರಗೌಡ ಬಿರಾದಾರ, ಕಾಂಗ್ರೆಸ್ ಮುಖಂಡರಾದ ಸಂಗಮೇಶ ಓಲೆಕಾರ, ರವಿ ರಾಠೋಡ್ ಹಾಗೂ ಕ್ಲಿನಿಕ್ ಸಿಬ್ಬಂದಿ ವರ್ಗದವರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.