Ad imageAd image

ನಮ್ಮ ಸಮುದಾಯ ಶತಮಾನಗಳಿಂದ ಶೋಷಣೆಗೆ ಒಳಗಾಗಿದೆ: ರವಿ ಮಾದರ

Bharath Vaibhav
ನಮ್ಮ ಸಮುದಾಯ ಶತಮಾನಗಳಿಂದ ಶೋಷಣೆಗೆ ಒಳಗಾಗಿದೆ: ರವಿ ಮಾದರ
WhatsApp Group Join Now
Telegram Group Join Now

ಆದಿ ಜಾಂಬವ ಯುವ ಬ್ರಿಗೇಡ್ ಕರ್ನಾಟಕ ವತಿಯಿಂದ ಇಂದು ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಇಂದು ತಾಲೂಕಾ ಮಟ್ಟದ ಹಾಗೂ ಗ್ರಾಮ ಮಟ್ಟದ ಶಾಖೆಗಳ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಆರಂಭದಲ್ಲಿ ಊರಿನ ಅಂಬೇಡ್ಕರ ಸರ್ಕಲಗೆ ಪೂಜೆ ಸಲ್ಲಿಸಿ ಸಂಘಟನೆ ಕುರಿತು ಮಾತನಾಡಿದರು ಈ ಸಂದರ್ಬದಲ್ಲಿ ರಾಜ್ಯ ಉಪಾಧ್ಯಕ್ಷರಾದ ರವಿ ಮಾದರ ಅವರು ಪದಾಧಿಕಾರಿಗಳಿಗೆ ಸ್ಥಳದಲ್ಲಿಯೇ ಆದೇಶ ಪ್ರತಿ ನೀಡಿ ಪದಾಧಿಕಾರಿಗಳನ್ನು ಸಂಘಟನೆಗೆ ಸೇರ್ಪಡೆ ಮಾಡಿಕೊಂಡರು. ನಮ್ಮ ಸಮುದಾಯ ಶತಮಾನಗಳಿಂದಲೂ ತುಳಿತಕ್ಕೆ ಒಳಗಾಗಿದೆ ಆದ್ದರಿಂದ ನಾವೆಲ್ಲ ಜಾಗೃತರಾಗಿ ನಮ್ಮ ಮಕ್ಕಳಿಗೇ ಒಳ್ಳೆಯ ಶಿಕ್ಷಣ ಮತ್ತು ಆರೋಗ್ಯವನ್ನು ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಸರ್ಕಾರ ನಮಗಾಗಿ ಜಾರಿಗೆ ತಂದಿರುವ ಸೌಲಭ್ಯಗಳನ್ನು ಪಡೆದುಕೊಂಡು ನಾವೆಲ್ಲ ಆರ್ಥಿಕವಾಗಿ ಸದೃಢವಾಗಬೇಕಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಪ್ರಮುಖ ಸಾಮಾಜಿಕ ಹೋರಾಟಗಾರರಾದ ರವಿ ಮಾದರ. ನಾಗಪ್ಪ ತಲಕಟಣಾಳ. ಮುರಗೆಪ್ಪ ಅಪ್ಪಾಜಿಗೋಳ. ರವಿ ಕುರಣಿ. ಕಾಮೂ ಅವಳೆ.ಮುತ್ತಪ್ಪ ಮಾಂಗ. ರಾಜು ಮಾಂಗ್. ರಮೇಶ್ ಮಾಂಗ್.ಗೋಪಾಲ ಗಡದೆ.ಸತ್ಯಪ್ಪ ಮಾಂಗ್. ಮಹಾಂತೇಶ್ ಮಾಂಗ್. ಬಾಳು ಮಾಂಗ್ ಉಪಸ್ಥಿತರಿದ್ದರು.
ವರದಿ: ಪರಶುರಾಮ ತೆಳಗಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!