ಕಾಗವಾಡ : ಒಬ್ಬ ಸ್ವಾಮೀಜಿಯಾಗಿ ವ್ಯಕ್ತಿಗತವಾಗಿ ಮಾತನಾಡುವುದು ತಪ್ಪು, ಸ್ವಾಮಿಜಿಗಳಿಗೆ ಸಮಾಜದ ಪರವಾದ ನಿಲುವಿರಬೇಕು ಒಬ್ಬ ವ್ಯಕ್ತಿಯ ಪರವಾಗಿ ನಿಲ್ಲುವುದು ತಪ್ಪು ಎಂದು ಕಾಗವಾಡ ಶಾಸಕ ರಾಜು ಕಾಗೆ ಯತ್ನಾಳ್ ವಿಚಾರವಾಗಿ ಜಯ ಮೃತ್ಯುಂಜಯ ಸ್ವಾಮಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಅವರು ತಾಲೂಕಿನ ಮದಭಾವಿ ಹಾಗೂ ಖಿಳೆಗಾಂವ ಗ್ರಾಮದಲ್ಲಿ 7 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತ ಯತ್ನಾಳ ಅವರನ್ನು ಪಕ್ಷ ಉಚ್ಚಾಟನೆ ಮಾಡಿದ್ದು ಅವರ ಪಕ್ಷದ ಆಂತರಿಕ ವಿಷಯ, ಸ್ವಾಮೀಜಿಗಳು ಪಂಚಮಸಾಲಿ ಮೀಸಲಾತಿಗೆ ಹೋರಾಟ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ. ಆದರೆ ರಾಜಕೀಯವಾಗಿ ಒಬ್ಬ ವ್ಯಕ್ತಿಯ ಪರವಾಗಿ ಹೋರಾಟ ಮಾಡೋದು ತಪ್ಪು ಎಂದರು.
ಕಾಂಗ್ರೆಸ್ ಸರ್ಕಾರ ಪಂಚಮಸಾಲಿ 2ಎ ಮೀಸಲಾತಿ ವ ಹಿಂದೇಟು ವಿಚಾರವಾಗಿ ಮಾತನಾಡಿದ ಅವರು ಅದರ ಬಗ್ಗೆ ನಾನು ವಯಕ್ತಿಕವಾಗಿ ಏನು ಹೇಳುವುದಿಲ್ಲ. ನಮ್ಮ ಸರ್ಕಾರ ಮೀಸಲಾತಿ ವಿಚಾರಕ್ಕೆ ಚಿಂತನೆ ನಡೆಸಿದೆ.ನಾನು ಸಿಎಂ ಜೊತೆ ಖುದ್ದಾಗಿ ಭೇಟಿ ನೀಡಿ ಇದೆ ವಿಚಾರವಾಗಿ ಚರ್ಚೆ ಮಾಡುತ್ತೇನೆ ಕಾನೂನು ತೊಡಕಗಳಿರುವ ಕಾರಣ ವಿಳಂಬವಾಗುತ್ತಿದೆ ಎಂದು ಹೇಳಿದರು.
ಬೆಲೆ ಏರಿಕೆಯಾಗಿದೆ ತಮ್ಮ ಸರಕಾರದ ವಿರುದ್ಧ ಬಿಜೆಪಿಯ ಪ್ರತಿಭಟನೆ ಹಮ್ಮಿಕೊಂಡ ವಿಚಾರವಾಗಿ ಶಾಸಕ ರಾಜು ಕಾಗೆ ಮಾತನಾಡಿ ಅದು ವಿರುದ್ಧ ಪಕ್ಷ ಕೆಲಸ ಮಾಡಲಿ ಎಂದರು.
ಭಾರತ ದೇಶದಲ್ಲಿಯೆ ಬಿಜೆಪಿ ಪಕ್ಷ ಶಿಸ್ತಿನ ಪಕ್ಷ ಆದರೆ ಅದು ಈಗ ಒಡೆದ ಮನೆಯಾಗಿದೆ. ಆದರೆ ಶಿಸ್ತು ಎಂಬುವದು ಈಗ ಬಿಜೆಪಿ ಪಕ್ಷದಲ್ಲಲ್ಲಿ ಅದರಲ್ಲಿ ಬಣ್ಣಗಳಾಗಿವೆ.ತಪ್ಪು ಒಡಕುಗಳಾಗಿವೆ,ತಪ್ಪುಗಳನ್ನು ಮಾಡುತ್ತಿದಾರೆ. ಬಸವೇಶ್ವರ ಏತ ನೀರಾವರಿ ಎರಡನೇ ಹಂತದ ಕಾಮಗಾರಿ ಕೆಲಸ ಪ್ರಾರಂಭವಾಗಿದೆ ಸರಕಾರ ಹತ್ತು ಕೋಟಿ ಬಿಡುಗಡೆ ಮಾಡಿದೆ ಇನ್ನು ಎಂಬತ್ತು ಕೋಟಿ ಬಿಡುಗಡೆ ಮಾಡುತ್ತದೆ ಬರುವ ಜೂನದಲ್ಲಿನೀರಾವರಿಯಿಂದ ಅರ್ದ ಕೆಲಸ ಶೀಘ್ರದಲ್ಲೇ ಮಾಡಲಾಗುವುದು ಎಂದರು.
ವರದಿ: ಮುರಗೇಶ ಗಸ್ತಿ