Ad imageAd image

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮ.

Bharath Vaibhav
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮ.
WhatsApp Group Join Now
Telegram Group Join Now

ಸೇಡಂ:ತಾಲೂಕಿನ ಆಡಕಿ ವಲಯದ ಬಂದೇಪಲ್ಲಿ ಗ್ರಾಮದಲ್ಲಿ ಮಾಡುತ್ತಿರುವ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದಲ್ಲಿ ಪೂಜಾರಿ ಕುಂಟ ಕೆರೆ ಕಾಮಗಾರಿಯ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷರಾದ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಯವರು ಮಂಜುನಾಥ ಸ್ವಾಮಿಗೆ ಹಾಗೂ ಸ್ಥಳ ಸನಿದ್ಯ ದೈವನು ದೇವತೆಗಳಿಗೆ ಪೂಜೆಯನ್ನು ಸಲ್ಲಿಸುವ ಮೂಲಕ ಉದ್ಘಾಟನೆಯನ್ನು ಮಾಡಲಾಯಿತು.

ಈ ಒಂದು ಕಾರ್ಯಕ್ರಮದಲ್ಲಿ ಬಂದೇಪಲ್ಲಿ ಗ್ರಾಮದ ಕೆರೆ ಸಮಿತಿ ಸದಸ್ಯರು, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷರು ಮತ್ತು ಸದಸ್ಯರು, ಗ್ರಾಮದ ಸದಸ್ಯರು ಪ್ರಾದೇಶಿಕ ನಿರ್ದೇಶಕರು, ತಾಲೂಕಿನ ಯೋಜನಾಧಿಕಾರಿಗಳು, ಕೆರೆ ಅಭಿಯಂತರರು ಹಾಗೂ ಸೇವಾಪ್ರತಿನಿಧಿ ಮತ್ತು ತಾಲೂಕು ವಿಚಕ್ಷಣಾಧಿಕಾರಿ ಉಪಸ್ಥಿತರಿದ್ದರು.

ಪ್ರಥಮವಾಗಿ ಮಂಜುನಾಥ್ ಎಸ್. ಜಿ ಅವರು ಉಪಸ್ಥಿತರಿದ್ದ ಎಲ್ಲಾ ಗಣ್ಯ ಮಾನ್ಯರನ್ನು ಸ್ವಾಗತಿಸಿದರು.ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ. ದಿನೇಶ್ ಪೂಜಾರಿ ಸರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಹಾಗೂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮಾಡುತ್ತಿರುವಂತ ಸಾಮಾಜಿಕ ಸೇವೆಗಳಲ್ಲಿ ನಮ್ಮ ಊರು ನಮ್ಮ ಕೆರೆ ಎಂಬುದು ಒಂದು ಅತ್ತ್ಯುತ್ತಮವಾದ ಸಾಮಾಜಿಕ ಸೇವೆಯಾಗಿದೆ. 800ಕಿಲೋಮೀಟರ್ ಗಳ ದೂರದಲ್ಲಿರುವಂತ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಒಂದು ಗ್ರಾಮಕ್ಕೆ ಬಂದಿರುವುದು ಡಾ!! ವೀರೇಂದ್ರ. ಹೆಗ್ಗಡೆಯವರ ದೂರದೃಷ್ಟಿ ಅವರ ಕನಸು ಎಂದು ತಿಳಿಸಿದರು. ಕೆರೆ ಹೂಳೆತ್ತುವುದರಿಂದ ಕೆರೆಯಲ್ಲಿ ಅತೀ ಹೆಚ್ಚು ನೀರು ಸಂಗ್ರಹವಾಗುತ್ತದೆ. ಬೋರವೆಲ್ ಗಳು ಚಲಾವಣೆಯಾಗುತ್ತವೆ. ಗ್ರಾಮದ ಜಾನುವಾರುಗಳಿಗೆ ನೀರು ಸಹಕರಿಯಾಗುತ್ತದೆ. ಇದನ್ನು ಧರ್ಮಸ್ಥಳ ಸಂಸ್ಥೆಯಿಂದ ಮಾಡಿಕೊಡಲಾಗುತ್ತಿದೆ. ಗ್ರಾಮದ ಜನರು ಈ ಕಾರ್ಯಕ್ಕೆ ಸಹಕಾರ ನೀಡಿ ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಮಾನ್ಯ ಕಲಬುರಗಿ ಪ್ರಾದೇಶಿಕ ನಿರ್ದೇಶಕರಾದ ದಿನೇಶ್ ಪೂಜಾರಿ ಅವರು ಪ್ರಸ್ತವಿಕವಾಗಿ ಮಾತನಾಡಿದರು.

ಧರ್ಮಸ್ಥಳ ಸಂಸ್ಥೆಯವರು ಕೆರೆ ಪುನಃಚ್ಚೆತನ ಮಾಡುತ್ತಿರುವದು ನಮಗೆಲ್ಲರಿಗೂ ಸಂತೋಷವಾಗಿದೆ.
ಕೆರೆ ಹೂಳೆತ್ತುವುದರಿಂದ ನಮ್ಮ ಗ್ರಾಮದ ಜನರಿಗೆ ಹಾಗೂ ಜಾನುವಾರುಗಳಿಗೆ ತುಂಬಾ ಉಪಯೋಗವಾಗುತ್ತದೆ ಹಾಗೂ ತುಂಬಾ ಅನುಕೂಲಕರವಾಗುತ್ತದೆ ಎಂದು ತಿಳಿಸುತ್ತೇನೆ.

ಇಂತಹ ಬಹುದೊಡ್ಡ ಕಾಯಕಲ್ಪವನ್ನು ಮಾಡುತ್ತಿರುವ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಇಲ್ಲಿಂದಲೇ ನನ್ನ ಸಾಷ್ಟಾಂಗ ನಮಸ್ಕಾರಗಳನ್ನು ತಿಳಿಸುತ್ತೇನೆ. ಅವರ ಸಮಾಜ ಸೇವೆಗೆ ನಾವೆಲ್ಲ ತಲೆ ಬಾಗುತ್ತೆವೆಂದು ಬಂದೇಪಲ್ಲಿ ಗ್ರಾಮದ ಗಣ್ಯರಾದ ರಾಮಯ್ಯ. ಪೂಜಾರಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಧರ್ಮಸ್ಥಳ ಸಂಸ್ಥೆಯಿಂದ ಕೆರೆ ಹೂಳೆತ್ತುವ ಕಾರ್ಯಕ್ರಮ ಮಾಡಿದ್ದು ಇದು ಬಂದೇಪಲ್ಲಿ ಗ್ರಾಮಕ್ಕೆ ಬಹುದೊಡ್ಡ ಉಪಯುಗವಾಗುತ್ತದೆ. ಇದನ್ನು ಗ್ರಾಮದ ಜನರು ಸಹಕಾರ ನೀಡಿ ಸದುಪಯೋಗಪಡಿಸಿಕೊಳ್ಳಿ ಹಾಗೂ ಅದನ್ನು ಮುಂದೆ ಉಳಿಸಿಕೊಂಡು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಗ್ರಾಮದ ಜನರದ್ದು ಆದ್ದರಿಂದ ಗ್ರಾಮಕ್ಕೆ ಉತ್ತಮವಾದ ಸಾಮಾಜಿಕ ಸೇವೆಯನ್ನು ನೀಡುತ್ತಿರುವ ಧರ್ಮಸ್ಥಳದ ಧರ್ಮಧಿಕಾರಿಗಳಿಗೆ ನಮಸ್ಕಾರ ಮತ್ತು ಧನ್ಯವಾದಗಳನ್ನ ಅರ್ಪಿಸುತ್ತೇನೆ ಎಂದು ಜಿಲ್ಲಾ ಜನಜಗೃತಿ ವೇದಿಕೆ ಸದಸ್ಯರಾದ ರಾಜಶೇಖರ ನೀಲಂಗಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ನಮ್ಮ ಬಂದೇಪಲ್ಲಿ ಗ್ರಾಮದ ಕೆರೆಹೂಳೆತ್ತುವ ಕಾರ್ಯವನ್ನು ಮಾಡುತ್ತಿರುವುದು ನಮಗೆ ಖುಷಿ ತಂದಿದೆ ಇದು ನಮ್ಮ ಸೌಭಾಗ್ಯ ಎಂದರು.

ಧರ್ಮಸ್ಥಳ ಸಂಸ್ಥೆಯ ಈ ಸಾಮಾಜಿಕ ಸೇವೆ ಶ್ಲಾಘನಿಯವಾಗಿದೆ ಇದನ್ನ ನಮ್ಮ ಗ್ರಾಮಕ್ಕೆ ಕಲ್ಪಿಸಿ ಕೊಟ್ಟಂತಹ ಪೂಜ್ಯ ಡಾ!! ವೀರೇಂದ್ರ ಹೆಗ್ಗಡೆಯವರಿಗೆ ತುಂಬು ಹೃದಯದ ನಮನಗಳನ್ನು ಸಲ್ಲಿಸುತ್ತೇನೆ ಹಾಗೂ ಧರ್ಮಸ್ಥಳ ಸಂಸ್ಥೆಯ ಕಾರ್ಯಕರ್ತರಿಗೂ ಕೂಡ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಕೆರೆ ಸಮಿತಿಯ ಅಧ್ಯಕ್ಷರಾದ ಹೆಮಲಾತ ನಾಯಕ್ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಜನ ಜಾಗೃತಿ ಸದಸ್ಯರಾದ ವರದಾ ಸ್ವಾಮಿ ಬಿ ಹಿರೇಮಠ, ಶಿವಕುಮಾರ್ ಜಾಡುರ, ಎಲ್ಲಾ ಗಣ್ಯಮಾನ್ಯರು ಗುದ್ದಲಿ ಪೂಜೆ ಮಾಡಿ ಮಣ್ಣು ತೆಗೆಯುವ ಮೂಲಕ ಕೆರೆ ಕಾಮಗಾರಿಗೆ ಚಾಲನೆ ನೀಡಿದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!