ಬೆಂಗಳೂರು : ನಮ್ಮ ಬೋಟಿಕ್ ಡಿಸೈನಿಂಗ್ ತರಬೇತಿ ಸಂಸ್ಥೆ ಬಗ್ಗೆ ಹಾಗೂ ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅದು ಸುಳ್ಳು ನಾವು ಯಾವುದೇ ಮೋಸ, ವಂಚನೆ ಮಾಡುತ್ತಿಲ್ಲ’ ಎಂದು ವಿದ್ಯಾರಣ್ಯಪುರದ ದೇವಾಂಶ ಡಿಸೈನಿಂಗ್ ಬೋಟಿಕ್ ಅಂಡ್ ರೆಂಟಲ್ ಹೌಸ್ ಮಾಲೀಕರಾದ ಸುನಾದ ಮಾಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರಿನಲ್ಲಿ ಸ್ವಲ್ಪ ಸಮಸ್ಯೆ ಆಗಿತ್ತು ಹಾಗಾಗಿ ಮೈಸೂರಿಗೆ ಹೋಗಿದ್ದೆ ಅದನ್ನೇ ನೆಪ ಮಾಡಿಕೊಂಡು ಹಿತ ಶತ್ರುಗಳು ನಮ್ಮ ಸಂಸ್ಥೆ ಮತ್ತು ನಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದಾರೆ. ಇದು ಸದ್ಯಕ್ಕೆ ದೂರವಾದ ಮಾತು’ ಎಂದು ವಿವರಿಸಿದರು.
ಸುಮಾರು ವರ್ಷಗಳಿಂದ ನಾವು ಈ ಸಂಸ್ಥೆಯಲ್ಲಿ ತರಬೇತಿ ನೀಡುತ್ತಿದ್ದೇವೆ. ನಮ್ಮ ಈ ಏಳಿಗೆಯನ್ನು ಸಹಿಸದ ಕಿಡಿಗೇಡಿಗಳು ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ, ಸಂಸ್ಥೆ ಮುಚ್ಚಿದ್ದಾರೆ, ಹಲವರಿಗೆ ಮೋಸ ಮಾಡಿದ್ದಾರೆ! ಎಂದು ಅಪಪ್ರಚಾರ ಮಾಡಿದ್ದಾರೆ’
ನಾವು ಯಾರಿಗೂ ಮೋಸ ಮಾಡಿಲ್ಲ, ಈಗಲೂ ವಿದ್ಯಾರ್ಥಿನಿಯರು ತರಬೇತಿ ಪಡೆಯುತ್ತಿದ್ದಾರೆ. ಎಂದಿನಂತೆ ಸಂಸ್ಥೆ ಚಾಲನೆಯಲ್ಲಿದೆ. ಇಲ್ಲಸಲ್ಲದ ತಪ್ಪು ಮಾಹಿತಿ ನೀಡಿ ನಮ್ಮ ಸಂಸ್ಥೆ ವಿರುದ್ಧ ಎತ್ತಿ ಕಟ್ಟಿದ್ದಾರೆ. ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿದ್ಯಾರ್ಥಿನಿ ಛಾಯಾ ಮಾತನಾಡಿ,’ ನಾನು ಇಲ್ಲಿ ಬೋಟಿಕ್ ಡಿಸೈನಿಂಗ್ ತರಬೇತಿ ಪಡೆಯುತ್ತಿದ್ದೇನೆ. ನಮ್ಮ ಮೇಡಂ ಕೆಲವು ದಿನ ಮೈಸೂರಿಗೆ ಹೋಗಿದ್ದರು. ಆಗ ಕೆಲವರು ಬಂದು ನಿಮ್ಮ ಹಣ ಕೊಡುವುದಿಲ್ಲ? ಸಂಸ್ಥೆ ಮುಚ್ಚಿದ್ದಾರೆ,? ಇನ್ನೂ ತೆರೆಯುವುದಿಲ್ಲ ಎಂದು ನಮ್ಮನ್ನು ನಂಬಿಸಿ ಸಂಸ್ಥೆ ಬಗ್ಗೆ ಅಪಪ್ರಚಾರ ಮಾಡಿದರು. ಆದರೆ ಈಗ ಎಲ್ಲವೂ ಸರಿಯಾಗಿದೆ. ಮೇಡಂ ಎಲ್ಲೂ ಹೋಗಿಲ್ಲ ಇಲ್ಲೇ ಇದ್ದಾರೆ. ನಮಗೆ ತರಬೇತಿ ನೀಡುತ್ತಿದ್ದಾರೆ ನಮಗೆ ಯಾವುದೇ ರೀತಿ ಮೋಸವಾಗಿಲ್ಲ’ ಎಂದು ಖಚಿತಪಡಿಸಿದರು.
ಹಳೆ ವಿದ್ಯಾರ್ಥಿನಿ ಅಕ್ಷತಾ ಮಾತನಾಡಿ,’ ಇಲ್ಲಿ ಉತ್ತಮ ತರಬೇತಿ ಪಡೆದಿದ್ದೇನೆ. ಎಲ್ಲವೂ ಚೆನ್ನಾಗಿ ತರಬೇತಿ ನೀಡುತ್ತಾರೆ. ಆದರೆ ಕೆಲವರು ಬಿಟ್ಟು, ಏನಿದ್ದರೂ ಬಗೆಹರಿಸಿಕೊಳ್ಳಬಹುದಾಗಿತ್ತು. ಆದರೆ ಸಂಸ್ಥೆಯ ಬಗ್ಗೆ ಮಾಲೀಕರ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ’ ಎಂದರು.
ವರದಿ : ಅಯ್ಯಣ್ಣ ಮಾಸ್ಟರ್




