ಐಗಳಿ: -ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಬೆಳಗಾವಿ ವಿಭಾಗೀಯ ಪೋಲಿಸ್ (ಐಪಿಎಸ್) ಅಧಿಕಾರಿ ರವೀಂದ್ರ ಗಡಾದೆ ಅವರು ರವಿವಾರ ಅಥಣಿ ತಾಲೂಕಿನ ಸ್ವ ಗ್ರಾಮ ಐಗಳಿಯಲ್ಲಿ ಜನಸಾಮಾನ್ಯರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ನಂತರ ಮಾತನಾಡಿ ನಮ್ಮ ಮತ ನಮ್ಮ ಹಕ್ಕು ಇಂದು ಪ್ರಜೆಗಳ ಹಬ್ಬ .
ನಮ್ಮ ದೇಶ ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಅಡಿಯಲ್ಲಿ ನಡೆಯುತ್ತದೆ. ಮತದಾನದ ಮೂಲಕ ನಾವೆಲ್ಲರೂ ನಮ್ಮ ದೇಶವನ್ನು ಮುನ್ನಡೆಸಲು ಒಬ್ಬ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡುವ ದಿನ ಪ್ರಜೆಗಳ ದಿನವಾಗಿದೆ.
ಈ ದಿನವನ್ನು ನಾವು ಪ್ರತಿಒಬ್ಬರು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಹಬ್ಬವನ್ನು ಆಚರಣೆ ಮಾಡಬೇಕಾಗಿದೆ. ಯಾರೂ ಯಾವುದೇ ಆವೇಶ ಹಾಗೂ ಆಸೆಗಳಿಗೆ ಮನ್ನಣೆ ನೀಡದೆ ಸ್ವತಂತ್ರವಾಗಿ ಮತ ಚಲಾಯಿಸಬೇಕು ಎಂದು ಹೇಳಿದರು..
ವರದಿ :-ಆಕಾಶ ಮಾದರ..