ಆರೋಗ್ಯ ಸೇವೆ ಇಲ್ಲದ ಗೂಳಿಪುರದ ಆರೋಗ್ಯ ಉಪ ಕೇಂದ್ರ ಗ್ರಾಮಸ್ಥರಿಂದ ಆಕ್ರೋಶ
ಚಾಮರಾಜನಗರ :ತಾಲ್ಲೂಕಿನ ಗೂಳಿಪುರ ಗ್ರಾಮದಲ್ಲಿ ಆರೋಗ್ಯ ಉಪ ಕೇಂದ್ರದಲ್ಲಿ ಆರೋಗ್ಯ ಸೇವೆ ಇಲ್ಲದೆ ಪರದಾಡುತ್ತಿರುವ ಗ್ರಾಮಸ್ಥರು.2003ನೇ ಇಸವಿ ಡಿಸೆಂಬರ್ 20ನೇ ತಾರೀಖು ಸಂತೆಮರಳ್ಳಿ ವಿಧಾನ ಸಭಾ ಕ್ಷೆತ್ರದ ಶಾಸಕರಗಿದ್ದ ಎ. ಆರ್ ಕೃಷ್ಣಮೂರ್ತಿ ರವರ ಅದ್ಯಕ್ಷತೆಯಲ್ಲಿ ಉದ್ಘಾಟನೆಗೊಂಡಿದ್ದ ಆಸ್ಪತ್ರೆ ಇವಾಗ ಗೂಳಿಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಹೊಮ್ಮ, ಕೋಟಂಬಳ್ಳಿ, ಬೂದಂಬಳ್ಳಿ,ಬೂದಂಬಳ್ಳಿಮೋಳೆ, ಮೂಕಳ್ಳಿ ಗ್ರಾಮಗಳ ಜನರಿಗೆ ಮರೀಚಿಕೆ ಆಗಿದೆ. ಗ್ರಾಮಸ್ಥರಾದ ಮಹದೇವಸ್ವಾಮಿ, ಬಿಳಿಗಿರಿನಾಯಕ ಮತ್ತು ಮಹಾದೇವನಾಯಕ ರವರು ಮಾತನಾಡಿ ನಮ್ಮ ಗ್ರಾಮದಲ್ಲಿ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ನಾವು ಆರೋಗ್ಯ ಸೇವೆ ಪಡೆಯಲು ಯಳಂದೂರು, ಆಲೂರು ಹಾಗೂ ಕಾಗಲವಾಡಿಗೆ ಹೋಗಬೇಕು. ಹೋಗಲು ಬಸ್ ವ್ಯವಸ್ಥೆ ಇಲ್ಲಾ, ಸಮಯಕ್ಕೆ ಸರಿಯಾಗಿ ಆಟೋಗಳು ಸಿಗುವುದಿಲ್ಲ.

ರಾತ್ರಿ ಸಮಯದಲ್ಲಿ ಮಹಿಳೆಯರು ಹಾಗೂ ಮಕ್ಕಳು ಚಿಕಿತ್ಸೆ ಪಡೆಯಲು ಹರಾಸಾಹಸ ಪಡುವಂತಾಗಿದೆ. ಆಗಾಗಿ ಸುಮಾರು ವರ್ಷದಿಂದ ಚಿಕಿತ್ಸೆ ದೊರೆಯದೆ ಆಸ್ಪತ್ರೆ ಸುತ್ತಮುತ್ತ ಗಿಡಗಂಟೆ ಬೆಳೆದು ಅನುಪಯುಕ್ತವಾಗಿರುವ ಆಸ್ಪತ್ರೆಗೆ ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಿ ಅನುಕೂಲ ಮಾಡಿಕೊಡಬೇಕು ಎಂದು ಪ್ರಸ್ತುತ ಕೊಳ್ಳೇಗಾಲ ವಿಧಾನ ಸಭಾ ಕ್ಷೆತ್ರದ ಶಾಸಕರು ಎ. ಆರ್ ಕೃಷ್ಣಮೂರ್ತಿ ಹಾಗೂ ಆರೋಗ್ಯ ಇಲಾಖೆಗೆ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ….ತಾರೀಖು ಸಂತೆಮರಳ್ಳಿ ವಿಧಾನ ಸಭಾ ಕ್ಷೆತ್ರದ ಶಾಸಕರಗಿದ್ದ ಎ. ಆರ್ ಕೃಷ್ಣಮೂರ್ತಿ ರವರ ಅದ್ಯಕ್ಷತೆಯಲ್ಲಿ ಉದ್ಘಾಟನೆಗೊಂಡಿದ್ದ ಆಸ್ಪತ್ರೆ ಇವಾಗ ಗೂಳಿಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಹೊಮ್ಮ, ಕೋಟಂಬಳ್ಳಿ, ಬೂದಂಬಳ್ಳಿ,ಬೂದಂಬಳ್ಳಿಮೋಳೆ, ಮೂಕಳ್ಳಿ ಗ್ರಾಮಗಳ ಜನರಿಗೆ ಮರೀಚಿಕೆ ಆಗಿದೆ. ಗ್ರಾಮಸ್ಥರಾದ ಮಹದೇವಸ್ವಾಮಿ, ಬಿಳಿಗಿರಿನಾಯಕ ಮತ್ತು ಮಹಾದೇವನಾಯಕ ರವರು ಮಾತನಾಡಿ ನಮ್ಮ ಗ್ರಾಮದಲ್ಲಿ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ನಾವು ಆರೋಗ್ಯ ಸೇವೆ ಪಡೆಯಲು ಯಳಂದೂರು, ಆಲೂರು ಹಾಗೂ ಕಾಗಲವಾಡಿಗೆ ಹೋಗಬೇಕು.
ಹೋಗಲು ಬಸ್ ವ್ಯವಸ್ಥೆ ಇಲ್ಲಾ, ಸಮಯಕ್ಕೆ ಸರಿಯಾಗಿ ಆಟೋಗಳು ಸಿಗುವುದಿಲ್ಲ. ರಾತ್ರಿ ಸಮಯದಲ್ಲಿ ಮಹಿಳೆಯರು ಹಾಗೂ ಮಕ್ಕಳು ಚಿಕಿತ್ಸೆ ಪಡೆಯಲು ಹರಾಸಾಹಸ ಪಡುವಂತಾಗಿದೆ. ಆಗಾಗಿ ಸುಮಾರು ವರ್ಷದಿಂದ ಚಿಕಿತ್ಸೆ ದೊರೆಯದೆ ಆಸ್ಪತ್ರೆ ಸುತ್ತಮುತ್ತ ಗಿಡಗಂಟೆ ಬೆಳೆದು ಅನುಪಯುಕ್ತವಾಗಿರುವ ಆಸ್ಪತ್ರೆಗೆ ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಿ ಅನುಕೂಲ ಮಾಡಿಕೊಡಬೇಕು ಎಂದು ಪ್ರಸ್ತುತ ಕೊಳ್ಳೇಗಾಲ ವಿಧಾನ ಸಭಾ ಕ್ಷೆತ್ರದ ಶಾಸಕರು ಎ. ಆರ್ ಕೃಷ್ಣಮೂರ್ತಿ ಹಾಗೂ ಆರೋಗ್ಯ ಇಲಾಖೆಗೆ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.
ವರದಿ: ಸ್ವಾಮಿ ಬಳೇಪೇಟೆ




