ಚಾಮರಾಜನಗರ:-ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಕವಿತಾ ರವರ ಅಧ್ಯಕ್ಷತೆಯಲ್ಲಿ ಎಸ್ಸಿ ಎಸ್ಟಿ ಕುಂದು ಕೊರತೆ ಸಭೆಯನ್ನು ನಗರದ ಎಸ್ ಪಿ ಕಛೇರಿಯಲ್ಲಿ ಹಮ್ಮಿಕೂಳ್ಳಲಾಯಿತು.ಸಭೆಯಲ್ಲಿ ಜಿಲ್ಲೆಯಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ವಿಸ್ತರವಾಗಿ ಚರ್ಚಿಸಲಾಯಿತು.
ಸಂತೆ ಮರಹಳ್ಳಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಆರೋಪಿಗಳಿಗೆ ಇನ್ನು ಶಿಕ್ಷೆ ನೀಡಿದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಮುಖಂಡರು.ಮತ್ತು ಜಿಲ್ಲೆಯಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಅನ್ಯಾಯಗಳ ಬಗ್ಗೆ ವರಿಷ್ಠಾಧಿಕಾರಿಗಲ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧೀಕ್ಷಕರು ಮಾತನಾಡಿ ಎಸ್ಸಿ ಎಸ್ಟಿ ಕುಂದು ಕೊರತೆ ಸಭೆ ಪ್ರತಿ ತಿಂಗಳ ನಾಲ್ಕನೇ ಭಾನುವಾರ ನಡೆಸಲಾಗುವುದು ಪೋಲೀಸ್ ಇಲಾಖೆ ಜನರ ರಕ್ಷಣೆಗೆ ಹಾಗೂ ಅವರನ್ನು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸದಾ ಕೈಜೋಡಿಸುತ್ತೇವೆ.ಪೋಲೀಸ್ ಅಧಿಕಾರಿಗಳು ಯಾವತ್ತು ಸಾರ್ವಜನಿಕರ ವಿರುದ್ದ ನಡೆದು ಕೂಳ್ಳುವುದಿಲ್ಲ ಅಂತಹದೇನಾದರು ಕಲ್ಪನೆ ಇದ್ದರೆ ಮನಸ್ಸಿನಿಂದ ತೆಗೆದು ಹಾಕಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಉಪ ಅಧೀಕ್ಷಕರಾದ ಹುದ್ದೇಶ. ಸಮಾಜ ಕಲ್ಯಾಣಾಧಿಕಾರಿ ಪ್ರಭಾರ ರಾಜು. ತಾಲ್ಲೂಕು ಅಧಿಕಾರಿ ಸುಬ್ಬರಾವ್. ಡಿವೈಎಸ್ಪಿ ಲಕ್ಷ್ಮಯ್ಯ. ಧರ್ಮೇಂದ್ರ ಸೇರಿದಂತೆ ದಂತೆ ಇನ್ನಿತರರು ಪೋಲೀಸ್ ಅಧಿಕಾರಿಗಳು ಹಾಗೂ ಎಸ್ಸಿ ಎಸ್ಟಿ ಸಂಘಟನೆ ಹಾಗೂ ಸಂಸ್ಥೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.
ವರದಿ :- ಸ್ವಾಮಿ ಬಳೇಪೇಟೆ