ಕಾಗವಾಡ: ತಾಲೂಕ ಆಡಳಿತದಿಂದ ತಾಲೂಕಿನಲ್ಲಿ ಪರಿಶಿಷ್ಟ ಪಂಗಡಗಳ ನಕಲಿ ಜಾತಿ ಪ್ರಮಾಣ ಪತ್ರದ ವಿತರಣೆ ಹಾವಳಿ ಹೆಚ್ಚಾಗಿದ್ದು, ತಾಲೂಕಿನಲ್ಲಿ ಸುಮಾರು 12 ನೂರಕ್ಕೂ ಅಧಿಕ ಜನರಿಗೆ ನಕಲಿ ಜಾತಿ ಪ್ರಮಾಣ ಪತ್ರ ವಿತರಿಸಲಾಗಿದೆ. ಇದರಿಂದ ಪರಿಶಿಷ್ಟ ಪಂಗಡದವರಿಗೆ ದೊರೆಯಬೇಕಾಗಿದ್ದ ಸೌಲಭ್ಯಗಳು, ಬೇರೆಯವರ ಪಾಲಾಗುತ್ತೀವೆ. ತಕ್ಷಣವೇ ಇದನ್ನು ಸ್ಥಗಿತಗೊಳಿಸಿ, ಇಲ್ಲ ವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ವಾಲ್ಮಿಕಿ ಸಮಾಜದ ಮುಖಂಡ ರಮೇಶ ನಾಯಿಕ ಆಕ್ರೋಶಗೋಂಡು ನಕಲಿ ಜಾತಿ ಪ್ರಮಾಣ ಪತ್ರಗಳನು ಅಧಿಕಾರಿಗಳ ಮುಖಕ್ಕೆ ಬಿಸಾಡಿದ ಘಟನೆ ಶುಕ್ರವಾರ ದಿ 27. ರಂದು ಪಟ್ಟಣದ ಅಂಬೇಡ್ಕರ್ ಸಭಾ ಭವನದಲ್ಲಿ ನಡೆದ ಕುಂದು ಕೊರತೆ ಸಭೆನಡೆಯಿತು.
ಈ ಘಟನೆಯಿಂದ ಸಭೆಯಲ್ಲಿ ಕೆಲಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಗಿ ಅಧಿಕಾರಿಗಳು ಹಾಗೂ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಪೋಲಿಸರು ಮಧ್ಯ ಪ್ರವೇಶ ಮಾಡಿ ಪರಸ್ಥಿತಿ ತಿಳಿಗೊಳಿಸಿದರು.

ತಹಶಿಲ್ದಾರ ರವೀಂದ್ರ ಹಾದಿಮನಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಸಂವಿಧಾನ ಪೀಠಿಕೆ ಪ್ರತಿಜ್ಞಾ ವಿಧಿ ಸ್ವೀಕರಿಸಿ, ಸಭೆ ಪ್ರಾರಂಭಗೊಂಡಿತು.
ತಹಶಿಲ್ದಾರ ರವೀಂದ್ರ ಹಾದಿಮನಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ತಾಲ್ಲೂಕಾಡಳಿದಿಂದ ಈ ಸಭೆಯನ್ನು ಆಯೋಜಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನತೆಯ ಸಮಸ್ಯೆಗಳು, ಪರಿಹರಿಸುವಿಕೆ, ಕಾನೂನಿನ ತಿಳುವಳಿಕೆಯನ್ನು ಮೂಡಿಸುವುದು ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ತಿಳಿಸುವದು ಈ ಸಭೆಯ ಉದ್ದೇಶವಾಗಿದೆ ಎಂದರು.
ಸಮಾಜ ಕಲ್ಯಾಣಾಧಿಕಾರಿ ಪರುಶುರಾಮ ಪತ್ತಾರ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಯ್ದೆಗಳ ಸಮರ್ಪಕ ಜಾರಿಯ ನಿಟ್ಟಿನಲ್ಲಿ ಇಲಾಖೆ ಅಗತ್ಯ ಕ್ರಮವನ್ನು ಕೈಗೊಳ್ಳುತ್ತಿದ್ದು, ಸರ್ಕಾರದ ಎಲ್ಲ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡಲಾಗುತ್ತಿದೆ. ಈ ಸಭೆಯಲ್ಲಿ ಚರ್ಚೆಗೆ ಬಂದ ಎಲ್ಲ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸಲಾಗುವದು ಎಂದರು.
ಇದೇ ವೇಳೆ ದಲಿತ ಮುಖಂಡ ಪ್ರಕಾಶ ದೊಂಡಾರೆ ಮಾತನಾಡಿ, ಕಳೆದ 30 ವರ್ಷಗಳಿಂದ ಬಸವ ನಗರದಲ್ಲಿ ಮೂರು ಸಾವಿರಕ್ಕಿಂತ ಹೆಚ್ಚಿನ ಜನ ವಾಸಿಸುತ್ತಿದ್ದು, ಅಲ್ಲಿಯ ಜನರಿಗೆ ಹಕ್ಕುಪತ್ರ ದೊರುತ್ತಿರುವದಿಲ್ಲಾ. ಅಲ್ಲಿಯ ಜನರಿಗೆ ಕೂಡಲೇ ಹಕ್ಕು ಪತ್ರ ನೀಡಬೇಕೆಂದು ಅಧಿಕಾರಿಗಳಿಗೆ ಅಗ್ರಹಿಸಿದರು.
ನಂತರ ಮುಖಂಡ ಸಂಜಯ ತಳವಲ್ಕರ ಮಾತನಾಡಿ, ವಿವಿಧ ಗ್ರಾಮಗಳಲ್ಲಿ ಸ್ಮಶಾನ, ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ, ಬಸ್ ವ್ಯವಸ್ಥೆ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು.
ಈ ವೇಳೆ ಗ್ರೇಡ್ 2 ತಹಶೀಲ್ದಾರ್ ರಶ್ಮಿ ಜಕಾತಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಬಿಇಓ ಪಾಂಡುರಂಗ ಮದಭಾವಿ, ಸಿಡಿಪಿಓ ರವೀಂದ್ರ ಗುದಗ್ಗೆನ್ನವರ, ಕಾಗವಾಡ ಪ.ಪಂ. ಮುಖ್ಯಾಧಿಕಾರಿ ಪ್ರಸನ್ನ ಕಲ್ಯಾಣಶೆಟ್ಟಿ, ಸಿಪಿಐ ಸಂತೋಷ ಹಳ್ಳೂರ, ವೈದ್ಯಾಧಿಕಾರಿ ಡಾ. ಬಸನಗೌಡ ಕಾಗೆ, ಲೋಕೋಪಯೋಗಿ ಅಧಿಕಾರಿ ಮಲ್ಲಿಕಾರ್ಜುನ ಮಗದುಮ್ಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ದಲಿತ ಮುಖಂಡರಾದ ಸಂಜಯ ತಳವಲ್ಕರ, ಸಚೀನ ಪೂಜಾರಿ, ದೀಪಕ ಕಾಂಬಳೆ, ಜಯಪಲಾ ಬಡಿಗೇರ, ವಿದ್ಯಾಧರ ದೋಂಡರೆ, ಅಶೋಕ ಕಾಂಬಳೆ, ದಯಾನಂದ ಕೆರೂರೆ, ವಿವೇಕ ಕರ್ಪೆ, ವೆಂಕಟೇಶ್ ಕಾಂಬಳೆ, ವಿಜಯ ಅಸೂದೆ, ಹನುಮಂತ ಮದಾಳೆ ಮತ್ತು ತಾಲೂಕಿನ ದಲಿತ ಸಂಘಟನೆಗಳ ಮುಖಂಡರುಗಳು, ದಲಿತ ಬಾಂಧವರು ಉಪಸ್ಥಿತರಿದ್ದರು.
ವರದಿ:ಚಂದ್ರಕಾಂತ ಕಾಂಬಳೆ




