ಸಾಮಾನ್ಯವಾಗಿ ಚಿತ್ರಗಳು ಅವುಗಳ ಹಾಡು ಹಾಗೂ ಸಂಗೀತದ ಮೂಲಕವೇ ಹಿಟ್ ಆಗುತ್ತೆ.. ಜನ ಖುಷಿ ಅಥವಾ ಬೇಸರದಲ್ಲಿದ್ದರು ಕೂಡ ಹಾಡನ್ನು ಕೇಳಿದರೆ ಸಾಕು ಮನಸ್ಸಿಗೆ ಕೊಂಚ ರಿಲೀಫ್ ಆಗುತ್ತೆ.. ಆದರೆ ಇವೊಂದು ಹಾಡನ್ನು ಕೇಳಿ ಸುಮಾರು 100ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆ ನಡೆದಿದೆ.
ಒಂದು ಹಾಡು ಮನುಷ್ಯನ ನೋವನ್ನೆ ಮರೆಸುವ ಶಕ್ತಿಯಿರುತ್ತದೆ. ಆದರೆ ಅಂತಹದ್ದೇ ಹಾಡು ಜನರ ಪ್ರಾಣ ತೆಗೆಯುತ್ತದೆ ಎಂದರೆ ಯಾರಾದರೂ ನಂಬುತ್ತಾರಾ.? ಸಾಧ್ಯವೇ ಇಲ್ಲ.. ಆದರೆ ಇದು ನಿಜಕ್ಕೂ ಸತ್ಯ ಕೇವಲ ಒಂದು ಹಾಡನ್ನು ಕೇಳಿ ಒಂದಲ್ಲ ಎರಡಲ್ಲ ಬರೋಬ್ಬರಿ 100ಕ್ಕೂ ಹೆಚ್ಚು ಜನರ ಪ್ರಾಣವನ್ನು ಬಲಿ ಪಡೆದಿದೆ.
ವರದಿಯ ಪ್ರಕಾರ, 1933 ರಲ್ಲಿ ರಚಿಸಲಾದ ಹಾಗೂ 1935 ರಲ್ಲಿ ಬಿಡುಗಡೆಯಾದ ಗ್ಲೂಮಿ ಸಂಡೇ ಎಂಬ ಹಾಡು ವಿಶ್ವದ ಅತ್ಯಂತ ದುರದೃಷ್ಟಕರ ಹಾಡು ಎಂಬ ಹೆಸರಿಗೆ ಪಾತ್ರವಾಗಿದೆ. ಈ ಹಾಡು ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಇದನ್ನು ಕೇಳಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ..
ಇದಾದ ಬಳಿಕ ಈ ಹಾಡಿನ ಸಂಯೋಜಕ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1968 ರಲ್ಲಿ, ಈ ಹಾಡಿನ ಬರಹಗಾರ ರೆಜ್ಸೊ ಕೂಡ ಆತ್ಮಹತ್ಯೆ ಮಾಡಿಕೊಂಡರು. ಹಾಡು ಕೇಳಿದ ನಂತರ ಇಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡರು ಮತ್ತು ಒಬ್ಬ ಮಹಿಳೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು.
ಈ ಎಲ್ಲಾ ಸಾವಿಗೆ ಈ ಹಾಡೇ ಕಾರಣ ಎಂದು ಗೊತ್ತಾದ ಬಳಿಕ ಈ ಹಾಡನ್ನು ನಿಷೇಧಿಸಲಾಯಿತು. ಈ ಹಾಡು ಮಾನವೀಯತೆ, ಜೀವನದ ಜಂಜಾಟ, ದೈನಂದಿನ ದುಃಖಗಳು ಮತ್ತು ಅದರಲ್ಲಿ ಒಳಗೊಂಡಿತ್ತು ಎನ್ನಲಾಗಿದೆ. ಇದೀಗ 62 ವರ್ಷಗಳ ಬಳಿಕ ಈ ಹಾಡಿನ ಮೇಲಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ.