Ad imageAd image

ಭಯೋತ್ಪಾದಕರು ದಾಳಿ ನಡೆಸಿದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಣಕು ಪ್ರದರ್ಶನ

Bharath Vaibhav
ಭಯೋತ್ಪಾದಕರು ದಾಳಿ ನಡೆಸಿದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಣಕು ಪ್ರದರ್ಶನ
WhatsApp Group Join Now
Telegram Group Join Now

 ———————-ವಿಜಯಪುರ, ಬಾಗಲಕೋಟೆ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ನಡೆದ ಅದ್ಬುತ ಕಾರ್ಯಕ್ರಮ

ವಿಜಯಪುರ: ನಿಡಗುಂದಿ/ ಆಲಮಟ್ಟಿ ಆಲಮಟ್ಟಿಯ ಜಲಾಶಯ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಭಯೋತ್ಪಾದಕರು ದಾಳಿ ನಡೆಸಿದರೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು, ವಿಜಯಪುರ, ಬಾಗಲಕೋಟೆ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಅಣಕು ಪ್ರದರ್ಶನ.
ಎರಡು ಜಿಲ್ಲೆಯ ಎಸ್ಪಿಗಳು ಖುದ್ದಾಗಿ ಸಾಕಷ್ಟು ಮಾರ್ಗದರ್ಶನ ನೀಡಿ ಅಣಕು ಪ್ರದರ್ಶನಕ್ಕೆ ಸಿಬ್ಬಂದಿಗಳನ್ನು ಸಜ್ಜುಗೊಳಿಸಿದರು.

ಆಲಮಟ್ಟಿಯ ಪೆಟ್ರೋಲ್ ಪಂಪ್ ಬಳಿಯ ಚೆಕ್ ಪೋಸ್ಟ್, ಡ್ಯಾಂ ಗೇಟ್, ರಾಕ್ ಗಾರ್ಡನ್, ಮುಖ್ಯ ಅಭಿಯಂತರರ ಕಚೇರಿ ಸೇರಿದಂತೆ ನಾನಾ ಕಡೆ ಉಗ್ರರು ದಾಳಿ ನಡೆಸಿದರು. ಆಗ ಪೊಲೀಸರು ಪ್ರತ್ಯುತ್ತರ ನೀಡಿದರು.

ವೈದ್ಯಕೀಯ ಸಿಬ್ಬಂದಿಯಿರುವ ಅಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಆಗಮಿಸಿ ಗಾಯಾಳುಗಳ ತುರ್ತು ಚಿಕಿತ್ಸೆಗೆ ಕ್ರಮ ಕೈಗೊಂಡರು. ಉಗ್ರರು ದಾಳಿ ನಡೆಸಿದಾಗ ನಾನಾ ಕಡೆಯಿಂದ ಆಗಮಿಸಿದ ವಿಶೇಷ ಪೊಲೀಸ್ ಪಡೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಅಣಕು ಪ್ರದರ್ಶನಗಳ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಅಣಕು ಪ್ರದರ್ಶನ ನಡೆಸಲಾಗಿದೆ.
ವಿಜಯಪುರ ಎಸ್ ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ನಾನಾ ವಿಧಗಳಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಯಿದೆ.
ಆ ಎಲ್ಲಾ ವಿಧಗಳಲ್ಲಿಯೂ ವಿವಿಧ ಇಲಾಖೆಯ ಯಾವ ರೀತಿಯ ಕಾರ್ಯನಿರ್ವಹಿಸಬೇಕು ಎಂಬುದನ್ನು ಯಶಸ್ವಿಯಾಗಿ ಅಣಕು ಪ್ರದರ್ಶನ ನಡೆಸಲಾಗಿದೆ. ಇದರಲ್ಲಿನ ಲೋಪದೋಷಗಳನ್ನು ಇನ್ನಷ್ಟು ಸರಿಪಡಿಸಿ ಮತ್ತೇ ಮತ್ತೇ ಅಣಕು ಪ್ರದರ್ಶನ ನಡೆಸಲಾಗುವುದು ಎಂದರು.
ಬಾಗಲಕೋಟೆಯ ಜಿಲ್ಲಾಧಿಕಾರಿ ಜಾನಕಿ, ಎಸ್ ಪಿ ಅಮರನಾಥ ರೆಡ್ಡಿ, ಎಸ್.ವಿ. ಹಿರೇಗೌಡರ, ತಾರಾಸಿಂಗ್ ದೊಡಮನಿ, ಪ್ರಸನ್ನ ದೇಸಾಯಿ, ಬಲ್ಲಪ್ಪ ನಂದಗಾವಿ, ಅಶೋಕ್ ಚೌಹಾನ್, ಪ್ರಶಾಂತ ಪವರ್,ಮತ್ತೀತರ ಹಿರಿಯ ಅಧಿಕಾರಿಗಳು ಇದ್ದರು.

ವರದಿ:ಅಲಿ ಮಕಾನದಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!