Ad imageAd image

ನಮಗೆ ಅಂಬೇಡ್ಜರ ಬಿಟ್ಟರೆ ಯಾರು ಶ್ರೇಷ್ಟ,ಅಲ್ಲ ಅವರು ನಮಗೆ ಸಿಕ್ಕಿದ್ದೆ ಶ್ರೇಷ್ಟ ಸಚಿವ ಸತೀಶ ಜಾರಕಿಹೋಳಿ

Bharath Vaibhav
ನಮಗೆ ಅಂಬೇಡ್ಜರ ಬಿಟ್ಟರೆ ಯಾರು ಶ್ರೇಷ್ಟ,ಅಲ್ಲ ಅವರು ನಮಗೆ ಸಿಕ್ಕಿದ್ದೆ ಶ್ರೇಷ್ಟ ಸಚಿವ ಸತೀಶ ಜಾರಕಿಹೋಳಿ
WhatsApp Group Join Now
Telegram Group Join Now

ಗೋಕಾಕ : ಯಾರೊ ಬಂದು ಇನ್ಮೊಬ್ಬರು ಶ್ರೇಷ್ಟ ಅಂತಾರೆ ನಮಗೆ ಅಂಬೇಡ್ಜರ ಬಿಟ್ಟರೆ ಯಾರು ಶ್ರೇಷ್ಟ,ಅವರೆ ಶ್ರೇಷ್ಟ, ಅವರು ಸಿಕ್ಕಿದ್ದೆ ಶ್ರೇಷ್,ಬಸವಣ, ಮಹಾತ್ಮೆ ಪುಲೆ,ಸಾವಿತ್ರಿ ಬಾಯಿ ಪುಲೆ, ನಾರಾಯಣಗುರು, ಪೇರಿಯಾರ ನಾರಾಯಣಸ್ವಾಮಿ ಶ್ರೇಷ್ಟ ರಿದ್ದಾರೆ,

ಬಾಬಾಸಾಹೇಬರು ಕೊಟ್ಟಂತಹ ಸಂವಿಧಾನದಿಂದ ನಮಗೆ ನೌಕರಿ ಬಂದಿವೆ, ರಾಜಕಾರಣಿಗಳಾಗಿದ್ದೇವೆ, ನಮಗೆ ಮಾತಾಡುವ ಸ್ವಾತಂತ್ರ್ಯವನ್ನು ಅಂಬೇಡ್ಜರ ಅವರು ಕೊಟ್ಟಿದ್ದನ್ನು ಯಾವತ್ತು ಮರೆಯಾಬಾರದೆಂದು

ಗೋಕಾಕದ ಆಶ್ರಯ ಬಡಾವಣೆಯಲ್ಲಿ ನಡೆದ ಡಾ: ಬಿ,ಆರ್,ಅಂಬೇಡ್ಕರ ಜಯಂತಿಯಲ್ಲಿ ಬಾಬಾಸಾಹೇಬರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸನ್ಮಾನ ಸ್ವಿಕರಿಸಿ ಲೊಕೊಪಯೋಗಿ ಸಚಿವ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೋಳಿ ಜಯಂತಿ ಉದ್ದೇಶಿಸಿ ಮಾತನಾಡಿದರು.

ಬರುವಂತ ಮಕ್ಕಳು ಶಿಕ್ಷಣ ಜೊತೆ ಅಂಬೇಡ್ಕರ ಅವರನ್ನು ಅರ್ಪಣೆ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಬಹಳ ಕಷ್ಟ ದಿನಗಳನ್ನು ನೋಡಬೇಕಾಗುತ್ತದೆ,

ಅಂಬೇಡ್ಕರ್ ಅವರ ವಿಚಾರಗಳನ್ನು ಮನೆಮನೆಗೂ ತಿಳಿಸಬೇಕೆಂದು ಹೊರಾಟ ಮಾಡುತಿದ್ದೇವೆ, ಅದರ ಪ್ರತಿಫಲ ರಾಜ್ಯದ ಮೂಲೆ ಅಂಬೇಡ್ಕರ, ಬಸವಣ್ಣ, ಬುದ್ದನ ವಿಚಾರಗಲಕನ್ನು ಮೂಲೆಗಳಲ್ಲಿ ಮಾನವ ಬಂದುತ್ವ ವೇದಿಕೆ ಮುಖಾಂತರ ವಿಚಾರಗಳನ್ನು ತಿಳಿಸುತಿದ್ದೇವೆಂದು ಹೇಳಿ ಸರ್ವರಿಗೂ ಜಯಂತಿಯ ಶುಭಾಶಯ ಕೊರಿದರು.

ಈ ಸಂದರ್ಭದಲ್ಲಿ ಸ್ಥಳಿಯ ದಲಿತ ಮುಖಂಡರಾದ ಶೆಟ್ಟೆಪ್ಪಾ ಮೇಸ್ತ್ರಿ, ರಫೀಕ ಭೋಕರೆ, ಶ್ರೀಮತಿ ಕಮಲಾ ಕರೆಮನ್ನವರ, ರಮೇಶ ಮೇಸ್ತ್ರಿ ರಮೇಶ ಮಾದರ, ಯಮನೇಜರ ಕರಬನ್ನವರ ಸೇರಿದಂತೆ ನೂರಾರು ಯುವಕರು ಉಪಸ್ಥಿತರಿದ್ದರು. ಇನ್ನು ಈ ಸಂದರ್ಭದಲ್ಲಿ ದಲಿತ ಸಂಘಟನೆಯಿಂದ ಮದ್ಯಾನ್ಹದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಮನೋಹರ ಮೇಗೇರಿ

WhatsApp Group Join Now
Telegram Group Join Now
Share This Article
error: Content is protected !!