
ಖ್ಯಾತ ನಟಿ, ಗಾಯಕಿ ಪದ್ಮಿಣಿ ಕೊಲ್ಹಾಪುರೆ ಹಿಂದಿ ಚಲನಚಿತ್ರಗಳಲ್ಲಿ ಮಿಂಚಿದವರು. ಅವರು ಗಾಯಕಿಯಾಗಿ, ನಟಿಯಾಗಿ ಯಶಸ್ವಿಯಾಗಿದ್ದರು. ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ಬಾಲ್ಯದಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶಕರ ಅವರೊಂದಿಗೆ ಬಾಲ ಗಾಯಕಿಯಾಗಿ ಕೆಲಸ ಮಾಡಿದ ಪದ್ಮಿಣಿ ಕೊಲ್ಹಾಪುರೆ ಅವರ ಸಂಗೀತ ಪ್ರತಿಭೆ ಕುಟುಂಬದಲ್ಲಿ ಸಾಂಗವಾಗಿ ಸಾಗಿತ್ತು. ನಂತರ ಅವರು ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟು, ಖ್ಯಾತ ನಟಿಯೂ ಆಗಿ ಮಿಂಚಿದ್ದ ಪದ್ಮಿಣಿ ಕೊಲ್ಹಾಪುರೆ ಅವರು ಇದೀಗ ಅಭಿಮಾನಿಗಳ ಕೊರತೆ ಅನುಭವಿಸುತ್ತಿದ್ದಾರಂತೆ.





