ಭೋಪಾಲ್ : ಪ್ರೀತಿ ಹೆಸ್ರಲ್ಲಿ ಮರ್ಡರ್ ಗಳು. ದಿನಕಳೆದಂತೆ ಹೆಚ್ಚಾಗುತ್ತಿದ್ದು, ಮಧ್ಯ ಪ್ರದೇಶದಲ್ಲಿ ಯುವಕ ರಾಕ್ಷಸ ವರ್ತನೆ ತೋರಿ ಪ್ರಿಯತಮೆಯನ್ನು ಹತ್ಯೆ ಮಾಡಿದ್ದಾನೆ.
ಜೂನ್ 27 ರಂದು ನರಸಿಂಗಪುರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯೊಳಗೆ, 12ನೇ ತರಗತಿಯ ವಿದ್ಯಾರ್ಥಿನಿ ಸಂಧ್ಯಾ ಚೌಧರಿ (19) ಎಂಬ ಎಂಬಾಕೆಯನ್ನು ಅಭಿಷೇಕ್ ಕೋಶ್ಚಿ ಎಂಬಾತ ಭೀಕರವಾಗಿ ಕೊಲೆಗೈದಿದ್ದು, ಸಿಸಿಟಿವಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆರೋಪಿ ಅಭಿಷೇಕ್, ಮೊದಲು ಸಂಧ್ಯಾ ಮೇಲೆ ಹಲ್ಲೆ ನಡೆಸಿದ್ದಾನೆ. ಆ ಬಳಿಕ ಆಕೆಯ ಎದೆ ಮೇಲೆ ಹತ್ತಿ ಕೂತು ಕತ್ತು ಸೀಳಿ ಕೊಲೆಗೈದಿದ್ದಾನೆ. ಘಟನೆ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಯಾರು ಕೂಡ ಆಕೆಯ ನೆರವಿಗೆ ಧಾವಿಸಿಲ್ಲ.
ಆರೋಪಿ ಸುಮಾರು 10 ನಿಮಿಷ ಸಂಧ್ಯಾ ಮೇಲೆ ಹಿಗ್ಗಾಮುಗ್ಗಾವಾಗಿ ಹಲ್ಲೆ ಮಾಡಿದ್ದಾನೆ. ಆ ಬಳಿಕ ಕೊಲೆ ಮಾಡಿದ್ದಾನೆ. ಕೃತ್ಯ ನಡೆದ ಬಳಿಕ ತಾನೂ ಚಾಕುವಿನಿಂದ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.




