ಏಪ್ರಿಲ್ 26 ಕಾಶ್ಮೀರ್ ಬಂದ್ ಗೆ ಸಂಪೂರ್ಣ ಬೆಂಬಲ
ಸಿಂಧನೂರು : ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ನಡೆದ 27ಕ್ಕೂ ಹೆಚ್ಚು ನಾಗರಿಕರ ಹತ್ಯೆಯನ್ನು ಸೆಂಟರ್ ಆಫ್ ಇಂಡಿಯಾ ಕೇಂದ್ರ ಸಮಿತಿ ತೀವ್ರವಾಗಿ ಖಂಡಿಸಿದೆ
ಜೊತೆಗೆ ಸಂತ್ರಸ್ತ ಕುಟುಂಬಗಳಿಗೆ ಹೃದಯಪೂರ್ವಕ ಮತ್ತು ಆಪ್ತ ಸಂತಾಪವನ್ನು ಪ್ರಕಟಿಸಿದೆ.
ಕಣಿವೆ ರಾಜ್ಯದಲ್ಲಿ ಕಲಂ 370 ಹಾಗೂ ಅತ್ಯಾಧುನಿಕ ಸೈನಿಕ ಶಕ್ತಿಯ ಬಳಕೆಯ ಮೂಲಕ ಶಾಂತಿ ಸ್ಥಾಪಿಸಲಾಗಿದೆ ಎಂಬ ಮೋದಿ ಸರ್ಕಾರದ ವಾಗ್ದಾನ ಸುಳ್ಳಾಗಿದೆ. ಪ್ರತಿ ಹದಿನೈದು ಜನ ನಾಗರಿಕರಿಗೆ ಒಬ್ಬ ಸೈನಿಕ ಅಲ್ಲಿದ್ದಾನೆ. ಅದನ್ನು ಅತ್ತ್ಯುನ್ನತ ಸುರಕ್ಷಿತ ತಾಣವೆಂದು ಸರಕಾರ ನಿರ್ವಹಿಸುತ್ತಿದೆ. ಹೀಗಿದ್ದಾಗಲೂ, ಭಯೋತ್ಪಾದಕರ ಈ ದಾಳಿಯು ಅತ್ಯಂತ ಮತ್ತೊಂದು ಪುಲ್ವಾಮ ಏಕಾಗಿರಬಾರದು ಎಂಬ ಸಂದೇಹ ಉಂಟಾಗಿದೆ.
ಆದ್ದರಿಂದ, ಕೇಂದ್ರ ಸರ್ಕಾರವು ಕಾಶ್ಮೀರದ ಜನರ ವಿಶ್ವಾಸ ಹಾಗೂ ಸಹಭಾಗಿತ್ವವಿಲ್ಲದೆ, ಕೇವಲ ಸೈನಿಕ ಬಲದಿಂದ ಭಯೋತ್ಪಾದನೆಯ ಹುಟ್ಟಡಗಿಸಲು ಸಾಧ್ಯವಿಲ್ಲ.
ಇಂದು ಕಣಿವೆ ರಾಜ್ಯಗಳಲ್ಲಿ ಕರೆ ನೀಡಲಾದ ಬಂದಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಟಿಯುಸಿಐ, ಅಲ್ಲಿನ ಜನರ ಸಂಪೂರ್ಣ ಬೆಂಬಲದೊಂದಿಗೆ ಶಾಂತಿ ಸ್ಥಾಪನೆಗೆ ಮುಂದಾಗಬೇಕೆಂದು ಈ ಮೂಲಕ ಆಗ್ರಹಿಸುತ್ತದೆ ಎಂದು ಆರ್. ಮಾನಸಯ್ಯ ಪ್ರಧಾನ ಕಾರ್ಯದರ್ಶಿ ಟಿ ಯು ಸಿ ಎ ಕೇಂದ್ರ ಸಮಿತಿ ನವದೆಹಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಬಸವರಾಜ ಬುಕ್ಕನಹಟ್ಟಿ