ಪಲ್ಲೇಕೆಲೆ (ಶ್ರೀಲಂಕಾ): ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯ ಸೂಪರ್-೮ ರ ಮತ್ತೊಂದು ಮಹತ್ವದ ಪಂದ್ಯದಲ್ಲಿ ಇಂದು ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.
ಪಲ್ಲೇಕೆಲೆ ಅಂತಾರಾಷ್ಟಿçÃಯ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ಸೆಮಿಫೈನಲ್‌ಗೆ ತಲುಪಲಿದೆ. ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಇಂಗ್ಲೆAಡ್ ಗೆದ್ದಿದ್ದರಿಂದ ಪಾಕಿಸ್ತಾನಕ್ಕೆ ಹಾದಿ ಸುಗಮವಾಗಿದ್ದು, ಇಂದಿನ ಪಂದ್ಯದಲ್ಲಿ ಗೆದ್ದರೆ ಅದು ಸೆಮಿಫೈನಲ್‌ಗೆ ಪ್ರವೇಶ ಮಾಡಲಿದೆ.
ಈ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ಗೆದ್ದರೆ ಶ್ರೀಲಂಕಾಗೆ ಕೂಡ ಸೆಮಿಫೈನಲ್ ತಲುಪುವ ಅವಕಾಶಗಳು ಇವೆ. ಪಂದ್ಯ ಸಾಯಂಕಾಲ ೭ ಕ್ಕೆ ಆರಂಭವಾಗಲಿದೆ.




